ಪುಟ್ಬಾಲ್ ಪಂದ್ಯಾವಳಿ : ರಾಜ್ಯ ಮಟ್ಟಕ್ಕೆ ಆಯ್ಕೆ
ಅಥಣಿ :ಸೆ.೧೯: ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಬಾಲಕಿಯರ ಪುಟ್ಬಾಲ್ ಪಂದ್ಯಾವಳಿಗಳು ದಿ.೧೮ರಂದು ಸಂಕೇಶ್ವರದ ಎಸ್ ಡಿ ವ್ಹಿ ಎಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದವು.
ಈ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಅಥಣಿಯ ಜೆ ಎ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಲಕ್ಷ್ಮೀ ಗುರವ, ಉಜ್ವಲಾ ಯಾದವ, ಸಂಜನಾ ಜಾಧವ್, ರೇಣುಕಾ ಅಪ್ಪಾಜಿ, ಗಾಯತ್ರಿ ಚೌಗಲಾ ಇವರು ಅತ್ಯುತ್ತಮ ಪ್ರದರ್ಶನ ನೀಡಿ ದ್ವೀತಿಯ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಜೆ.ಎ. ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ರಾಮ ಕುಲಕರ್ಣಿ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಚಾರ್ಯರರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.