ಪಾದಯಾತ್ರಿಗಳಿಗೆ ಅನ್ನದಾಸೋಹ-ಉಚಿತ ಚಿಕಿತ್ಸೆ
ಸಿರವಾರ.ಮಾ೨೯- ಯುಗಾದಿ ನಿಮಿತ್ಯ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ಹೋಗುವ ಪಾದಯಾತ್ರಿಗಳಿಗೆ, ಭಕ್ತಾದಿಗಳಿಗೆ ಪಟ್ಡಣದ ವಾರ್ಡ ನಂ ೧೨ ವೈ.ಭೂಪನಗೌಡ ಅಂಗಡಿ ಹತ್ತಿರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಸಂಜೆ ಪ್ರಸಾದ ವ್ಯವಸ್ಥೆಗೆ ಚಾಲನೆ ನೀಡಲಾಯಿತು.
ಈ ಕುರಿತು ಪ.ಪಂ ಸದಸ್ಯ ವೈ.ಭೂಪನಗೌಡ ಮಾತನಾಡಿ, ಶ್ರೀ ಶೈಲಾ ಮಲ್ಲಿಕಾರ್ಜುನ ದರ್ಶನಕೆ ತೆರಳುವ ಭಕ್ತರಿಗೆ ಅನೇಕ ವರ್ಷಗಳಿಂದ ಈ ದಾಸೋಹ, ಆರೋಗ್ಯ ತಪಾಸಣೆ, ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದ್ದೂ, ಇದಕ್ಕೆ ಎಲ್ಲಾ ಸ್ನೇಹಿತರು ಕೂಡಿ ಮಾಡುತ್ತಿದೆವೆ. ಅನ್ನದಾನ ಶ್ರೇಷ್ಠವಾಗಿದೆ.
ಈ ಸಂದರ್ಭದಲ್ಲಿ ನಿಂಬಯ್ಯ ಸ್ವಾಮಿ, ಬಿಜೆಪಿ ತಾಲೂಕ ಅಧ್ಯಕ್ಷ ಜೆ.ದೇವರಾಜಗೌಡ, ಜಿ.ವಿರೇಶ, ನೌಕರ ಸಂಘದ ಅದ್ಯಕ್ಷ ಅಯ್ಯನಗೌಡ ಐರೇಡ್ಡಿ, ತಾ.ಪಂ. ಮಾಜಿ ಸದಸ್ಯ ಸಿದ್ದರಾಮಯ್ಯಸ್ಚಾಮಿ, ನಾಗರಾಜಗೌಡ, ವಿರುಪಾಕ್ಷಿ ಗೌಡ, ಎನ್.ಚಂದ್ರಶೇಖರ, ನಾಗಪ್ಪ ಪತ್ತಾರ, ಶರಣಪ್ಪ, ವಿಜಯಲಕ್ಷ್ಮಿ ಆದೇಪ್ಪ ಚಂದ್ರುಕಳಸ, ಪ್ರಕಾಶ ಪಾಟೀಲ್, ಪ.ಪಂ. ಮಾಜಿ ಸದಸ್ಯ ಚನ್ನಪ್ಪ ನಾಗೋಲಿ, ವಿಜಯಕುಮಾರ್ ಗುಡದಮನೆ, ಶ್ರೀಧರ ಸ್ವಾಮಿ, ಸೂಗಪ್ಪ ಹೂಗಾರ, ಮಲ್ಲಿಕಾರ್ಜುನ ಹೂಗಾರ, ಪ್ರಭು, ಮಲ್ಲಪ್ಪಗೌಡ, ಚನ್ನಯ್ಯ ಸ್ವಾಮಿ ಶಾಖಾಪುರ ಇದ್ದರು. ಇನ್ನೂ ಅನೇಕ ಗೆಳೆಯರು ಭಾಗವಹಿಸಿದ್ದರು.