ಮಾನವ ಚಿಂತನೆ ದಿನವೇ ಗುಡ್ ಫ್ರೈಡೆ
ದೇವದುರ್ಗ.ಮಾ.೩೦- ಯೇಸುಕ್ರಿಸ್ತ ತ್ಯಾಗ, ಶಾಂತಿ, ಪ್ರೀತಿ, ಸಹನೆ, ಕರುಣೆಯ ಉದಾತ ಮಾನವೀಯ ಗುಣಗಳನ್ನು ಜಗತ್ತಿಗೆ ಹಂಚಿಹೋಗಿದ್ದಾರೆ. ಇದರ ಪ್ರತೀಕವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಮಾನವ ಉದಾತ್ತ ಚಿಂತನೆಯ ದಿನವೇ ಗುಡ್ ಫ್ರೈಡೆ ಎಂದು ಶಿಕ್ಷಕಿ ಶಶಿಕಲಾ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುಡ್ ಫ್ರೈಡೇ ಅಂಗವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ಶುಕ್ರವಾರ ಮಾತನಾಡಿದರು. ಯೇಸು ಕ್ರಿಸ್ತರ ಸನ್ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದರು. ಧರಣಿಪತಿ ಪಾದ್ರಿ ಸೈಮನ್, ಜೀವರಾಜ್, ಮಂಗಲ್ ರಾಜ್, ಅನಿತಾ ಅಮ್ಮನವರ್, ರವಿಕುಮಾರ, ಅರುಣ್‌ಕುಮಾರ ಇತರರಿದ್ದರು.