ಕೊಳಬಾಳ : ಕಿರಾಣಿ ಅಂಗಡಿಯಲ್ಲಿ ಮದ್ಯಮಾರಾಟ ,ಪ್ರಕರಣ ದಾಖಲು
ಸಂಜೆವಾಣಿ ವಾರ್ತೆ.
ಸಿಂಧನೂರು ಮಾ.೩೦ ತಾಲೂಕಿನ ತುರವಿಹಾಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿನ ಕೊಳ ಬಾಳ ಗ್ರಾಮದ ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆದಿದ್ದು ,ದಾಳಿ ನಡೆಸಿ ಮದ್ಯ ವಶಕ್ಕೆ ಪಡೆದು ತುರವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ,ಮುದ್ದತಿ ಮಾಲ ನ್ನು ಅಬಕಾರಿ ಇಲಾಖೆಗೆ ಕಳಿಸಲಾಗುತ್ತದೆ ಎಂದು ತುರವಿಹಾಳ ಪೋಲಿಸ್ ಠಾಣೆ ಪಿಎಸ್‌ಐ ನಾಗರಾಜ ಮಾಹಿತಿ ನೀಡಿದರು. ಕೊಳಬಾಳ ಗ್ರಾಮದ ಮಹಾಂತಮ್ಮ ಗಂ ದೇವೇಂದ್ರಪ್ಪ ಎಂಬುವವರು ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಸೂಕ್ತ ಬಾತ್ಮಿದಾರರ ಮಾಹಿತಿ ಮೇರೆಗೆ ನಿನ್ನೆ ಸಂಜೆ ದಾಳಿ ನಡೆಸಿ ೮೬.೭೬೦ ಲೀ ಮದ್ಯ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆಂದು ತಿಳಿಸಿದರು. ಪಿಎಸ್‌ಐ ಸ್ಯಾಮುಯೆಲ್ .ಡಿ,ಸಿಬ್ಬಂದಿ ಗಳಾದ ಶಿವರಾಜ ,ವಿಶ್ವನಾಥ ರಡ್ಡಿ ,ಮಹಿಳಾ ಪೆದೆ ಜ್ಯೋತಿ ದಾಳಿ ನಡೆಸಿದರು.