ನಿಷ್ಠಾವಂತನಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ ಶಾಸಕ ದರ್ಶನ ಧ್ರುವ
ಸಂಜೆವಾಣಿ ವಾರ್ತೆ
ನಂಜನಗೂಡು.ಸೆ.19:-ನಂಜನಗೂಡು ನಿಷ್ಠಾವಂತನಾಗಿ ಪ್ರಾಮಾಣಿಕತೆಯಿಂದ ಕ್ಷೇತ್ರದ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾ ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಹೆದ್ದಾರಿ ಯೋಜನೆಯಡಿ ಲೋಕೋಪಯೋಗಿ ಇಲಾಖೆ ವತಿಯಿಂದ ಹುಲ್ಲಹಳ್ಳಿಯಿಂದ ಕಾರ್ಯ – ಮಾದಪುರ ಮಾರ್ಗವಾಗಿ ದುಗ್ಗಹಳ್ಳಿ ಗೇಟ್ ವರೆಗೆ ನೂತನ ರಸ್ತೆ ಅಭಿವೃದ್ಧಿ ಕಾಮಗಾರಿಗೆ 20 ಕೋಟಿ ರೂ ವೆಚ್ಚದಲ್ಲಿ ನಂಜನಗೂಡು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿ,
ಶಾಸಕರು ಮಾತನಾಡಿ ಕ್ಷೇತ್ರದಲ್ಲಿ ಅನುದಾನ ಇಲ್ಲ ಅಭಿವೃದ್ಧಿ ಆಗುತ್ತಿಲ್ಲ ಎಂದು ಎಂದು ಟೀಕೆ ಟಿಪ್ಪಣಿ ಕೇಳಿದ್ದೆ ಅದಕ್ಕೆ ಉತ್ತರ ಮಾತಿನಲ್ಲಿ ಕೊಡದೆ ಕೆಲಸ ಮಾಡಿ ತೋರಿಸುತ್ತಿದ್ದೇನೆ ಈ ರಸ್ತೆ ಹುಲ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಲು ಅತ್ಯವಶ್ಯಕವಾಗಿ ಬೇಕಾಗಿತ್ತು ಇದರ ಭೂಮಿ ಪೂಜೆಯನ್ನು ಇಂದು ನೆರವೇರಿಸಿದೇನೆ, ಮುಂದೆ ಒಳ್ಳೆಯ ರಸ್ತೆಯಾಗಿ ನಿರ್ಮಾಣವಾಗಿ ನಿಮ್ಮೆಲ್ಲರಿಗೂ ಅನುಕೂಲವಾಗಲಿದೆ. ವೇಗದಲ್ಲಿ ಅಚ್ಚುಕಟ್ಟಾಗಿ ಕೆಲಸ ಮುಗಿಸಿ ಉತ್ತಮ ರಸ್ತೆ ಮಾಡಬೇಕೆಂದು ಗುತ್ತೇದಾರರಿಗೆ ತಿಳಿಸಿದರು ಇದಲ್ಲದೆ ದೇವನೂರು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 90 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲು ಹಣ ಮಂಜೂರು ಮಾಡಿದ್ದಾರೆ ಕಳೆದ ವರ್ಷ ಬದನವಾಳು ಗಾಂಧಿ ಗ್ರಾಮಕ್ಕೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮ್ಮ ತಂದೆಯವರಾದ ಧ್ರುವನಾರಾಯಣ್ ಹಲವಾರು ಸಚಿವರು ಸಂಸದರು ಶಾಸಕರು ಭಾರತ್ ಜೋಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಮಹಾತ್ಮ ಗಾಂಧೀಜಿ ಬಂದು ಹೋಗಿರುವ ಸ್ಥಳ ಆದ್ದರಿಂದ ಇದನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಮಾತು ಕೊಟ್ಟಿದ್ದರು ಅದರಂತೆ 43 ಕೋಟಿ ವೆಚ್ಚದಲ್ಲಿ ಬದನವಾಳು ನಲ್ಲಿರುವ ಗಾಂಧಿ ಗ್ರಾಮ ಅಭಿವೃದ್ಧಿ ಮಾಡಲು ಪ್ರಸ್ತಾವನೆ ನೀಡಿದ್ದೇವೆ ಅಭಿವೃದ್ಧಿಪಡಿಸಲು ಮುಂದಾಗುತ್ತೇವೆ ಎಂದರು ಇದಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ವಿಶೇಷ ಅನುದಾನ 25 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಚರಂಡಿ ಇನ್ನಿತರ ಕಾಮಗಾರಿಗಳು ನಡೆದಿವೆ ಮುಂದಿನ ದಿನಗಳಲ್ಲಿ ಅಂತಂತವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ ನಿಮ್ಮೆಲ್ಲರ ಸಹಕಾರ ಬೇಕು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು ಯಾವ ಟೀಕೆ ಟಿಪ್ಪಣಿದು ಹೆದರದೆ ಅನುದಾನ ತಂದು ಉತ್ತಮ ಕೆಲಸ ಮಾಡುತ್ತೇನೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿದ್ದೇನೆ ಎಂದರು.
