ಎ. 3 ರಿಂದ 5 ವರೆಗೆ ಬೀದರ್ ಕ್ರಾಂತಿ ಗಣೇಶ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮ
ಬೀದರಃಮಾ.30: ಬೀದರ ನಗರದ ಶಹಾಗಂಜನಲ್ಲಿರುವ ಶ್ರೀ ಕ್ರಾಂತಿ ಗಣೇಶ ಮಂದಿರದಲ್ಲಿ ಎಪ್ರಿಲ್ 3-4 ಮತ್ತು 5 ರಂದು ಮೂರು ದಿನಗಳ ಕಾಲ ಹೋಮ, ಹವನ, ಯಜ್ಞಗಳು, ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣದ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮಗಳು ಜರುಗಲಿವೆ ಎಂದು ಕ್ರಾಂತಿ ಗಣೇಶ ಮಂದಿರದ ಕ್ರಾಂತಿ ಗಣೇಶ ಟ್ರಸ್ಟ್ ಅಧ್ಯಕ್ಷರಾದ ಎನ್. ಆರ್. ವರ್ಮಾ, ಪ್ರಧಾನ ಕಾರ್ಯದರ್ಶಿ ಸುಭಾಷ ವಾಘಮಾರೆ, ಉಪಧ್ಯಕ್ಷ ಬಾಬುರಾವ ಕಾಮಶೆಟ್ಟಿ, ಕೋಶಾಧ್ಯಕ್ಷ ಲಕ್ಷ್ಮಣರಾವ ಬೀದರಕರ್, ಜಂಟಿ ಕಾರ್ಯದರ್ಶಿ ರಾಚಪ್ಪ ಪೋಲಕಪಳ್ಳಿ, ಮತ್ತು ಸಂಚಾಲಕರಾದ ಸಂಗಮೇಶ ಪಾಟೀಲ ಮಳಚಾಪೂರ ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
3-4-2024 ರಂದು ಬೆಳಿಗ್ಗೆ 8 ಗಂಟೆಗೆ ಮಹಾಕುಂಭಗಳ ಮೆರವಣಿಗೆ ಸದರಿ ಮಂದಿರದಿಂದ, ಜೈನ ಮಂದಿರ, ಸ್ಟೇಷನ್ ರಸ್ತೆ, ಡಾ. ಬಿಆರ್. ಅಂಬೇಡ್ಕರ್ ಸರ್ಕಲಗೆ ತೆರಳಿ ಮಂದಿರಕ್ಕೆ ತಲುಪುವುದು. ಎಪ್ರಿಲ್ 4 ರಂದು ಧಾರ್ಮಿಕ ಕಾರ್ಯಕ್ರಮಗಳು, ಎಪ್ರಿಕ್ 5 ರಂದು ಬೆಳಿಗ್ಗೆ 10-31 ಕ್ಕೆ ನೂತನ ಶಿವಲಿಂಗ ಪ್ರತಿಷ್ಠಾಪನೆ, ನಾಗದೇವತಾ ಪ್ರತಿಷ್ಠಾಪನೆ, ನಂದಿ ಮೂರ್ತಿ ಪ್ರತಿಷ್ಠಾಪನೆ, ಕ್ರಾಂತಿ ಗಣೇಶ ಮೂರ್ತಿ ಪುನರ್ ಪ್ರಾಣ ಪ್ರತಿಷ್ಠಾಪನೆ ಮತ್ತು ಮಂದಿರದ ನೂತನ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ. ನಂತರದಿಂದ ಮಹಾ ಪ್ರಸಾದ ವಿತರಣೆ ಕಾರ್ಯಕ್ರಮ ಇರುವುದು.
1-2-1987 ರಲ್ಲಿ ಮೂರ್ತಿ ಸ್ಥಾಪನಾ ಮಹೋತ್ಸವ ಕಾರ್ಯಕ್ರಮ ನಡೆದಿದ್ದು, ಕ್ರಾಂತಿ ಗಣೇಶ ಟ್ರಸ್ಟ್ ದಿಂದ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಆಗಿನ ಶಾಸಕರಾಗಿದ್ದ ದಿ. ಡಾ. ಗುರುಪಾದಪ್ಪ ನಾಗಮಾರಪಲ್ಳಿ, ಮಾಜಿ ಮಂತ್ರಿ ವೀರಶೆಟ್ಟಿ ಕುಶನೂರು, ಮಾಜಿ ಶಾಕ ಮಾಣಿಕರಾವ ಫುಲೇಕರ್, ನಾರಾಯಣರಾವ ಮನ್ನಳ್ಳಿ, ಯುವ ನಾಯಕ ಬಂಡೆಪ್ಪ ಖಾಶೆಂಪುರ, ರಮೇಶ ಆಗ್ರವಾಲ್, ಎಂ. ಯಾದಗಿರಿ ರೆಡ್ಡಿ, ಶಿವಶರಣಪ್ಪ ವಾಲಿ, ಕಮಲಾಕರ್ ಜ್ಯೋಶಿ, ಶಿವರತನ ಮಾಲಾನಿ, ಸುಭಾಷ ಮೊಟ್ಟಿ, ವಿಶ್ವನಾಥ ಮುಸ್ತಾಪುರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚಿದಂಬರಾಶ್ರಮ ಸಿದ್ಧಾರೂಢ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷÀತೆಯನ್ನು ಟ್ರಸ್ಟನ ಅಧ್ಯಕ್ಷ ಎನ್. ಆರ್. ವರ್ಮಾ ವಹಿಸಿಕೊಂಡಿದ್ದರು. 1-1-2017 ರಂದು ಕ್ರಾಂತಿ ಗಣೇಶ ಮಂದಿರದ ಪೂರ್ತಿ ಸ್ಥಾಪನೆಯ 30ನೆಯ ವಾರ್ಷಿಕೋತ್ಸವ ಸಮಾರಂಭ ಅದ್ದೂರಿಯಾಗಿ ನಡೆದಿತ್ತು ಎಂದು ಅವರುಗಳು ತಿಳಿಸಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಸ್ತ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.