ಧಾರವಾಡ: ದತ್ತಿ ಉಪನ್ಯಾಸ
ಧಾರವಾಡ,ಮಾ30: ರಂಗಭೂಮಿಯ ಸಾಕ್ಷಿಪ್ರಜ್ಞೆಯಂತಿದ್ದ ನಾಡೋಜ ಏಣಗಿ ಬಾಳಪ್ಪನವರು ಜಗಜ್ಯೋತಿ ಬಸವೇಶ್ವರನ ನಾಟಕದ ಮೂಲಕ ನಾಡಿಗೆ ಬಸವಣ್ಣನನ್ನು ಪರಿಚಯಿಸಿದರು ಎಂದು ಹಿರಿಯ ಸಾಹಿತಿ, ವಿಮರ್ಶಕ ಡಾ. ವೀರಣ್ಣರಾಜೂರ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ನಾಡೋಜ ಡಾ.ಏಣಗಿ ಬಾಳಪ್ಪ ಸ್ಮರಣಾರ್ಥದತ್ತಿ ಅಂಗವಾಗಿ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ, ದತ್ತಿ ಉಪನ್ಯಾಸ ಹಾಗೂ ರಂಗಗೌರವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಏಣಗಿ ಬಾಳಪ್ಪನವರು ತಮ್ಮಕಲಾವೈಭವ ನಾಟ್ಯ ಸಂಘವನ್ನು 1947 ರಲ್ಲಿ ಹುಟ್ಟು ಹಾಕಿ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಅನೇಕ ಪ್ರದರ್ಶನಗಳು ಕಾಣುವಂತೆ ಮಾಡಿದರು.ಈ ನಾಟಕಅವರಿಗೆ ಹೆಚ್ಚು ಆರ್ಥಿಕದೃಢತೆಯನ್ನುಜನಮನ್ನಣೆಯನ್ನುತಂದುಕೊಟ್ಟಿತು.ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠಕ್ಕೆಒಂದು ಲಕ್ಷ ರೂಪಾಯಿಗಳನ್ನು ಜಗಜ್ಯೋತಿ ಬಸವೇಶ್ವರ ನಾಟಕವಾಡಿ ಹಣ ಸಂಗ್ರಹಿಸಿ ನೀಡಿದರು.ವೃತ್ತಿರಂಗಭೂಮಿಯ ವೈಭವಇಂದುಇಲ್ಲದಾಗಿದೆ. ಕೇವಲ ಕೆಲವೇ ವೃತ್ತಿರಂಗಭೂಮಿಯ ನಾಟಕ ಕಂಪನಿಗಳು ಉಳಿದಿವೆ. ಆದರೆರಂಗಭೂಮಿಗೆಎಂದೂ ಅಳಿವಿಲ್ಲ. ಅದಕ್ಕೆತನ್ನದೆಆದಂತಹ ಶಕ್ತಿ ಇದ್ದು ಸದಾಜೀವಂತವಾಗಿರುತ್ತದೆ
1961 ರಲ್ಲಿಆರಂಭವಾದ ವಿಶ್ವರಂಗಭೂಮಿ ದಿನಾಚರಣೆಯಆಶಯವೇನೆಂದರೆರಂಗಭೂಮಿಯನ್ನುಉತ್ತೇಜಿಸುವುದು, ಉಳಿಸುವುದು ಬೆಳೆಸುವುದು, ಕ್ರೀಯಾಶೀಲಗೊಳಿಸುವುದಾಗಿದೆ.ಪ್ರತಿ ವರ್ಷಜಗತ್ತಿನಒಬ್ಬರಂಗಕಲಾವಿದನಿಂದಒಂದು ಸಂದೇಶವನ್ನು ನೀಡುತ್ತಾ ಬರಲಾಗಿದೆ.ಈ ವರ್ಷ ನಾರ್ವೆಯರಂಗಕಲಾವಿದ `ಜಾನ್‍ಬಾಷ್’ ಒಂದು ಸಂದೇಶ ವಿಶ್ವರಂಗಭೂಮಿ ದಿನಾಚರಣೆಗಾಗಿ ನೀಡಿರುವರು.ಕಲೆ, ಕಲಾವಿದರು ಶಾಂತಿ ಹೆಸರಿನಲ್ಲಿಜಗತ್ತಿನಜೀವ ರಾಶಿಗಳು ಒಂದೇ.ಯಾವ ವರ್ಗಕ್ಕೆ ಅಂಟಿಕೊಳ್ಳದೇ ರಂಗಭೂಮಿ ಮೂಲಕ ಬದುಕೋಣಎಂದಿದ್ದಾರೆ.
ವೃತ್ತಿರಂಗಭೂಮಿ ಕಂಪನಿಗಳ ಬಗ್ಗೆ, ಕಲಾವಿದರ ಬಗ್ಗೆ ಅಧ್ಯಯನ ಮಾಡುವ ವಸ್ತುವೇ ಅಲ್ಲ ಎಂಬ ಕಾಲವಿತ್ತು.ಇಂದು ಅವುಗಳ ಅಧ್ಯಯನ ಮಾಡಿ ನಾಟಕ ಕಂಪನಿಗಳ ಇತಿಹಾಸವನ್ನು ಹಲವರುಕಟ್ಟಿಕೊಟ್ಟಿರುವರು.
ವಾಮನರಾವ್ ಮಾಸ್ತರ ಮೊಟ್ಟಮೊದಲು ಸಂಗೀತ ನಾಟಕವೆಂದು ಪ್ರಾರಂಭಿಸಿದರು.ಕಂದಗಲ್ ಹಣಮಂತರಾಯರ ನಾಟಕಗಳು ಬಂದ ನಂತರ ನಿಂತು ಡೈಲಾಗ್‍ಗಳನ್ನು ಹೇಳುವುದು ಬಂದಿತು.ಉತ್ತರಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ವೃತ್ತಿ ಕಂಪನಿ ನಾಟಕಗಳು ಇದ್ದವು.ಕಾಲ ಬದಲಾದಂತೆ ವ್ಯಕ್ತಿಯ ಅಭಿರುಚಿಗಳು ಬದಲಾಗುತ್ತಾ ಬಂದವು.ಅಂದಿನ ವೃತ್ತಿರಂಗಭೂಮಿ ವೈಭವ ಮರಳಿ ತರಲು ಆಗುವುದಿಲ್ಲ. ಆದರೆ ಉಳಿಸಿಕೊಳ್ಳುವ ಕೆಲಸ ಆಗಬೇಕು ಎಂದರು.