ಏ. 12 ರಿಂದ ಶ್ರೀ ಮಾತಾ ಸಂಭ್ರಮ
ಬೈಲಹೊಂಗಲ,ಮಾ30: ಏಪ್ರಿಲ್ 12 ರಿಂದ 14 ರವರಿಗೆ ಮೂರು ದಿನಗಳ ಕಾಲ ಶ್ರೀ ಮಾತಾ ಸಂಭ್ರಮ ನಡೆಸಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ವೇ.ಮೂ ಡಾ. ಮಹಾಂತಯ್ಯ ಆರಾದ್ರಿಮಠ ಶಾಸ್ತ್ರಿ ಗಳು ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಏ.12 ರಂದು ಅಮ್ಮನವರಿಗೆ ಅಭಿಷೇಕ, ಕುಂಕುಮಾರ್ಚನೆ,ಗಣಪತಿ ಪೂಜೆ ಆಶ್ಲೇಷಾ ಬಲಿಪೂಜೆ,ನವದುರ್ಗೆ ಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಸಂಜೆ 4.ಘಂಟೆಗೆ ನಗರದ ಎ.ಪಿ.ಎಂ.ಸಿ ಯಿಂದ ದೇವಸ್ಥಾನದವರೆಗೆ ಇಂಚಲ ಸಾಧು ಸಂಸ್ಥಾನದ ಪೂಜ್ಯ ಶಿವಾನಂದ ಭಾರತಿ ಸ್ವಾಮೀಜಿಗಳ ಸಾರೋಟ ಉತ್ಸವ ನಡೆಸಲಾಗುವುದು.
ಸಾಯಂಕಾಲ 7 ಘಂಟೆಗೆ ನಡೆಯಲಿರುವ ಭವ್ಯ ವೇದಿಕೆ ಕಾರ್ಯಕ್ರಮದಲ್ಲಿ ನಟ ಶರಣ ಅವರಿಗೆ ಶಾಂಭವಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಏ.13 ರಂದು ಮುಂಜಾನೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು,ಸಂಜೆ 7 ಘಂಟೆಗೆ ಮಾಜಿ ಸೈನಿಕರ ದಂಪತಿಗಳಿಗೆ ಸತ್ಕಾರ ಹಾಗೂ ಖ್ಯಾತ ನಟಿ ಮಾಲಾಶ್ರೀ ರವರಿಗೆ ಶಾಂಭವಿ ಶ್ರೀ ಪ್ರಶಸ್ತಿ ವಿತರಿಸಲಾಗುವುದು.
ಏ.14 ರಂದು ಮುಂಜಾನೆ ಅಮ್ಮನವರಿಗೆ ಉಡಿ ತುಂಬುವ ಕಾರ್ಯಕ್ರಮ, ಸಾಯಂಕಾಲ 7 ಘಂಟೆಗೆ ಧರ್ಮಸಭೆ,
ಉತ್ತರ ಕರ್ನಾಟಕದ ಹೆಮ್ಮೆಯ ಸಿಂಗಿಂಗ್ ಕಾಂಪಿಟೇಶನ್, ಶಾಂಭವಿ ಶ್ರೀ ಅವಾರ್ಡ್ಸ್ 2024 ಸೀಜನ್ 3 ಗ್ರ್ಯಾಂಡ್ ಫಿನಾಲೆ ಹಾಗೂ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಆವರಿಗೆ ಶಾಂಭವಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಧಾರಾವಾಹಿ ನಟ,ನಟಿಯರಿಗೆ,ಟಿವಿ ಹಾಗೂ ಡಿಜಿಟಲ್ ಮಾಧ್ಯಮದ ಹಾಸ್ಯ ಕಲಾವಿದರಿಗೆ,ಗಾಯಕರಿಗೆ ಹಾಗೂ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು,ರಾಜಕೀಯ ಗಣ್ಯರು,ರೈತಪರ,ಕನ್ನಡಪರ ಹೋರಾಟಗಾರರು ಭಾಗಿಯಾಗಲಿದ್ದು, ವಿದ್ವಾನ್ ಶಾಸ್ತ್ರಿಗಳ ತಂಡದಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ
ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ರಾಜು ಜನ್ಮಟ್ಟಿ,ಮುಖಂಡರಾದ ಪ್ರಮೋದಕುಮಾರ ವಕ್ಕುಂದಮಠ ಮಾತನಾಡಿದರು.
ಕುಮಾರ ರೇಷ್ಮಿ,ಮಹಾಂತೇಶ ರಾಜಗೋಳಿ, ಜಾತ್ರಾ ಕಮೀಟಿ ಅಧ್ಯಕ್ಷ ರಾಜು ಕೂಡಸೋಮಣ್ಣವರ, ಆನಂದ್ ತೋಟಗಿ,ರಾಜು ದಳವಾಯಿ ಇದ್ದರು.