ಬುದ್ಧನ ಮಾರ್ಗದಲ್ಲಿ ಅಂಬೇಡ್ಕರ್ ಕನಸು ನನಸಾಗಿಸಿ: ಧಮ್ಮಾಚಾರಿ
ಆಳಂದ: ಸೆ.೧೯:ಮಹಾತ್ಮಗೌತಮ ಬುದ್ಧರು ಹಾಕಿಕೊಟ್ಟು ಮಾರ್ಗದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಂಡ ಕನಸು ನನಸಾಗಿಸಲು ಶ್ರಮಿಸಬೇಕು ಎಂದು ಅಕೋಲ್ಲಾದ ಧಮ್ಮಚಾರಿ ಪ್ರಜ್ಞಾಜೀತ್ ಅವರು ಹೇಳಿದರು.
ತಾಲೂಕಿನ ಬಂಗರಗಾ ಗ್ರಾಮದಲ್ಲಿ ಭೀಮಶಕ್ತಿ ಯುವಕ ಸಂಘÀವನ್ನು ಉದ್ಘಾಟನೆ ನೆರವೇರಿ ಅವರು ಮಾತನಾಡಿದರು.
ಶೋಷಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಮಹಾಪುರುಷರ ಕನಸುಗಳು ಈಡೇರಿಸಲು ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿದ್ದು, ಶಿಕ್ಷಣ, ಸಂಘಟನೆ ಮತ್ತು ನ್ಯಾಯಬದ್ಧ ಹಕ್ಕಿನ ಹೋರಾಟಕ್ಕಾಗಿ ಕೈಜೋಡಿಸಿ ಜಾಗೃತಿ ತಂದುಕೊAಡು ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕು. ಅಭಿವೃದ್ಧಿಗಾಗಿ ಕಟ್ಟಿಕೊಂಡ ಸಂಘವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಪ್ರಮಾಣಿಕತೆ ಸೇವಾ ಭಾವದೊಂದಿಗೆ ಸಾಗಲಿ ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಎಚ್. ಶರಣಬಸಪ್ಪಾ ವಿಭೂತಿ ಮತ್ತು ಪ್ರಾಸ್ತಾವಿಕವಾಗಿ ಭೀಮಶಕ್ತಿ ಸಂಘದ ಅಧ್ಯಕ್ಷ ಅಮರನಾಥ ಜೋಶಿ ಮಾತನಾಡಿದರು.
ಸಮಾರಂಭದ ವೇದಿಕೆಯಲ್ಲಿ ಭೀಮಶಕ್ತಿ ಸಂಘದ ಉಪಾಧ್ಯಕ್ಷ ಪ್ರಕಾಶ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಆಕಾಶ ವಾಘ್ಮೋರೆ, ಕಾರ್ಯದರ್ಶಿ ಪ್ರಕಾಶ ಜೋಶಿ ಖಜಾಂಚಿ ಮಿಲಿಂದ ಸಿಂಗೆ, ಸಲಹ ಸಮಿತಿ ಅಧ್ಯಕ್ಷ ನಾಮದೇವ ವಾಘ್ಮಾರೆ, ಸದಸ್ಯ ಶ್ರೀಕಾಂತ ಸಿಂಗೆ, ವಿಶ್ವನಾಥ ಶಖಾಪೂರೆ ಮತ್ತು ಅತಿಥಿಗಳಾಗಿ ಆಗಮಿಸಿದ್ದ ಪ್ರಕಾಶ ಬೆಳಮಗಿ, ಕಾರ್ಥಿಕ ಚಿಂಚೂರೆ, ಗೋಪಿನಾಥ ಕಾಂಬಳೆ, ವಿನೋಧ ಸಿಂಗೆ, ಜೀವನ ವಾಘ್ಮೀರೆ, ವಿಶಾಲ ವಾಘ್ಮೋರೆ, ಮಂಜುನಾಥ ಕಾಂಬಳೆ, ಸುನಿಲ ಕಾಂಬಳೆ, ಗೌತಮ ಜೋಶಿ, ಅಜಯ ಬಂಡೆ, ಶಶಿಕಾಂತ ವಿಭೂತೆ ಸೇರಿದಂತೆ ಯುವಕರು ಮಹಿಳೆಯರು ಉಪಸ್ಥಿತರಿದ್ದರು.
ಧಮ್ಮಮಿತ್ರ ಪ್ರೇಮನಾಥ ಜೋಶಿ ನಿರೂಪಿಸಿದರು. ಶ್ರೀಮಂತ ಕಲಕೇರಿ ಸ್ವಾಗತಿಸಿದರು.