ಜಿಲ್ಲೆಗೊಂದು ಕಲಾವಿದರ ಕಾಲನಿ ಸ್ಥಾಪಿಸುವುದು ಅಗತ್ಯ: ಭೃಂಗಿಮಠ
ಕಲಬುರಗಿ:ಮಾ.30: ಕಲಾವಿದರ ,ಸಮಾಜಸೇವಕರ ಮತ್ತು ಜನಪರ ಕೆಲಸ ಮಾಡುವವರ ಆರ್ಥಿಕ ಬದುಕು ಸಂಕಷ್ಟದಲ್ಲಿದೆ,ಕಲಾವಿದರಿಗೆ ಮನೆ ಬಾಡಿಗೆ ಕೊಡಬೇಕಾದರೂ ಸಮಾಜ ಹಿಂದೆ ಮುಂದೆ ನೋಡುತ್ತಿದೆ ಆದ್ದರಿಂದ ಕಲಾವಿದರಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕಾಗಿದ್ದು ಸರಕಾರವೇ ಪ್ರತಿ ಜಿಲ್ಲೆಗೆ ಒಂದು ಕಲಾವಿದರ ಕಾಲೂನಿ ನಿರ್ಮಾಣ ಮಾಡಿ ಕಲಾವಿದರು ವಾಸಿಸಲು ಮನೆ ಯೋಜನೆ ಜಾರಿಮಾಡಬೇಕಾದ ಅನಿವಾರ್ಯ ಪ್ರಸಂಗ ಬಂದಿದೆ ಎಂದು ಖ್ಯಾತ ಹಿರಿಯ ನ್ಯಾಯವಾದಿ ಹಾಗೂ ಸಮಾಜ ಸೇವಕ ಮಲ್ಲಿಕಾರ್ಜುನ ಜಿ.ಭೃಂಗಿಮಠ ಹೇಳಿದರು.
ಅವರು ಇಲ್ಲಿನ ಶ್ರೀ ಶ್ರೀ ಸಿದ್ದರಾಮ ಶಿವಯೋಗಿಗಳ ಪುಣ್ಯಾಶ್ರಮ ಕೋಟನೂರಲ್ಲಿ ಕಲ್ಯಾಣ ನಾಡಿನ ಕಲಾ ಬಳಗ ಹಮ್ಮಿಕೊಂಡಿದ್ದ ತತ್ವಪದ ಸಿಂಚನ ಸಂಗೀತ ಕಾರ್ಯಕ್ರಮ ಹಾಗೂ ಮತ್ತು ಸೃಜನಶೀಲ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ,ಸೃಜನಶೀಲ ಪ್ರಶಸ್ತಿ ಸ್ವೀಕರಿಸಿ ಮಾತಮಾಡಿತ್ತಿದ್ದರು.
ಇಂದಿನ ಆಧುನಿಕ ಯುಗದಲ್ಲಿ ಸಾಕಷ್ಟು ಜನ ಪ್ರತಿಭಾನ್ವಿತ ಕಲಾವಿದರಿದ್ದಾರೆ ಅವರನ್ನು ಪೆÇ್ರೀತ್ಸಾಹಿಸಿ ಬೆಳಸಬೇಕಿದೆ ಅದೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಕಿತ್ತೂರ ಕರ್ನಾಟಕದ ಕಲಾವಿದರ ಪ್ರತಿಭೆ ವಿಶ್ವಕ್ಕೆ ಮಾದರಿಯಸಗಿದೆ,ತಾಳ,ರಾಗ ಭಾವ ಸಂಗಮದ ಸಿಂಚನ ಆತ್ಮಕ್ಕೆ ತೃಪ್ತಿನೀಡುತ್ತದೆ, ಕಲೆಗೆ ಅದ್ಭುತವಾದ ಶಕ್ತಿ ಇದೆ,ತಾನಸೇನ ಮಹಾ ಗಾಯಕ ಚೇತನರು ರಾಗ ಹಾಡಿ ದೀಪ ಹಚ್ಚಿದರು ಎಂಬ ಸಂಗತಿ ಇತಿಹಾಸದಿಂದ ನಮಗೆ ತಿಳಿದುಬರುತ್ತದೆ ,ಕಲೆಯ ವಿವಿಧ ವಾಧ್ಯಗಳ, ಪರಿಕರಗಳನಾದವು ನಾದಲೋಕವನ್ನೇ ಸೃಷ್ಠಿಸುತ್ತದೆ ಆದ್ದರಿಂದ ಕಲೆ ಉಳಿಸಿ ಬೆಳಸುವುದು ಸರಕಾರ ಸೇರಿದಂತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಹಿರಿಯ ಕಲಾವಿದ ಡಾ; ಶಿವಶಂಕರ ಬಿರಾದಾರ ಅವರು ಮಾತನಾಡಿ ಕಲ್ಯಾಣ ಕರ್ನಾಟದ ಕಲಾವಿದರು ವಿಶ್ವದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು ಆ ಪರಂಪರೆಯನ್ನು ಸತತ ಶ್ರಮದ ಮೂಲಕ ಇಂದಿನ ಕಲಾವಿದರು ಮುಂದುವರೆಸಬೇಕೆಂದರು.
ಹಿರಿಯ ಕಲಾವಿದರಾದ
ಶರಣಯ್ಯ ಸ್ವಾಮಿ,ಶ್ರೀ ಕಲ್ಲೂರ ದೇಸಾಯಿ ದತ್ತರಾಜ ಕಲಶೆಟ್ಟಿ, ಶ್ರೀ ಕೋಬಾಳ,ಶ್ರೀ ನಾಗನೂರು,ಬಡಗೇರ,ಹಿರೇಮಠ, ಶ್ರೀ ….ಮುಂತಾದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ಜನಮನಕ್ಕೆ ಸಂಗೀತದ ರಸದೂಟ ಬಡಸಿದರು.