ಧ್ಯಾನವನ್ನು ಮಾಡಬೇಕು, ಜ್ಞಾನವನ್ನು ಅರ್ಜಿಸಬೇಕು
ತಾಳಿಕೋಟೆ:ಮಾ.30: ಮನುಷ್ಯನ ದುಃಖಕ್ಕೆ 5 ಮಾಯಾ ಫೀಶಾಚಿಯೇ ಕಾರಣವಾಗಲಿದೆ ಅವುಗಳಲ್ಲಿ ಹಣ, ಹೆಣ್ಣು, ಇಂದ್ರಿಯ ಸುಃಖಗಳು, ಪ್ರಾಪಂಚಿಕ ವೈಭವಗಳು ಹೆಸರು ಹೊಗಳಿಕೆಗೆ ಕೀರ್ತಿ, ಪಧವಿ, ಸನ್ಮಾನ, ಅಭಿಮಾನ, ಇವು ಮನುಜನ ದುಃಖಕ್ಕೆ ಕಾರಣವಾಗಿವೆ ಎಂದು ಮಸೂತಿಯ ಶ್ರೀ ಶಿವಲಿಂಗಯ್ಯ ಶರಣರು ನುಡಿದರು.
ಶುಕ್ರವಾರರಂದು ಸ್ಥಳೀಯ ಶ್ರೀ ನಿಜಗುಣ ಶಿವಯೋಗಿಗಳ ಆನಂದಾಶ್ರಮದಲ್ಲಿ ಆಡಳಿತ ಮಂಡಳಿಯವರ ವತಿಯಿಂದ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಶ್ರೀಗಳು ಮನುಜನ ಸುಖಕ್ಕೂ ಸುಖಮಯ ಜೀವನಕ್ಕೆ ಸರಳ ಮಾರ್ಗಗಳಿದ್ದು ಅವುಗಳಲ್ಲಿ ಅವಶ್ಯಕತೆಗೆ ಬೇಕಾಗುವಷ್ಟು ಹಣ, ಮನೆ, ವಸ್ತು, ಉಪಕರಣಗಳು, ವಾಹನಗಳು, ಆರೋಗ್ಯ, ಒಳ್ಳೆಯತನ ಮತ್ತು ಪ್ರೀತಿ ತುಂಬಿರುವ ಪತಿ ಪತ್ನಿಯರು ಅರ್ಥಗರ್ಭಿತ ಪುಸ್ತಕಗಳು ವಾಚನೆ, ವಿವೇಕ ಈ 5 ವಿಚಾರಗಳು ಸಮೃದ್ದಿಯಾಗಿದ್ದರೆ ಮನುಜ ಸುಃಖಜೀವಿಯಾಗಬಲ್ಲಾ ಇದಕ್ಕಿಂತಲೂ ಹೆಚ್ಚಾಗಿ ಸುಖಮಯ ಜೀವನಕ್ಕೆ ಏನು ಬೇಕಾಗಿಲ್ಲಾವೆಂದರು. ನಾನು, ನನ್ನದು ಎಂಬ ಅಹಂಕಾರ ದೂರಾಗಬೇಕು, ಮನದಲ್ಲಿಯ ಇಚ್ಚೆಗಳು ನಿರ್ಮೂಲನೆಯಾಗಬೇಕು ತನ್ನನ್ನು ತಾನು ಅರಿತುಕೊಳ್ಳಬೇಕು ಸಕಲವನ್ನು ಇರುವದು ಇರುವಂತೆ ಅರಿಯಬೇಕು ಆಂತರಿಕ ಶಕ್ತಿಗಳ ಅಭಿವೃದ್ದಿ ಮಾಡಿಕೊಳ್ಳುತ್ತಾ ಆತ್ಮ ಸ್ಥಿತಿಯ ಕಡೆಗೆ ಸಾಗಬೇಕು ಈ 5 ವಿಚಾರಗಳಲ್ಲಿ ಪ್ರಗತಿ ಸಾದಿಸಿದರೆ ಮನುಷ್ಯನಿಗೆ ಶಾಸ್ವ ಸುಃಖ, ದುಃಖರಾಹಿತ್ಯ ಸುಖ ಪವಿತ್ರ ಸುಖ ಪ್ರಾಪ್ತಿಯಾಗುತ್ತದೆ ಅದುವೆ ಆತ್ಮ ಸ್ಥಿತಿ, ಅದೇ ಮೋಕ್ಷ ಸ್ಥಿತಿ ಎಂದು ಹೇಳಿದ ಶ್ರೀಗಳು ಮೋಕ್ಷ ಸ್ಥಿತಿ ಪ್ರಾಪ್ತಿಗಾಗಿ ಜ್ಞಾನವನ್ನು ಅರ್ಜಿಸಬೇಕು ಪುಣ್ಯದ ಕಾರ್ಯಗಳನ್ನು ಮಾಡಬೇಕು ದ್ಯಾನವನ್ನು ಮಾಡಬೇಕು ಇಚ್ಚೆ ನಿರ್ಮೂಲನೆ ಯಾಗುವವರೆಗೂ ಇಂದ್ರಿಯ ಸುಖಗಳನ್ನು ಧರ್ಮದ ಚೌಕಟ್ಟಿನಲ್ಲಿ ಅನುಭವಿಸಬೇಕು ಪಾಪದ ಕಾರ್ಯಗಳನ್ನು ಸ್ವಲ್ಪು ಮಾಡದಂತೆ ಸದಾ ಜಾಗೃತವಹಿಸಬೇಕು ಈ 5 ಕಾರ್ಯಗಳನ್ನು ಆಚರಿಸುವದರಿಂದ ಮೋಕ್ಷ ಸ್ಥಿತಿ ಸುಲಬವಾಗಿ ಪ್ರಾಪ್ತಿಯಾಗುತ್ತದೆ ಮೋಕ್ಷ ಸ್ಥಿತಿಯಲ್ಲಿ ಕರಗದ ಶಾಸ್ವತ ಸುಃಖ ಅಡಗಿರುತ್ತದೆ ಎಂದು ಶ್ರೀಗಳು ಹೇಳಿದರು.
ಇನ್ನೋರ್ವ ಸನ್ಮಾನ ಸ್ವಿಕರಿಸಿದ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಕಾರ್ಯವೈಖರ್ಯವನ್ನು ಕಳೆದ 60 ವರ್ಷಗಳಿಂದಲೂ ನಾನು ಬಲ್ಲೆ ಇಲ್ಲಿ ಪ್ರತಿದಿನ ನಡೆಯುತ್ತಿರುವ ಶಾಸ್ತ್ರ ಆದ್ಯಾತ್ಮೀಕ ಪ್ರವಚನ ಮನುಕೂಲವನ್ನು ಸುದಾರಿಸುವಂತಹ ಕಾರ್ಯ ಮಾಡುತ್ತಾ ಸಾಗಲಾಗಿದೆ ಇಂತಹ ಕಾರ್ಯಗಳು ಜನ ಜಾಗೃತಿ ಮೂಡಿಸಬೇಕಾದರೆ ಭಹಿರಂಗ ಕಾರ್ಯಕ್ರಮಗಳನ್ನು ಏರ್ಪಡಿಸಿ ಹಿತನುಡಿಗಳನ್ನು ಹೇಳಿದರೆ ಭಕ್ತರಿಗೆ ಆಲಿಸಿ ಪಾಲಿಸಲು ಸಾಧ್ಯವಾಗುತ್ತದೆ ಎಂದರು.
ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಅಧ್ಯಕ್ಷರಾದ ಜೆ.ಎಂ.ಬೇನಾಳಮಠ ಅವರು ಆಶ್ರಮದಲ್ಲಿ ದಿನನಿತ್ಯ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.
ಈ ಸಮಯದಲ್ಲಿ ಉಪನ್ಯಾಸಕರಾದ ಆರ್.ಬಿ.ದಾನಿ, ವೀರಭದ್ರಪ್ಪ ಹಂದಿಗನೂರ, ಸಿ.ಲಿಂಗಪ್ಪ, ಬಸವರಾಜ ದೊಡಮನಿ, ಮಲ್ಲಿಕಾರ್ಜುನ ಹಿಪ್ಪರಗಿ, ಶ್ರೀಮತಿ ನಾಗರತ್ನಾ ಲೋಕರೆ, ಇಂದುಮತಿ ಬಬಲೇಶ್ವರ, ಶ್ರೀಮತಿ ಉಮಾ ಘೀವಾರಿ, ಸಾವಿತ್ರೆಮ್ಮ ಹಿರೇಮಠ, ಡಾ.ಹೇಮಾ ಹಿರೇಮಠ, ಮೊದಲಾದವರು ಉಪಸ್ಥಿತರಿದ್ದರು.