ಛಾಯಾಗ್ರಾಹಕರು ಕಾರ್ಮಿಕ ಇಲಾಖೆ ಯೋಜನೆಗೆ ಅರ್ಹರು: ರಮೇಶ ಸುಂಬಡ
ಸಂಜೆವಾಣಿ ವಾರ್ತೆ.
ವಿಜಯಪುರ,ಸೆ.೧೯- ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿ ನೂತನವಾಗಿ ಅಸಂಘಟಿತ ಕಾರ್ಮಿಕರಾಗಿ ಸೇರ್ಪಡೆಗೊಂಡ ಛಾಯಾಗ್ರಾಹಕರಿಗೆ ನೋಂದಣಿ ಮತ್ತು ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ನೂತನವಾಗಿ ೧೮ ಅಸಂಘಟಿತ ಕಾರ್ಮಿಕರ ಜೊತೆಯಲ್ಲಿ ಛಾಯಾಗ್ರ‍್ರಾಹಕರನ್ನು ಸೇರ್ಪಡೆ ಮಾಡಲಾಗಿದೆ. ಕಾರಣ ಛಾಯಾಗ್ರಾಹಕರು ಈ ಯೋಜನೆಯ ಪ್ರಯೋಜನ ಪಡೆಯಲು ಎಲ್ಲರೂ ಕಡ್ಡಾಯವಾಗಿ ನೋದಣಿ ಮಾಡಬೇಕು. ಬಹುಮುಖ್ಯವಾಗಿ ಈ ನೋಂದಣಿ ಕಾರ್ಯ ಯಶಸ್ವಿಯಾಗಲು ಎಲ್ಲರು ಸಂಘಟಿತರಾಗಲು ಜಿಲ್ಲಾ ಛಾಯಾಗ್ರಾಕರ ಸಂಘದ ಸದಸ್ಯರಾಗಬೇಕು. ಕರ್ನಾಟಕ ಛಾಯಾಗ್ರಹಕ ಸಂಘದ ಅಧ್ಯಕ್ಷರು ಮತು ಎಲ್ಲ ಜಿಲ್ಲಾ ಸಂಘದ ಮನವಿಯ ಹಿನ್ನಲೆಯಲ್ಲಿ ಕಾರ್ಮಿಕ ಸಚಿವÀ ಸಂತೋಷ ಲಾಡ ಅವರು ಆಸಕ್ತಿಯಿಂದ ಛಾಯಾಗ್ರಾಹಕರನ್ನು ಕಾರ್ಮಿಕರ ಇಲಾಖೆಯಲ್ಲಿ ಸೇರ್ಪಡೆ ಮಾಡಿದ್ದಾರೆ. ಸಂಘ ಮತ್ತು ಸಂಘಟನೆಯ ಬಲದಿಂದ ಎಲ್ಲರೂ ಈ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೆಕು. ಇದರ ಜೊತೆಯಲ್ಲಿ ಇಲಾಖೆಯ ಎಲ್ಲ ಯೋಜನೆಗಳ ಲಾಭ ಪಡೆಯಬೇಕೆಂದರು. ಈ ಯೋಜನೆಗೆ ನೋಂದಣಿ ಮಾಡಿಸಲು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷÀ ರಮೇಶ ಚವ್ಹಾಣ ಅವರು ಎಲ್ಲ ಛಾಯಾಗ್ರಾಹಕ ಸದಸ್ಯರನ್ನು ಸೇರಿಸಿ ಈ ನೋಂದಣಿ ಶಿಬಿರ ಆಯೋಜನೆ ಮಾಡಿದ್ದಾರೆ. ಅವರಿಗೆ ಇಲಾಖೆಯಿಂದ ಕೃತಜ್ಞತೆ ಸಲ್ಲಿಸುತ್ತ ಜಿಲ್ಲೆಯಲ್ಲಿ ಅತಿ ಹೆಚ್ಚಿನ ನೋಂದಣಿ ನಿಮ್ಮ ಸಂಘದಿAದಾಗಲಿ ಎಂದು ಶುಭ ಹಾರೈಸಿದರು.
