ಸಿಎಂಸಿ ಸಹಾಯವಾಣಿ ಆರಂಭ
ರಾಯಚೂರು, ಮಾ. ೩೦- ಸಾರ್ವಜನಿಕರು ಅಗತ್ಯ ಸೇವೆಗಳಿಗಾಗಿ ಸಹಾಯವಾಣಿ ಆರಂಭಿಸಿರುವುದಾಗಿ ನಗರ ಸಭೆ ಪೌರಾಯುಕ್ತ ಚಲಪತಿ ತಿಳಿಸಿದ್ದಾರೆ.
ರಾಯಚೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳಾದ ಸ್ಚಚ್ಛತೆ, (ನೈರ್ಮಲ್ಯಕರಣ), ಕುಡಿಯುವ ನೀರು, ವಿದ್ಯುತ್ ದೀಪ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ನಾಗರಿಕರಿಗೆ ಸಹಾಯವಾಣಿ (೦೮೫೩೨-೨೦೦೫೫೧) ಆರಂಭಿಸಲಾಗಿದೆ.
ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧.೩೦, ಮಧ್ಯಾಹ್ನ ೨.೧೫ ರಿಂದ ಸಾಯಂಕಾಲ ೬ ಗಂಟೆಗೆ ತಮ್ಮ ಸಮಯಗಳ ಕುರಿತು ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಿ, ಕಡ್ಡಾಯವಾಗಿ ಹೆಸರು, ವಾರ್ಡ್ ಸಂಖ್ಯೆ, ಬಡಾವಣೆ ವಿವರ, ತಮ್ಮ ಮೊಬೈಲ್ ನಂಬರ್ ಹಾಗೂ ಸಮಸ್ಯೆಯ ವಿವರಣೆಯನ್ನು ನೀಡಿದರೆ ಸಮಸ್ಯೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಚಲಪತಿ ಪ್ರಕಟಣೆಯಲ್ಲಿ ಕೋರಿದ್ದಾರೆ.