ಮಾಲ್‍ಗಳಲ್ಲಿ ಮತದಾನ ಜಾಗೃತಿ
ಧಾರವಾಡ,ಮಾ30 : ಜಿಲ್ಲಾಡಳಿತ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಹುಬ್ಬಳ್ಳಿ ಮಹಾನಗರದ ವಿವಿಧ ಪ್ರತಿಷ್ಠಿತ ಮಾಲ್ ಹಾಗೂ ಸೂಪರ್ ಮಾರ್ಕೆಟ್‍ಗಳಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮತದಾನದ ಕುರಿತು ಸೆಲ್ಫೀ ಪಾಯಿಂಟ್ ಹಾಗೂ ಸ್ಟ್ಯಾಂಡಗಳನ್ನು (ಸ್ಟ್ಯಾಂಡೀಸ್)ಹುಬ್ಬಳ್ಳಿಯ ಯು ಮಾಲ್, ಲಕ್ಷ್ಮೀ ಮಾಲ್, ಓಯಾಸಿಸ್ ಮಾಲ್, ಸ್ಟೆಲ್ಲರ್ ಮಾಲ್, ಸ್ಯಾಟ್‍ಲೈಟ್ ಕಾಂಪ್ಲೆಕ್ಸ್‍ಗಳಲ್ಲಿ ಅಳವಡಿಸಲಾಗಿದ್ದು ಹುಬ್ಬಳ್ಳಿ ಜನತೆಯ ಈ ಸೆಲ್ಫೀ ಪಾಯಿಂಟ್‍ಗಳಲ್ಲಿ ಸೆಲ್ಫೀ ತೆಗೆದುಕೊಳ್ಳುತಿದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಈಶ್ವರ ಉಳಾಗಡ್ಡಿ ಅವರು ತಿಳಿಸಿದರು.
ಮಹಾನಗರ ಪಾಲಿಕೆಯ ಮತದಾನದ ಕುರಿತು ಈ ಸೆಲ್ಫೀ ಪಾಯಿಂಟ್‍ಗಳ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ 82 ವಾರ್ಡ್‍ಗಳಲ್ಲಿ ಮತದಾನ ಪ್ರಚಾರಕ್ಕಾಗಿ ಟ್ಯಾಬ್ಲೊ ವಾಹನ ಸಂಚರಿಸಲಿದೆ, ಇದರ ಜೊತೆಯಲ್ಲಿ ಎಲ್.ಇ.ಡಿ ವಾಹನ ಸಹ ಎಲ್ಲ ವಾರ್ಡಗಳಲ್ಲಿ ಸಂಚರಿಸಲಿದೆ.
ಸ್ಮಾರ್ಟ್ ಸಿಟಿ ಯೋಜನೆಡಿಯ 36 ಡಿಜಿಟಲ್ ಡಿಸ್‍ಪ್ಲೈ ಬೋರ್ಡ್‍ಗಳಲ್ಲಿ ಮತದಾನ ಜಾಗೃತಿ ಕುರಿತು ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ. 15 ಹೋಲ್ಡಿಂಗ್ಸ್‍ಗಳನ್ನು ಅಳವಡಿಸಲಾಗಿದೆ, ಪ್ರತೀದಿನ ಮನೆ-ಮನೆಗೆ ಹೋಗಿ ಕಸ ಹೊತ್ಯೊಯುವ ವಾಹನಗಳಲ್ಲಿ ಮತದಾನ ಜಾಗೃತಿ ಜಿಂಗಲ್ಸ್‍ಗಳನ್ನು ಅಳವಡಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಈಶ್ವರ ಉಳಾಗಡ್ಡಿ ಅವರು ತಿಳಿಸಿದ್ದಾರೆ.