ವಿಜಯಪುರ ಎರಡನೇ ವೃತ್ತದ ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕೋವಿಡ ಕಾಲದಲ್ಲಿ ಅತಿಹೆಚ್ಚು ಜನ ಕಾರ್ಮಿಕರಿಗೆ ಆಸರೆಯಾಗಿ ಇಲಾಖೆ ಕೆಲಸ ಮಾಡಿದೆ. ಆಗ ಛಾಯಾಗ್ರಾಹಕರು ನಮ್ಮ ಇಲಾಖೆಯಲ್ಲಿ ಸೇರಲು ಅವಕಾಶವಿರಲಿಲ್ಲ ಈಗ ಸರಕಾರ ಈ ಅವಕಾಶ ಒದಗಿಸಿದೆ ಎಂದರು.
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿಯವರೆಗೆ ಛಾಯಾಗ್ರಾಹಕರನ್ನು ಸರಕಾರ ಯಾವ ಇಲಾಖೆಯಲ್ಲಿಯೂ ಸೇರಿಸಿರಲಿಲ್ಲ. ಈಗ ಎಲ್ಲ ಜಿಲ್ಲೆಯ ಮತ್ತು ಕರ್ನಾಟಕ ಛಾಯಾಗ್ರಾಹಕರ ಸಂಘದ ಒತ್ತಾಯಕ್ಕೆ ಮತ್ತು ಕಾರ್ಮಿಕ ಸಚಿವರ ಆಸಕ್ತಿಯಿಂದ ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರು ಎಂದು ಸೇರ್ಪಡೆಗೊಳಿಸಿದ್ದಾರೆ. ಎಲ್ಲ ಛಾಯಾಗ್ರಾಹಕರು ಸಂಘದಲ್ಲಿ ಸದಸ್ಯತ್ವ ಪಡೆದು ಕಾರ್ಮಿಕ ಇಲಾಖೆಯ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ವಿಜಯಪುರ ಒಂದನೇ ವೃತ್ತದ ಕಾರ್ಮಿಕ ನಿರೀಕ್ಷಕÀ ಮಲ್ಲಿಕಾರ್ಜುನ, ಅನೀಲ ರಾಠೋಡ, ಇಂಡಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷÀ ಸಿದ್ದು ಕುದುರಿ, ಜಿಲ್ಲಾ ಸಂಘದ ಖಜಾಂಚಿÀ ಸುರೇಶ ರಾಠೋಡ ವೇದಿಕೆ ಮೇಲಿದ್ದರು.
ನೋಂದಣಿ ಶಿಬಿರದಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳಾದ ಸತೀಶ ಕಲಾಲ, ಪ್ರಶಾಂತ ಪಟ್ಟಣಶೆಟ್ಟಿ, ರಾಜುಸಿಂಗ್ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ ಕುಂಬಾರ, ಛಾಯಾಗ್ರಾಹಕರಾದ ಗೌಡಪ್ಪಗೌಡ ಬಿರಾದಾರ, ಸುಗೂರೇಶ ಗುಲ್ಫಿ, ಅನಂತ ಭೋಸಲೆ, ಸುಭಾಷÀ ಪವಾರ, ಸದಾಶಿವ ಘೋರ್ಪಡೆ, ಗಣೇಶ ಶಿಂಧೆ, ಸುನೀಲಗೌಡ ಬಿರಾದಾರ, ಚಂದ್ರಕಾAತ ವಡ್ಡರ, ಪ್ರಭಾಕರ ಅರಕೇರಿ, ಶಶಿ ಕುಂಬಾರ, ವಿಜಯ ಮೈದರಗಿ, ಸಂಜು ಕಾಜಗಾರ, ವಿಠ್ಠಲ ಗುಜ್ಜರ, ಚಂದ್ರು ಕಬಾಡೆ, ರೋಹಿತ ಬಳಿಗಾರ, ಮಲ್ಲಿಕಾರ್ಜುನ ಚಕ್ರವರ್ತಿ; ವಿನೋದ ವಡ್ಡರ, ಶ್ರೀಕಾಂತ ವಡ್ಡರ, ದೇಸು ಚವ್ಹಾಣ, ಪ್ರವೀಣ ಮಠ, ಮಹಾಂತೇಶ ಹುಣಸಗಿ, ಸಂತೋಷ ಕಾಳೆ ಮುಂತಾದವರು ಉಪಸ್ಥಿತರಿದ್ದರು.