ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷ  ಕೂಡ್ಲಿಗಿ ಎನ್.ಎಂ. ನಬಿ ಕಾಂಗ್ರೆಸ್ ಗೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.30 :- ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ  ಹಾಗೂ ಸಣ್ಣಕೈಗಾರಿಕೆಯ ಮಾಜಿ ಸಚಿವರಾಗಿದ್ದ ಕೂಡ್ಲಿಗಿಯ  ಎನ್.ಎಂ. ನಬಿ ಹಾಗೂ ಅವರ ಪುತ್ರ ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಎನ್.ಎಂ. ನೂರ್ ಅಹಮದ್ ಹಾಗೂ ಜೆಡಿಎಸ್ ಮಹಿಳಾ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಹಾಗೂ ಜೆಡಿಎಸ್ ವಕ್ತಾರೆ ನಜ್ಜಾ ನಜೀರ್‌ಶುಕ್ರವಾರ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಜೆಡಿಎಸ್‌ನಲ್ಲಿ ಎಚ್.ಡಿ. ಕುಮಾರಸ್ವಾಮಿ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಕೂಡ್ಲಿಗಿಯ ಮಾಜಿ ಸಚಿವ ಎನ್.ಎಂ. ನಬಿ ಹಾಗೂ ಅವರ ಪುತ್ರ ಎನ್.ಎಂ. ನೂರ್‌ಅಹಮದ್   ಈ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್‌  ಸೇರ್ಪಡೆಗೊಂಡಿದ್ದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆ ಎಂಬಂತೆ ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಕೈಜೋಡಿಸಿದ   ಹಿನ್ನಲೆಯಲ್ಲಿ  ಈಗ ಪುನಃ ಕಾಂಗ್ರೆಸ್ ನತ್ತ ಮುಖ ಮಾಡಿ ನಿನ್ನೆ ಕೆಲ ಬೆಂಬಲಿಗರ ಜೊತೆ ಕಾಂಗ್ರೆಸ್  ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣಾ ಹೊತ್ತಿನಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಎನ್‌.ಎಂ. ನಬಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ಕೂಡ್ಲಿಗಿ ಕ್ಷೇತ್ರದಲ್ಲಿ  ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ.ಇವರುಗಳ ಸೇರ್ಪಡೆಯಿಂದ  ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತಾ ಎನ್ನುವ ಚರ್ಚೆ ನಡೆಯುತ್ತದೆ.
ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜನಪರ ಆಡಳಿತ ನೀಡುತ್ತಿದ್ದಾರೆ. ಜೆಡಿಎಸ್ ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿದ್ದರಿಂದ ಜೆಡಿಎಸ್ ನ ಸ್ಥಾನಗಳಿಗೆ ರಾಜೀನಾಮೆ ನೀಡಿ  ಶುಕ್ರವಾರ  ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ನೇತೃತ್ವದಲ್ಲಿ ನಾನು, ನನ್ನ ಪುತ್ರ ನೂರ್ ಅಹಮದ್‌ ಹಾಗೂ ಜೆಡಿಎಸ್ ವಕ್ತಾರೆ ನಜ್ಜಾ ನಜೀರ್‌ಹಾಗೂ ಅಪಾರಕಾರ್ಯಕರ್ತರ ಜೊತೆಕಾಂಗ್ರೆಸ್‌ ಸೇರ್ಪಡೆಗೊಂಡಿದ್ದೇವೆ ಎಂದು ಮಾಜಿ ಸಚಿವ ಎನ್ ಎಂ ನಬೀ ತಿಳಿಸಿದರು.