ಉರಿ ಬಿಸಿಲಿನಲ್ಲಿ ಹೈರಣಾಗುತ್ತಿರುವ ಟ್ರಾಫಿಕ್ ಪೋಲಿಸರು
(ಸಂಜೆವಾಣಿ ವಾರ್ತೆ)
ಸಿಂಧನೂರು ಮಾ.೩೦ ನಗರದ ಪ್ರಮುಖ ವೃತ್ತ, ಸರ್ಕಲ್, ಬೀದಿಗಳಲ್ಲಿ ಸಂಚಾರಿ ಪೋಲಿಸರು ಸಾರ್ವಜನಿಕರ ಹಿತಕ್ಕಾಗಿ ಹೈರಣಾಗಿ, ಉಸಿರು ಬಿಡುತ್ತಾ ಕರ್ತವ್ಯ ಪಾಲನೆ ಯಲ್ಲಿರುವುದು ದೊಡ್ಡ ಕಷ್ಟವೇ ಸರಿ.
ಎಲ್ಲಾ ನೌಕರಿಗಳಂತೆ ಸರ್ಕಾರಿ ನೌಕರಿ ಪೋಲಿಸರ ವೃತ್ತಿ ಆದರೆ ಸಿಂಧನೂರಿನಲ್ಲಿ ಅಂದಾಜು ೪೨ ಡಿಗ್ರಿ ಸೆಲ್ಸಿಯಸ್‌ನಲ್ಲಿ ನಗರದ ಗಾಂಧಿ ವೃತ್ತ, ಬಸವ ಸರ್ಕಲ್, ಕನಕದಾಸ ವೃತ್ತ, ಪೊಸ್ಟ್ ಆಫಿಸ್ ಸೇರಿದಂತೆ ಹಲವೆಡೆ ಕರ್ತವ್ಯ ದಲ್ಲಿ ಮುಖಕ್ಕೆ ಕರವಸ್ತ್ರ ದಿಂದ ಒರೆಸುತ್ತಾ, ನೀರು ಕುಡಿಯುತ್ತಾ, ಯಾವುದೇ ಅಪಘಾತ ಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಸಂಚಾರಿ ಪೋಲಿಸ್‌ರು ಕರ್ತವ್ಯ ದಲ್ಲಿರುವುದು ಯಾರಿಗೂ ಈ ನೌಕರಿ ಬೇಡಪ್ಪ ಎಂಬತಾಗುತ್ತದೆ.ಯಾವುದೇ ಸರ್ಕಾರಿ ನೌಕರಿ ಇದ್ದರೂ ತಣ್ಣಗೆ ಪ್ಯಾನ್, ಏರ್ ಕೂಲರ್ ಹಾಕಿಕೊಂಡು ನೆರಳಿನಲ್ಲಿಗಾಳಿಗೆ ನೌಕರಿ ಮಾಡುತ್ತಾರೆ ಆದರೆ ಈ ಕಾನೂನು ಪಾಲನೆಯ ಈ ಪೋಲಿಸ್ ಸಿಬ್ಬಂದಿ ಗಳು ಮಾತ್ರ ಹಾಡು ಹಗಲು ಬಿಸಿಲು, ಮಳೆ, ಚಳಿ ಎನ್ನದೇ ನೌಕರಿ ಮಾಡಬೇಕಾಗಿದೆ.
ಸಂಚಾರಿ ಪೋಲಿಸರದು ಎಲ್ಲರಂತೆ ನೌಕರಿ ಆದರೆ ಬಿಸಿಲು ದಿನಗಳನ್ನು ಕಳೆಯುವುದು ದೊಡ್ಡ ಸವಾಲೇ ಸರಿ.ಬಾಯಲ್ಲಿ ಸಿಟಿ ಹಾಕುತ್ತಾ ರಸ್ತೆ ಮದ್ಯ ನಿಂತು ಎಡ, ಬಲ, ಹಿಂದೆ, ಮುಂದೆ ಎಲ್ಲಾ ಕಡೆ ಸರಿಯಾಗಿ ಸಂಚಾರಿ ನಿಯಮಗಳು ಪಾಲನೆ ಯಾಗುತ್ತಿದೆಯಾ ಅಥವಾ ಇಲ್ಲ ಎಂದು ಗಮನಿಸಬೇಕಾಗಿದೆ. ೪೧ ಡಿಗ್ರಿ ಬಿಸಿಲಿನ ಲ್ಲಿ ಸಮಯಕ್ಕೆ ಸರಿಯಾಗಿ ನೀರು, ಊಟ, ನಿದ್ದೆ ಆಗದಿದ್ದಲ್ಲಿ ಬಿ.ಪಿ ಲೊ, ಹೃದಯ ಘಾತ ,ಸನ್ ಸ್ಟ್ರೋಕ್ ನಂತಹ ತಕ್ಷಣದ ಕಾರಣಗಳಿಂದ ಸಾವನ್ನಪ್ಪುವ ಸಾದ್ಯತೆ ಉಂಟು. ನಮಗಾಗಿ ಕಷ್ಟ ಸಹಿಷ್ಣು ಗಳಾದ ಪೋಲಿಸರಿಗೆ ದೊಡ್ಡ ಸಲಾಂ ಎನ್ನುತ್ತಿದ್ದಾರೆ ಪ್ರಜ್ಞಾವಂತರು.