ಸಿಕ್ಯಾಬ್ ಲುಕ್ಮಾನ್ ಯುನಾನಿ ಕಾಲೇಜಿನ ಬಿಯುಎಂಎಸ್ ಅಂತಿಮ ವರ್ಷದ ಫಲಿತಾಂಶ ಶೇ. ೧೦೦
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೯:
ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ ಇತ್ತೀಚೆಗೆ ನಡೆಸಿದ ಬಿಯುಎಂಎಸ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿಜಯಪುರದ ಸಿಕ್ಯಾಬ್ ಸಂಸ್ಥೆಯ ಲುಕ್ಮಾನ್ ಯುನಾನಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಶೇ. ೧೦೦ರಷ್ಟು ಫಲಿತಾಂಶ ಪಡೆದಿದೆ.
ಪರೀಕ್ಷೆಗೆ ಕುಳಿತ ೫೭ ವಿದ್ಯಾರ್ಥಿಗಳ ಪೈಕಿ ೧೯ ಜನ ಡಿಸ್ಟಿಂಕ್ಷನ್, ೩೮ ಜನ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಅಬ್ದುಲಜಬ್ಬಾರ್ ಸಾಜಿದ್ ಶೇ. ೮೦.೮೬ರಷ್ಟು ಅಂಕಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಅಮನ್ ಶೇಖ್ ಶೇ.೮೦.೪೦ರಷ್ಟು ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ, ಕುಮಾರಿ ಅಲ್ ಸಬಾ ಗೋಲಂದಾಜ್ ಶೇ. ೮೦.೩೪ರಷ್ಟು ಅಂಕಪಡೆದು ಕಾಲೇಜಿಗೆ ತೃತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚಿ ಸಂಸ್ಥೆಯ ಅಧ್ಯಕ್ಷ ಎಸ್.ಎ. ಪುಣೇಕರ, ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ, ನಿರ್ದೇಶಕ ಸಲಾಹುದ್ದೀನ್ ಅಯೂಬಿ, ಡೀನ್ ಡಾ. ಅಕೀಲ್ ಖಾದ್ರಿ, ಪ್ರಾಚಾರ್ಯೆ ಡಾ. ಶಹನಾಝ ಬಾನು ಮತ್ತು ಕಾಲೇಜಿನ ಸಮಸ್ತ ಬೋಧಕ, ಬೋಧಕೇತರ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.