ಶ್ರೀ ದುಗಾ೯ದೇವಿ ಅದ್ದೂರಿ ಜಾತ್ರೆ
ಸಂಜೆವಾಣಿ ವಾರ್ತೆ
ಕುಕನೂರು: ಸ್ಥಳೀಯ ೮ನೆಯ ವಾಡಿ೯ನ ಭಜೆಂತ್ರಿ. ಕಾಲೋನಿಯ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವ ಶುಕ್ರವಾರ  ಸಂಜೆ ನೆರವೇರಿತು.  ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ದಾಮಿ೯ಕ ಪೂಜಾ ಕಾಯ೯ ನೆರವೇರಿದವು. ನಂತರ ಅನ್ನ ಸಂತಪ೯ಣೆ ಜರುಗಿತು. ಹಲವಾರು ಭಕ್ತರು ಪ್ರಸಾದ ಸ್ವೀಕರಿಸಿದರು. ನಂತರ ಸಂಜೆ ದುಗಾ೯ದೇವಿ ಭಾವಚಿತ್ರ ದ ಮೆರವ ವಣಿಗೆಯನ್ನು ಸಾರೂಟದಲ್ಲಿ ಮೆರವಣಿಗೆ ಮೂಲಕ ಹಾಗೂ ಭಾಜಾ ಭಾಜೆಂತ್ರಿ ವಾದ್ಯಗಳ ಮೂಲಕ ಕುಕನೂರಿನ ಪ್ರಮುಖ ಬೀದಿಗಳಲ್ಲಿ  ಮೆರವಣಿಗೆ ನಡೆಸಿದರು. ಜಾತ್ರಾ ಮಹೋತ್ಸವದ ಪ್ರಮುಖ ಬಸವರಾಜ್ ಕಿತ್ತೂರು ಮಾತನಾಡಿ, ಪ್ರತಿ ಮೂರು ವರುಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ, ಭಾಜೆಂತ್ರಿ. ಸಮುದಾಯ ಮತ್ತು ಇತರೆ ಸಮಾಜದ  ಭಕ್ತರು ಜಂಟಿ ಯಾಗಿ ಸೇವೆ ಸಲ್ಲಿಸುತ್ತಾರೆ, ದೇವಿಯು ನಂಬಿದವರನ್ನು ಕೈಬಿಡುವುದಿಲ್ಲ ಇಂಥ ದೇವಿ ಜಾತ್ರೆಯನ್ನು ಮೂರು ವರ್ಷ ಕ್ಕೊಮ್ಮೆ ಸಂಭ್ರಮದಿಂದ ಮುನ್ನಡೆದಿದೆ ಎಂದು ತಿಳಿಸಿದರು. ಸಮಾಜದ ಪ್ರಮುಖರಾದ ಮುರಾರಿ ಶಿವಪ್ಪ ಭಜಂತ್ರಿ,    ಶಶಿ ಭಜೆಂತ್ರಿ, ನಾಗರಾಜ್ ದಾಸಪ್ಪ ಭಾಜೆಂತ್ರಿ, ದುರಗಪ್ಪ ಭಜಂತ್ರಿ, ಕಲಾವಿದ ಮುಕುಂದ, ಸಣ್ಣ ಯಮನೂರಪ್ಪ, ದೊಡ್ಡ ಯಮನೂರಪ್ಪ ,ಕುಬೇರಪ್ಪ , ಹುಲಗಪ್ಪ ಬಸಪ್ಪ, ಸೇರಿದಂತೆ ಅನೇಕ ಮುಖಂಡರು ನೇತೃತ್ವ ವಹಿಸಿದ್ದರು.