ಸಿದ್ದಗಂಗಾ ಶ್ರೀ ರತ್ನ ಪ್ರಶಸ್ತಿಗೆ ಶ್ವೇತಾ ಆಯ್ಕೆ
ತಾಳಿಕೋಟೆ:ಮಾ.30: ತಾಲೂಕಿನ ತುರಕನಗೇರಿ ಗ್ರಾಮದ ಡಾ.ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಜಿ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ, ಸಿದ್ದಗಂಗಾ ಕರಿಯರ ಅಕಾಡೆಮಿ ವತಿಯಿಂದ ಪ್ರತಿವರ್ಷ ಕೊಡಮಾಡಲಾಗುವ ಸಿದ್ದಗಂಗಾ ಶ್ರೀರತ್ನ ಪ್ರಶಸ್ತಿಗೆ ತಾಳಿಕೋಟೆಯ ಕುಮಾರಿ ಶ್ವೇತಾ ಯರಗಲ್ ಅವರು ಆಯ್ಕೆ ಯಾಗಿದ್ದಾರೆ.
ಏಪ್ರೀಲ್ 1 ರಂದು ತುರಕನಗೇರಿಯಲ್ಲಿ ನಡೆಯಲಿರುವ ಡಾ.ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಜಿಯವರ 117ನೇ ವರ್ಷದ ಜಯಂತ್ಯೋತ್ಸವ ಮತ್ತು 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕುಮಾರಿ ಶ್ವೇತಾ ಯರಗಲ್ ಅವರಿಗೆ ಪ್ರಧಾನ ಮಾಡಲಿದ್ದಾರೆ.