ಓದಿಗೆ ಬದುಕು ಕಟ್ಟುವ ಶಕ್ತಿ ಇದೆ : ಉಮಾ ಪಾಟೀಲ
ವಿಜಯಪುರ,ಮಾ.30: ಪುಸ್ತಕಗಳ ಓದು ಮನುಷ್ಯನೊಳಗೆ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತವೆ ಎಂದು ಸಮಾಜ ಸೇವಕಿ ಉಮಾ ಪಾಟೀಲ ಹೇಳಿದರು.
ನಗರದ ಸಾಯಿ ರೆಸಿಡೆನ್ಸಿ ಬಡಾವಣೆಯ ಮನು ಪತ್ತಾರ ಕಲಕೇರಿ ಅವರ ಮನೆಯಲ್ಲಿ ಆಯೋಜಿಸಿದ ಓದುಗರ ಚಾವಡಿಯ ರಾಜೇಂದ್ರಕುಮಾರ ಬಿರಾದಾರ ಸಾಂಸ್ಕøತಿಕ ವೇದಿಕೆ ಅಡಿಯಲ್ಲಿ ಹಮ್ಮಿಕೊಂಡ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅವಸರದ ಈ ದಿನಮಾನಗಳಲ್ಲಿ ಓದುವ ಪ್ರಕ್ರಿಯೆ ನಿಧಾನವೆಂದು ಭಾವಿಸಬಾರದು ನಿಧಾನವಾದ ಓದು ಬದುಕನ್ನು ಸುಭದ್ರವಾಗಿ ಕಟ್ಟಿಕೊಡುವ ಶಕ್ತಿ ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಓದುಗರ ಚಾವಡಿಯ ಮನೆ ಮನೆಯ ಈ ಪುಸ್ತಕ ಪರಿಚಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಇಂಡಿ ತಾಲ್ಲೂಕಿನ ಹಿರೆಮಸಳಿ ಗ್ರಾಮದ ಯುವ ಕಥೆಗಾರ ಅನಿಲ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನವನ್ನು ನಾಗಠಾಣ ಪಬ್ಲಿಕ್ ಶಾಲೆಯ ಶಿಕ್ಷಕÀ ಶಿವಶರಣಪ್ಪ ಶಿರೂರು ಪರಿಚಯಿಸಿ, ಆಧುನಿಕತೆಯ ಮೋಹದ ಸೆಳೆತಕ್ಕೆ ಸಿಕ್ಕು ಸಾಹಿತ್ಯದ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಅನಿಲ ಗುನ್ನಾಪೂರ ಅವರ ಕಥೆಗಳು ಹೊಸ ಭರವಸೆಯನ್ನು ಹುಟ್ಟು ಹಾಕುತ್ತವೆ ಎಂದರು.
ಗ್ರಾಮ ಜಗತ್ತಿನ ಒಳ ಹೂರಣವನ್ನು ಪ್ರಾದೇಶಿಕ ಭಾμÉಯಲ್ಲಿ ಅತ್ಯಂತ ಯಶಸ್ವಿಯಾಗಿ ಕಟ್ಟಿಕೊಡುವ ಅನಿಲ ಅವರು ಆಧುನಿಕ ಕಾಲದ ಅವಘಡಗಳನ್ನು ಹಾಗೂ ಗ್ರಾಮೀಣ ಪ್ರದೇಶದ ಸಾಮಾಜಿಕ ಚಿತ್ರಣವನ್ನು ನಯವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಥೆಗಾರ ಅನಿಲ ಗುನ್ನಾಪೂರ ಅವರು ಮಾತನಾಡಿ, ನಾನು ನನ್ನ ತಾಯಿಯವರ ಪ್ರೋತ್ಸಾಹ ಹಾಗೂ ಪ್ರೇರಣೆಯಿಂದಾಗಿ ಕಥೆಗಳನ್ನು ಬರೆಯಲು ಆರಂಭಿಸಿದೆ, ನನ್ನ ಜೀವ ಹಿಂಡಿದ ಘಟನೆಗಳನ್ನು ನನ್ನ ನೆಲದ ಭಾμÉಯಲ್ಲಿ ಅಭಿವ್ಯಕ್ತಿಸುವ ಪ್ರಯತ್ನ ಮಾಡಿರುವೆ, ಲೇಖಕರ ಪುಸ್ತಕಗಳನ್ನು ಈ ರೀತಿ ಸಾಹಿತ್ಯದ ಆಸಕ್ತರ ಮಧ್ಯದಲ್ಲಿ ಚರ್ಚೆ ಆಗುತ್ತಿರುವುದು ನನಗೆ ಸಂತಸ ತಂದಿದೆ ಹಾಗೂ ಹೊಸದಾಗಿ ಕಥೆಗಳನ್ನು ಬರೆಯಲು ಪ್ರೇರಣೆ ದೊರಕಿದಂತಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಬಿ. ಆರ್. ಬನಸೋಡೆ ಅವರು ಮಾತನಾಡಿ, ಓದುಗರ ಚಾವಡಿಯ ಮೂಲಕ ಸಾಹಿತ್ಯದ ಆಸಕ್ತರ ಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಪರಿಚಾರಿಕೆ ಮಾಡುತ್ತಿರುವುದು ಅನುಕರಣೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ದಾಕ್ಷಾಯಿಣಿ ಬಿರಾದಾರ, ಚೆನ್ನಮ್ಮ ಪತ್ತಾರ, ಕಾಮಾಕ್ಷಿ ಪತ್ತಾರ, ಸ್ವಪ್ನಾ ಅಳ್ಳಿಮೊರೆ ಹಾಗೂ ಶರಣು ಸಬರದ, ರಾಜಕುಮಾರ ಜೊಲ್ಲೆ, ಸುಭಾಸ ಯಾದವಾಡ, ಬಸವರಾಜ ಕುಂಬಾರ, ಗಂಗಾಧರ ಪತ್ತಾರ, ರಾಜಶೇಖರ ಉಮರಾಣಿ, ಮೋಹನ ಕಟ್ಟಿಮನಿ, ಭರತಕುಮಾರ ಹೆಚ್ ಟಿ, ಅನಿಲ ಕುಮಾರ ಮಾಶಾಳಕರ, ಶಶಿಧರ ಶಿರಹಟ್ಟಿ, ಸುಭಾಸ ಕನ್ನೂರ, ಎಸ್. ಡಿ. ಕೃಷ್ಣಮೂರ್ತಿ, ಪಂಡಿತರಾವ ಪಾಟೀಲ, ಸಿದ್ದಾರೂಢ ಕಟ್ಟಿಮನಿ, ಡಾ.ಎಸ್.ಟಿ. ಮೇರವಾಡೆ, ಆರ್.ಎಸ್. ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಗದ್ದನಕೇರಿ, ಅಶ್ವಥ, ಕೆ. ಕೆ. ಅಸ್ಕಿ, ಶ್ರೀಧರ ಪತ್ತಾರ, ಸುಜಾತಾ ಚೆಲವಾದಿ, ದಾಕ್ಷಾಯಿಣಿ ಹುಡೇದ, ಹೇಮಲತಾ ವಸ್ತ್ರದ, ಪ್ರಭಾವತಿ ದೇಸಾಯಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಧ್ಯಾಪಕ ಡಾ. ಎಂ. ಎಸ್. ಮಾಗಣಗೇರಿ ಸ್ವಾಗತಿಸಿ ನಿರೂಪಿಸಿದರು.