ಕಾನೂನು ಕಾರ್ಯಗಾರ ಸಮಾರಂಭ ನ್ಯಾ.ಇ.ಎಸ್.ಇಂದೀರೇಶರಿಂದ ಉದ್ಘಾಟನೆ
ಸಂಜೆವಾಣಿ ವಾರ್ತೆ
ಲಿಂಗಸುಗೂರು.ಮಾ.೩೦- ಲಿಂಗಸೂಗೂರು ಪಟ್ಟಣದ ಆರ.ಎಂ.ಎಸ್.ಪಂಕ್ಷನಲ್ಲಿ ನೆಡೆದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು ನ್ಯಾಯಂಗ ಇಲಾಖೆ ರಾಯಚೂರು ಹಾಗೂ ಲಿಂಗಸೂಗೂರು ತಾಲೂಕು ನ್ಯಾಯವಾದಿಗಳ ಸಂಘ ಇವರ ಸಹಯೋಗದಲ್ಲಿ ವಕೀಲರಿಗಾಗಿ ರಾಜ್ಯ ಮಟ್ಟದ ಕಾನೂನು ಕಾರ್ಯಾಗಾರವನ್ನು ನ್ಯಾಯಮೂರ್ತಿ ಇ.ಎಸ್.ಇಂದೀರೇಶ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳು ರಾಜ್ಯದ ಎಲ್ಲಾ ತಾಲುಕು ಕೇಂದ್ರಗಳಲ್ಲಿ ಅಯೋಜಿಸಬೇಕು ಇದರಿಂದ ವಕೀಲರಿಗೆ ಸಾಕಷ್ಟು ತಮ್ಮ ವೃತ್ತಿ ಬದುಕಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ದೈನಂದಿನ ವೃತ್ತಿ ಬದುಕಿನಲ್ಲಿ ಅನುಭವ ಹೊಂದಿರುವ ನ್ಯಾಯಮೂರ್ತಿಗಳು ಮತ್ತು ನ್ಯಾಯವಾದಿಗಳಿಂದ ಸಾಕಷ್ಷು ಕಾನೂನು ತಿಳುವಳಿಕೆಯನ್ನು ಕಲಿಕೆಯಬಹುದು. ಪ್ರತಿ ಮನುಷ್ಯನು ದಿನನಿತ್ಯೆ ಹೊಸ ಹೂಸ ವಿಚಾರಗಳನ್ನು ವಿಷಯಗಳನ್ನು ಕಲಿಯುತ್ತೇನೆ ಎಂದು ಈ ಕಾನೂನು ಕಾರ್ಯಗಾರವನ್ನು ಅಯೋಜಿಸಿರುವ ಲಿಂಗಸೂಗೂರು ನ್ಯಾಯವಾದಿಗಳ ಸಂಘದ ಪಧಾಧಿಕಾರಿಗಳಿಗೆ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ನ್ಯಾಯದೀಶರಾದ ಬಿ,ಬಿ.ಜಕಾತಿ, ಚಂದ್ರಶೇಖರ ದಿಡ್ಡಿ, ದೇಶಮುಖ ಶಿವಕುಮಾರ, ಉಚ್ಚನ್ಯಾಯಲಯಾ ಬೆಂಗಳೂರು ವಕೀಲರಾದ ಎಸ್.ಶಂಕರಪ್ಪ ಶ್ರೀನಿವಾಸ, ಬಿ.ವಿ. ಹಾಗೂ ಲಿಂಗಸುಗೂರು ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಭೂಪನಗೌಡ ಕರಡಕಲ್, ಕಾರ್ಯದರ್ಶಿಯಾದ ಬಾಲರಾಜಸಾಗರ ಮಾನಮಟ್ಟಿ, ಉಪಾಧ್ಯಕ್ಷರಾದ ಬಸಲಿಂಗಯ್ಯ ವಸ್ತ್ರದ ಹಾಗೂ ವಿವಿಧ ತಾಲೂಕಿನ ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.