ಬಸವರಾಜ ಹಾವೇರಿಗೆ ಸನ್ಮಾನ
ವಿಜಯಪುರ,30:ನಗರದ ಪ್ರಗತಿ ಸಾಹಿತ್ಯ ವೇದಿಕೆಯ ವತಿಯಿಂದ ನಿಡಗುಂದಿ ಪಟ್ಟಣದ ಬಸವರಾಜ ಹಾವೇರಿಯವರಿಗೆ ಅವರ ಸ್ವಗೃಹದಲ್ಲಿ ಸನ್ಮಾನ ಮಾಡಲಾಯಿತು.
ಆರೋಗ್ಯ ಇಲಾಖೆಯ ನೌಕರÀ ಬಸವರಾಜ ಅವರು ಕನ್ನಡ ಡಿ.ಟಿ.ಪಿ.ಬಲ್ಲವರಾಗಿದ್ದು, ಹಲವಾರು ಕವಿಗಳ ಕವನ ಸಂಕಲನದ ಹಸ್ತಪ್ರತಿಗಳನ್ನು ಕವಿಗಳಿಂದ ಯಾವುದೆ ರೀತಿಯ ಹಣ ಪಡೆಯದೆ ಉಚಿತವಾಗಿ ಡಿ.ಟಿ.ಪಿ.ಕೆಲಸ ಮಾಡುತ್ತಿರುವ ಇವರ ನಿಸ್ವಾರ್ಥ ಕಾರ್ಯ ಮತ್ತು ಕನ್ನಡ ಸೇವೆಯನ್ನು ಕಂಡು ಈ ಸನ್ಮಾನ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಪ್ರಕಾಶ ಜಹಾಗೀರದಾರ ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಚಪ್ಪ ಹಾವೇರಿ, ನೀಲಮ್ಮ, ಗಿರೀಶ ಹೂಗಾರ, ರಾಜು ಪಟ್ಟಣಶೆಟ್ಟಿ, ಉಮೇಶ ಮತ್ತು ಅಶೋಕ ಅವರು ಭಾಗವಹಿಸಿ ಬಸವರಾಜ ಅವರ ಕನ್ನಡ ಸೇವೆಯ ಬಗ್ಗೆ ಮಾತನಾಡಿದರು.