ಲೋಕಸಭೆಯಲ್ಲಿ ತಪ್ಪದೆ ಮತದಾನ ಮಾಡಿ-ಮಹೇಶ
ದೇವದುರ್ಗ.ಮಾ.೩೦- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿ ಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಭಜಂತ್ರಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪುರಸಭೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಸಂವಿಧಾನದಲ್ಲಿ ೧೮ವರ್ಷ ತುಂಬಿದ ಎಲ್ಲರಿಗೂ ಮತದಾನ ಹಕ್ಕು ನೀಡಿದ್ದಾರೆ. ಮತದಾನ ಪವಿತ್ರವಾದ ಕರ್ತವ್ಯವಾಗಿದ್ದು ಯಾರು ಕೂಡ ವೋಟಿಂಗ್ ತಪ್ಪಿಸಿಕೊಳ್ಳಬಾರದು. ಆಸೆ, ಆಮಿಷಕ್ಕೆ ಒಳಗಾಗದೆ ಉತ್ತಮ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದು ಹೇಳಿದರು.
ನಂತರ ಸಾರ್ವಜನಿಕರಿಗೆ ಕಡ್ಡಾಯ ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಳಿಕ ವಿವಿಧ ಬಡಾವಣೆಯಲ್ಲಿ ಜಾಗೃತಿ ಜಾಥಾ ನಡೆಸಿ ಬಿತ್ತಿಪತ್ರ ಹಂಚಿ ಅರಿವು ಮೂಡಿಸಲಾಯಿತು. ಪುರಸಭೆ ವ್ಯವಸ್ಥಾಪಕ ಗಂಗಾಧರ್, ಇಂಜಿನಿಯರ್ ಶರಣಪ್ಪಗೌಡ, ಜಾಕಿರ್ ಹುಸೇನ್, ರಾಮಣ್ಣ, ಅಕ್ಬರ್, ಅಂಜು, ಲಕ್ಷ್ಮಣ್ ಕಟ್ಟಿಮನಿ, ಲಿಂಗನಗೌಡ, ರಂಗಪ್ಪ ನಾಯಕ್, ಬಸವರಾಜ್ ದಫೇದಾರ್, ಬಸವರಾಜ್, ಮಲ್ಲಪ್ಪ, ಕಸಾಪ ಅಧ್ಯಕ್ಷ ಎಚ್.ಶಿವರಾಜ ಇತರರಿದ್ದರು.
೩೦ಡಿವಿಡಿ-೨