ಅನಾಥರ ಆಶಾಕಿರಣ ರುದ್ರಮ್ಮ ನಿಧನ
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.30:  ಅನಾಥ ಮತ್ತು ವೃದ್ಧರ ರಕ್ಷಕಿಯಾದ ಕೊಟ್ಟೂರಿನ ಅಮ್ಮ ಎಂದೇ ಪ್ರಖ್ಯಾತವಾಗಿರುವ ಉತ್ತಂಗಿ ರುದ್ರಮ್ಮ (83) ನಿಧನರಾಗಿದ್ದಾರೆ.
ಸುಮಾರು 30 ವರ್ಷಗಳಿಂದ ತನ್ನ ಗಂಡನ ಪಿಂಚಣಿಯಿಂದ ರುದ್ರಮ್ಮ ಅನಾಥಶ್ರಮ ಸೇವಾ ಟ್ರಸ್ಟ್ ಸ್ಥಾಪಿಸಿ ಅನೇಕ ಅನಾಥ, ವೃದ್ಧರು, ಅಂಗವಿಕಲರನ್ನು ಸಾಕಿದ್ದರು. ಇವರಿಗೆ ತಿಂಗಳಿಂದ ಆರೋಗ್ಯದ ಸಮಸ್ಯೆ ಏರುಪೇರಾಗಿತ್ತು, ಶುಕ್ರವಾರ 1 ಗಂಟೆಯ ಸಮಯದಲ್ಲಿ ತೀರಿಕೊಂಡಿದ್ದಾರೆ. ಇಲ್ಲಿನ 16 ಜನ ಅನಾಥರು, ವೃದ್ಧರು, ಅಂಗವಿಕಲರು, ದಿಕ್ಕು ತೋಚದಂತೆ ಕಂಬನಿ ಮಿಡಿದಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಇವರ ಹೋರಾಟ ಬದುಕಿನ ಜೀವನದ ಹಿನ್ನೆಲೆ ನಾಟಕವಾಗಿ ಪ್ರದರ್ಶನಗೊಂಡಿದ್ದು ಹಾಗೂ ಲೇಖಕ ಉಜ್ಜಿನಿ ರುದ್ರಪ್ಪ ಅಮ್ಮ ಎಂಬ ಪುಸ್ತಕವನ್ನು ರಚಿಸಿ ಹೊರ ತಂದಿದ್ದಾರೆ.
ಇವರ ಸಾವಿಗೆ ಅನೇಕ ಮುಖಂಡರು ಮತ್ತು ಸಂಘಟನೆಗಳು ಕಂಬನಿ ಮಿಡಿದಿದ್ದಾರೆ.
One attachment • Scanned by Gmail