ಕ್ಷಯರೋಗ ನಿರ್ಮೂಲನೆ: ಜಾಗೃತಿ ಜಾಥ
ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೩೦- ತಾಲೂಕಿನ ಸಾದಾಪುರ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕ್ಷಯರೋಗ ನಿರ್ಮೂಲನೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಚಾಲನೆ ನೀಡಿ ಮಾತನಾಡಿ ಯಾರಲ್ಲಿ ಎರಡು ವಾರದವರೆಗೆ ಕೆಮ್ಮು, ಕಫದಲ್ಲಿ ರಕ್ತ, ಎದೆ ನೋವು, ಹೆಚ್ಚು ಜ್ವರ, ರಾತ್ರಿ ವೇಳೆ ಹೆಚ್ಚು ಬೆವುರುವುದು. ತೂಕ ಕಡಿಮೆ ಯಾಗವುದು ಹಸಿವಿಲ್ಲದಿರುವುದು, ಕುತ್ತಿಗೆ ಮತ್ತು ಕುಂಕಳ ಭಾಗದಲ್ಲಿ ನೋವು ಮತ್ತು. ಗಂಟುಗಳು ಕಂಡು ಬಂದಲ್ಲಿ ಇವುಗಳು ಕ್ಷಯರೋಗದ ಲಕ್ಷಣವಾಗಿರುತ್ತದೆ ಕ್ಷಯ ರೋಗ ಸಾಂಕ್ರಮಿಕವಾಗಿ ಹರಡುವುದರಿಂದ ಕ್ಷಯರೋಗದ ಲಕ್ಷಣ ಕಂಡುಬಂದವರು ಹಾಗೂ ರೋಗಿಗಳ ಕುಟುಂಬ ಸದಸ್ಯರು ಹಾಗೂ ಹೆಚ್ಚಿನ. ಅಪಾಯ ಉಳ್ಳ ಜನರಿಗೆ ಕ್ಷಯರೋಗ ಹರಡುವ ಸಾಧ್ಯತೆ ಇರುವುದರಿಂದ ಕೂಡಲೆ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಉಚಿತವಾಗಿ ಸೋಂಕಿನ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಪಡೆದು ಕೊಂಡಲ್ಲಿ ಕ್ಷಯರೋಗದಿಂದ ಗುಣಮುಖರಾಗಬಹುದು ಹಾಗೂ ಕ್ಷಯರೋಗ ಹರಡದಂತೆ ತಡೆಯಬಹುದು ಎಂದು ತಿಳಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅರೋಗ್ಯ ಇಲಾಖೆಯಿಂದ ಕ್ಷಯರೋಗ ನಿರ್ಮೂಲನೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಂಗವಾಗಿ ಜಾಗೃತಿ ಜಾಥ ನಡೆಸಲಾಯಿತು.
ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಗುರುಶರಣ, ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ ಉಷಾ ನಾಯ್ಡು, ಶ್ರೂಶುಷಕ ಅಧಿಕಾರಿ ನಾಗರತ್ನ, ಸಮುದಾಯ ಆರೋಗ್ಯ ಅಧಿಕಾರಿ ಮಂಜುಳಾ, ನೇತ್ರಾಧಿಕಾರಿ ಯಲ್ಲಪ್ಪ, ಅಶಾ ಕಾರ್ಯಕರ್ತರಾದ ರೇಣುಕಾ, ಈರಮ್ಮ, ಅಂಬಮ್ಮ ಸೇರಿದಂತೆ ಗ್ರಾಮಸ್ಥಾರು ಭಾಗವಹಿಸಿದ್ದರು.