ಡಾ. ಗುರುಲಿಂಗ ಕಾಪಸೆ ಅವರಿಗೆ ನುಡಿನಮನ
ಧಾರವಾಡ,ಮಾ30: ಜೀವನ ಹೇಗೆ ನಡೆಸಬೇಕು ಎಂಬುದಕ್ಕೆ ನಿದರ್ಶನವಾಗುವಂತೆ ದೇವರು ಕಾಪಸೆಯವರನ್ನು ಇಟ್ಟಿದ್ದರು. ಅಪಾರ ಪಾಂಡಿತ್ಯ ಹೊರಗಿಂದ ಪಡೆದು ಜ್ಞಾನವನ್ನುಒಳಗಿನಿಂದ ಪಡೆದವರಾಗಿದ್ದರು.ಸಿದ್ದವಂತರು, ತತ್ಪರರಾಗಿದ್ದರು, ಜ್ಞಾನವಂತಾರಾಗಿದ್ದರು. ಎಲ್ಲಾ ದೈವಿ ಸಂಪತ್ತ ಗುಣಗಳನ್ನು ಹೊಂದಿದವರು ಕಾಪಸೆಯವರು. ಜ್ಞಾನಿಗಳು, ಅನುಭಾವಿಗಳು, ಪಂಡೀತರಾಗಿ ನಮ್ಮ ನಡುವೆ ಇದ್ದರು ಎಂಬುದೇ ನಮ್ಮ ಸುದೈವಎಂದು ಜಿ.ಸಿ. ತಲ್ಲೂರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ನಾಡೋಜಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ `ಹಿರಿಯ ಸಾಹಿತಿ, ಅನುಭಾವಿಗಳು ಮತ್ತುಕನ್ನಡ ಸಾಹಿತ್ಯಅಕಾಡೆಮಿಯ ಮಾಜಿಅಧ್ಯಕ್ಷಡಾ.ಗುರುಲಿಂಗ ಕಾಪಸೆ ಅವರಿಗೆ ನುಡಿ ನಮನದಲ್ಲಿ ಮಾತನಾಡುತ್ತಿದ್ದರು.
ನರಸಿಂಹ ಪರಾಂಜಪೆ ಕಾಪಸೆಯವರನ್ನು ಸ್ಮರಿಸುತ್ತಾ, ಅರಿವು ಅರಳಿ ಬಿಟ್ಟಿತ್ತು, ಸರಳ ಸಕ್ಜನಿಕೆಯ ಮೂರ್ತಿಯಾಗಿದ್ದ ಇವರು ಶಿಷ್ಯರಿಗೆ ಅಮೃತವನ್ನು ಉಣಿಸಿದ ಗುರುವಾಗಿದ್ದರು.ಅವರಿಗೆಅವರೇ ಪ್ರತಿಮೆಯಾಗಿದ್ದರು. ಜ್ಞಾನತೀರ್ಥ ಚಿಲುಮೆಯಾಗಿದ್ದರು ಎಂದರು.
ಶಾಮಸುಂದರ ಬಿದರಕುಂದಿ ಮಾತನಾಡುತ್ತಾ, ಕಾಪಸೆಯವರಜೀವನ ಸಂಕಲ್ಪದಜೀವನ. ಮಧುರಚೆನ್ನರುಅವರ ಗುರುಗಳು. ನಲವತ್ತು ವರ್ಷಗಳ ಕಾಲ ಧಾರವಾಡದಲ್ಲಿ ನಮ್ಮ ನಡುವೆಇದ್ದುಕೊಂಡು ಪಾಂಡಿತ್ಯದಆಗರವಾಗಿದ್ದರು.ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡಿದೆ. ಅವರ ಮಾರ್ಗ ಅಲೌಕಿಕ ಮಾರ್ಗವಾಗಿತ್ತು.ಕನ್ನಡಅಧ್ಯಯನಕ್ಕೆ ಬಹುದೊಡ್ಡಕೊಡುಗೆ ನೀಡಿದರು.ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಬೇಕುಂಬುದರ ಬಗ್ಗೆ ಪ್ರಬಂಧಗಳನ್ನು ಬರೆದರು.ಮಧುರಚೆನ್ನರುಇಟ್ಟ ಹೆಜ್ಜೆಯಲ್ಲಿಯೇಕಾಪಸೆಯವರು ನಡೆದರುಎಂದರು.
