ಅರೆಸೇನಾ ಪಡೆಯಿಂದ ಪಥ ಸಂಚಲನ
ದೇವದುರ್ಗ.ಮಾ.೩೦- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ಅರೆಸೇನಾ ಪಡೆ ಹಾಗೂ ಪೊಲೀಸರು ಶುಕ್ರವಾರ ಸಂಜೆ ಶಿಸ್ತಿನ ಪಥ ಸಂಚಲನ ನಡೆಸಿದರು.
ಇಲ್ಲಿನ ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನ, ಮಿನಿವಿಧಾನಸೌಧ ರಸ್ತೆ, ಕೆಇಬಿ ರೋಡ್, ಜೆಪಿ ವೃತ್ತ, ಹೊಸ ಬಸ್ ನಿಲ್ದಾಣ, ಎಪಿಎಂಸಿ ರಸ್ತೆ, ನಗರಗುಂಡ ಕ್ರಾಸ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕಟಕರಕಟ್ಟೆ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ಸರ್ಕಲ್ ಮೂಲಕ ಪುನಃ ಪೊಲೀಸ್ ಠಾಣೆಗೆ ಬಂದು ಸೇರಿತು. ಸೇನಾಪಡೆ ಜತೆ ಪೊಲೀಸರು ಪಥ ಸಂಚಲನ ನಡೆಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ನಾಲ್ಕೈದು ಕಡೆ ಅರೆಸೇನಾ ಪಡೆ ಹಾಗೂ ಪೊಲೀಸರು ಜಂಟಿಯಾಗಿ ಪಥ ಸಂಚಲನ ನಡೆಸಿ ಜನರಿಗೆ ಜಾಗೃತಿ ಮೂಡಿಸಲಿದ್ದಾರೆ. ದೇವದುರ್ಗ, ಗಬ್ಬೂರು, ಜಾಲಹಳ್ಳಿ, ಮಸರಕಲ್ ಸೇರಿ ಸೂಕ್ಷ್ಮ, ಅತಿಸೂಕ್ಷ್ಮ ಸ್ಥಳದಲ್ಲಿ ಪಥ ಸಂಚಲನೆ ನಡೆಸಿ ಚುನಾವಣೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಾಗುವುದು ಎಂದು ಸಿಪಿಐ ಸುಭಾಷ್ ಚಂದ್ರ ತಿಳಿಸಿದ್ದಾರೆ. ಪಿಐ ಅಶೋಕ ಸದಲಗಿ, ಪಿಎಸ್‌ಐ ಸಿದ್ದರಾಮಪ್ಪ ಹಾಗೂ ಸಿಬ್ಬಂದಿ ಇದ್ದರು.
೩೦ಡಿವಿಡಿ-೧
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇವದುರ್ಗದಲ್ಲಿ ಅರೆಸೇನಾ ಪಡೆ ಹಾಗೂ ಪೊಲೀಸರು ಪಥ ಸಂಚಲನ ನಡೆಸಿದರು.