ಶ್ರೀ ಯಮನೂರು ಸ್ವಾಮಿ ಉರುಸು ಯಶಸ್ವಿ.
ಸಂಜೆವಾಣಿ ವಾರ್ತೆ
ಕುಕನೂರು : ಪಟ್ಟಣದ  ಬಸ್ ನಿಲ್ದಾಣ ಹತ್ತಿರದ ಶ್ರೀ ಯಮನೂರು ಸ್ವಾಮಿ ಉರುಸು ಶುಕ್ರವಾರ ಸಂಜೆ ಅದ್ದೂರಿ ಯಾಗಿ ನೆರವೇರಿತು.  ಯಮನೂರ ಸ್ವಾಮಿ ಸೇವಾ ಸಮಿತಿಯ ಪ್ರಮುಖ ಮಲ್ಲಪ್ಪ ಚಳ್ಳಮರದ ಪತ್ರಿಕೆ ಜೊತೆ ಮಾತನಾಡಿ,  ಯಮನೂರಸ್ವಾಮಿ ದ ಗ೯ಕ್ಕ ಕಳೆದ ಹಲವಾರು ದಶಕಗಳ ಇತಿಹಾಸ ವಿದೆ, ಅಪಾರ ಸಂಖ್ಯೆಯ ಭಕ್ತರು ಇದ್ದಾರೆ ನಂಬಿದವರ ಇಸ್ತಾಥ೯ ಈಡೇರಿಸುವ ಶಕ್ತಿ ಸ್ವಾಮಿ ಗಿದೆ, ಇತ್ತೀಚೆಗೆ ಭಕ್ತರ ಸಹಕಾರದೊಂದಿಗೆ  ದೇಗುಲವು ಹಂತ ಹಂತ ಅಭಿವೃದ್ದಿ ಆಗುತ್ತಿದೆ ಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವಂತೆ ಕಮಿಟಿ ಶ್ರಮಿಸುತ್ತಿದೆ ಎಂದು ತಿಳಿಸಿದರು.     
ಭಕ್ತರು ಬೆಳಿಗ್ಗೆ ಯಿಂದ ಸಕ್ಕರೆ ಓದೀಸುವ ಮೂಲಕ ಬೇಡಿಕೊಂಡರು, ನಂತರ ರಾತ್ರಿ ರಾಮ ದುಗ೯ ಗೀಗೀ ಪದ ತಂಡದಿಂದ ಗೀಗೀ ಪದಗಳು ಜರುಗಿದವು. ಸಮಿತಿ ಅಧ್ಯಕ್ಷ  ಯಲ್ಲಪ್ಪ ಕಲಾಲ್ , ಗೌರವ ಅಧ್ಯಕ್ಷ ದೊಡ್ಡ ಯಮನೂರಸಾಬ್ ಬೇದವತ್ತಿ,ಸಣ್ಣ ಯಮನೂರ್ ಸಾಬ್, ಮಂಜಪ್ಪ ಕಲಾಲ್,ರಹಿಮಾನಸಾಬ,ಲಾಲ್ ಸಾಬ್ ನಿತ್ತಾಲಿ, ಮಲ್ಲಪ್ಪ ತಳವಾರ್ ಇದ್ದರು.