ದತ್ತಿನಿಧಿ ಪ್ರಶಸ್ತಿ
ಬಾಗಲಕೋಟೆ,ಮಾ30: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಗೆ ಬಾಗಲಕೋಟೆಯ ಹಿರಿಯ ಪತ್ರಕರ್ತರಾದ ಶಶಿ ಕುಮಾರ ಕೆರೂರ ಆಯ್ಕೆ ಗೊಂಡಿದ್ದಾರೆ.
ಶಶಿಕುಮಾರ ಕೆರೂರ ಅವರಿಗೆ ರಾಜಶೇಖರ ಕೋಟಿ ಪ್ರಶಸ್ತಿಗೆ ಲಭಿಸಿದೆ. ಏಪ್ರಿಲ್ 1 ರಂದು ಚಿತ್ರದುರ್ಗದಲ್ಲಿ ನಡೆಯುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೆಯುಡಬ್ಲ್ಯೂಜೆ ಪ್ರಕಟಣೆಯಲ್ಲಿ ತಿಳಿಸಿದೆ. ಶಶಿಕುಮಾರ ಕೆರೂರ ಅವರಿಗೆ ದತ್ತಿ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸಿದೆ.