ರಾಧ ನಗರದಲ್ಲಿ ನೂರಾರು ಮರಗಳು ಬೆಂಕಿಗೆ ಅಹುತಿ
ಸಂಜೆವಾಣಿ ವಾರ್ತೆ
ಸಂಡೂರು: ಮಾ:30,  ಸಂಡೂರು ತಾಲೂಕಿನ ಸುಶೀಲಾನಗರ ಗ್ರಾಮದ ಹತ್ತಿರ ಇರುವ ರೈತರ ತೋಟದಲ್ಲಿ ಬೆಳೆದಿದ್ದ ನೂರಾರು ಗಿಡಗಳು ಆಕಸ್ಮಿಕವಾಗಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ವಿಪರೀತವಾಗಿ ಹಾನಿಯಾಗಿದೆ.
ರೈತರೊಬ್ಬರು ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಚಾರವನ್ನು ತಿಳಿದ ಅಗ್ನಿ ಶಾಮಕ ದಳದವರು ರೈತನ ಹೊಲಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟರಾದರೂ ಅಷ್ಟು ಹೊತ್ತಿಗೆ 200ಕ್ಕೂ ಹೆಬ್ಬೇವು, 30 ಸಪೋಟ, 20 ಮಾವು, 20 ನೇರಳೆ 5 ಬಾದಾಮಿ, 5 ನಿಂಬೆ, 5 ತೆಂಗು, 15 ರಕ್ತ ಚಂದನ 20 ಹಲಸು, 10 ಬಿದಿರು 30 ತೇಗದ ಮರಗಳು ಸುಟ್ಟು ಬೂದಿಯಾಗಿವೆ. ಇವುಗಳ ಜೊತೆಗೆ ಕೊಳವೆ ಬಾವಿಯ ವಿದ್ಯುತ್ ಸಂಪರ್ಕ ಮತ್ತು ತೋಟಗಾರಿಕೆ ಇಲಾಖೆಯವರು ಹಾಕಿದ್ದ ಪೈಪ್ ಲೈನ್ ಸುಟ್ಟಿದೆ.
ಈ ಕುರಿತು ಹೊಲದ ಮಾಲೀಕ ರೈತ ಮಾತನಾಡಿ 4 ಎಕರೆ ಪಟ್ಟಾ ಜಮೀನಿನಲ್ಲಿ ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದಿದ್ದ ಮತ್ತು ಫಲಕೊಡುತ್ತಿದ್ದ ನೂರಾರು ಗಿಡಗಳು ಬೆಂಕಿಗೆ ಅಹುತಿಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದರೂ ಸ್ಪಂದಿಸಲಿಲ್ಲದೇ ಇರುವುದು ನೋವಿನ ಸಂಗತಿ ತಡ ನಂತರ ಅಗ್ನಿ ಶಾಮಕದವರು ನಂದಿಸಿದ್ದಾರೆ. ಲಕ್ಷಾಂತರ ಮೌಲ್ಯದ ಗಿಡಮರಗಳು ವಿದ್ಯುತ್ ಉಪಕರಣಗಳು ಹನಿ ನೀರಾವರಿ ವ್ಯವಸ್ಥೆಗೆ ಅಳವಡಿಸಿದ್ದ ಪೈಪ್‍ಗಳು ಬೆಂಕಿಗೆ ಅನಾಹುತವಾಗಿವೆ. ಗ್ರಾಮ ಲೆಕ್ಕಿಗ ದೇವರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.