ನಿಂಗಣ್ಣಕುಂಟಿಮಾತನಾಡುತ್ತಾ, ದೇವರ ಪೂಜೆ ಮಾಡುವುದಕ್ಕಿಂತ, ಗುಡಿಗೆ ಹೋಗುವುದಕ್ಕಿಂತಕಲಿಕೆಯಲ್ಲಿಯೇಮಕ್ಕಳನ್ನು ಮೂರ್ತಿಗಳನ್ನಾಗಿ ಮಾಡಿದರೆ ಸಾಕು ಎಂಬ ಉದಾಹರಣೆಯೊಂದಿಗೆಕಾಪಸೆಯವರು ಮಾಸ್ತರಮಾದರಿಯಾಗಿರಬೇಕುಎಂದು ಹೇಳಿದ್ದನ್ನು ಸ್ಮರಿಸಿಕೊಂಡರು.
ಎಸ್.ಜಿ. ಪಾಟೀಲ ನುಡಿನಮನ ಸಲ್ಲಿಸುತ್ತಾಕಾಪಸೆಯವರ ಪ್ರೀತಿ, ವಾತ್ಸಲ್ಯಕ್ಕೆ ಮಾರು ಹೋಗದವರೇಇಲ್ಲ. ಬಿಜಾಪೂರದಜ್ಞಾನಯೋಗಾಶ್ರಮದಮಲ್ಲಿಕಾರ್ಜುನಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆದರುಎಂದರು.
ಸಿ.ಯು.ಬೆಳ್ಳಕ್ಕಿಮಾತನಾಡಿ, ಕನ್ನಡದಲ್ಲಿಐ.ಎ.ಎಸ್ ವಿಜಯಲಕ್ಷ್ಮಿ ಬೀದರಿಕಾಪಸೆಯರಲ್ಲಿ ಮೂರು ತಿಂಗಳು ತರಬೇತಿತೆÀಗದುಕೊಂಡರು.ಆದರ್ಶಕ್ಕೆಇನ್ನೊಂದು ಹೆಸರೇ ಕಾಪಸೆ ಎಂದರು.
ಮೋಹನ ಲಿಂಬಿಕಾಯಿ ನುಡಿನಮನ ಸಲ್ಲಿಸುತ್ತಾ, ಕಾಪಸೆಯವರು ಸರಳ ಮತ್ತು ಮಾನವತಾವಾದಿ.ಇನ್ನೊಬ್ಬರ ಬಗ್ಗೆ ಅಪಾರ ಕಾಳಜಿ ಹೊಂದಿದವರು.ಎಂದೂ ಅವರು ತಯಾರಿ ಇಲ್ಲದೇ ಪಾಠ ಹೇಳಲು ಬರುತ್ತಿದ್ದಿಲ್ಲ. ಯಾವುದಕ್ಕೂ ಆಸೆಪಟ್ಟವರಲ್ಲ. ಇತಿಮಿತಿಯಲ್ಲಿ ಇರುತ್ತಿದ್ದರು ಎಂದರು.
ಸಿ.ಚನ್ನಬಸಪ್ಪ, ವೆಂಕಟೇಶ ಮಾಚಕನೂರ, ಪ್ರೊ.ಮಾಲತಿ ಪಟ್ಟಣಶೆಟ್ಟಿ, ಶ್ರೀನಿವಾಸ ವಾಡಪ್ಪಿ, ಡಾ.ಶಾಮಸುಂದರ ಕೋಚಿ ನುಡಿನಮನ ಸಲ್ಲಿಸಿ, ಮಾತನಾಡಿದರು.
ಕಾಪಸೆಯವರ ದೇಹವನ್ನು ದಾನವಾಗಿ ಸ್ವೀಕರಿಸಿದ ವೈದ್ಯ ಡಾ.ಮಹಾಂತೇಶ ರಾಮಣ್ಣವರ ಕಾಪಸೆ ಅವರಿಗೆ ನುಡಿನಮನ ಸಲ್ಲಿಸಿ, ದೇಹದಾನ ಕುರಿತು ಜಾಗೃತಿ ನುಡಿಗಳನ್ನಾಡಿದರು.
ನುಡಿನಮನದಲ್ಲಿ ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಡಾ.ಶೈಲಜಾ ಅಮರಶೆಟ್ಟಿ, ಡಾ.ಜಿನದತ್ತ ಹಡಗಲಿ. ಡಾ. ಮಹೇಶ ಹೊರಕೇರಿ, ಡಾ.ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಕೆ.ಎಚ್.ನಾಯಕ, ಅರವಿಂದ ಯಾಳಗಿ, ಬಿ.ಕೆ. ಹೊಂಗಲ, ಪ್ರಿಯದರ್ಶಕಣವಿ ಸೇರಿದಂತೆ ಕಾಪಸೆ ಪರಿವಾರದವರು ಭಾಗವಹಿಸಿದ್ದರು.