ಜಾತ್ರಾ ಮಹೋತ್ಸವ ತಂಪಾದ ಕುಡಿಯುವ ನೀರಿನ ವ್ಯವಸ್ಥೆ
ಕಲಬುರಗಿ: ಮಾ,30: ಪ್ರತಿವರ್ಷದಂತೆ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕಲಬುರಗಿ ಜಿಲ್ಲಾ ಸವಿತಾ ಸಮಾಜ ಯುವಕ ಸಂಘದ ವತಿಯಿಂದ ಆನಂದ ವಾರಿಕ ಅವರ ನೇತೃತ್ವದಲ್ಲಿ ಲಾಲಗಿರಿ ಕ್ರಾಸ್ ಹತ್ತಿರ ಜಾತ್ರಾ ಮಹೋತ್ಸವ ಆಚರಣೆಗೆ ಬರುವ ಭಕ್ತಾದಿಗಳಿಗೆ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಶ್ರೀ ಶರಣಬಸವೇಶ್ವರರ ಕೃಪೆಯಿಂದ ಸರಿಯಾದ ಮಳೆ ಬೆಳೆಯಾಗಲಿ ನಾಡಿನ ಜನತೆಗೆ ಸುಖ ಸಂತೋಷ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಆನಂದ ವಾರಿಕ ಮಾತನಾಡಿದರು ಇದೆ ಸಂದರ್ಭದಲ್ಲಿ ಮಹೇಶ ಪಾಣೆಗಾಂವ ಪ್ರಕಾಶ್ ಹುಣಸಿಗೇರಾ ಭೋಜರಾಜ ಕುಲಕುಂದಾ ನರಸಿಂಹಲು ಅಡಕಿ ನಾಗರಾಜ ಕುಕನೂರ ರಾಜು ಪಾಣೆಗಾಂವ ಕಿರಣ ಚಿಕಲಿಕರ ವಿದ್ಯಾಸಾಗರ ಹಾಬಾಳ ಅಂಬರೀಷ್ ಇಟಗಾ ಶಶಿಕುಮಾರ್ ಮದ್ದೂರ ಗುಂಡು ಅಣಕಲ್ ಅನೀಲಕುಮಾರ ಗೋಗಿ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.