ಕಳದೆ ವಿಧಾನಸೌಧ ಅಧಿವೇಶನದಲ್ಲಿ ಹುಲ್ಲಹಳ್ಳಿ PWಆ ಇಲಾಖೆಗೆ ಸೇರಿದ ಜಾಗದಲ್ಲಿ ತುಂಬಾ ಶಿಥಿಲ ಗೊಂಡಿರುವ ಕಟ್ಟಡವನ್ನು ತೆರವುಗೊಳಿಸಿ, ನಮ್ಮ ಸಾರ್ವಜನಿಕರಿಗೆ ಉಪಯುಕ್ತ ಕಚೇರಿಗಳನ್ನು ತೆರೆದರೆ. ನಮ್ಮ ಹುಲ್ಲಹಳ್ಳಿಯ ಜನತೆಗೆ ತಾಲ್ಲೂಕಿನ ಅಧಿಕಾರಿಗಳು ಸಿಗುವಂತೆ ಆಗುತ್ತೆ, ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗುತ್ತದೆ ಎಂದು ಲೋಕೋಪಯೋಗಿ ಸಚಿವರಲ್ಲಿ ಮನವಿ ಮಾಡಿದೆ ಮುಂದೆ ಅ ಸ್ಥಳವನ್ನು ಉಪಯೋಗಕ್ಕೆ ಬರುವಂತೆ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವ ಮೂರ್ತಿ ಹುಲ್ಲಹಳ್ಳಿ ಗ್ರಾ. ಪಂ ಅಧ್ಯಕ್ಷರಾದ ದೇವಮ್ಮ ಗ್ರಾ. ಪಂ ಉಪಾಧ್ಯಕ್ಷರಾದ ಲೋಕೇಶ್ ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಂಠ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ಕೆಪಿಸಿಸಿ ಸದಸ್ಯರಾದ ಬಸವರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ಮಾರುತಿ ದುಗ್ಗಹಳ್ಳಿ ಗ್ರಾ. ಪಂ ಅಧ್ಯಕ್ಷರಾದ ಶಿವನಾಗಪ್ಪ ಹಡ್ಯಾ ಗ್ರಾ. ಪಂ ಅಧ್ಯಕ್ಷರಾದ ಹರೀಶ್ ಮುಖಂಡರಾದ ಮಾದಪ್ಪ, ಶಿವನಂಜನಾಯಕ ಅನ್ಸರ್ ಆಲಿ ರವರು, ಪ್ರತಾಪ್ ಮಡಿಕೆಹುಂಡಿ ಶಿವಣ್ಣ ರವರು, ಬಸವಣ್ಣ ಹರದನಹಳ್ಳಿ ಸೋಮೇಶ್ ಅಭಿನಂದನ್ ಸೇರಿದಂತೆ ಗ್ರಾ. ಪಂ ಸದಸ್ಯರುಗಳು, ಇಲಾಖೆಯ ಅಧಿಕಾರಿಗಳು ಮುಖಂಡರು, ಕಾರ್ಯಕರ್ತರು ಅಕ್ಕಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.