ಯುವ ಚಿತ್ರ ಬಿಡುಗಡೆ:ಅಭಿಮಾನಿಗಳಿಂದ ಭರ್ಜರಿ ಸ್ವಾಗತ!
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ30: ಬಹು ನಿರೀಕ್ಷಿತ ಯುವ ರಾಜಕುಮಾರ್ ನಟನೆ ಯುವ ಚಿತ್ರ ಹೊಸಪೇಟೆ ನಗರದ ಮೂರು ಚಿತ್ರ ಮಂದಿರಗಳಲ್ಲಿ ಶುಕ್ರವಾರ ಅದ್ಧೂರಿ ಪ್ರದರ್ಶನ ಗೊಂಡಿತು.
ಲಕ್ಷಾಂತರ ಅಪ್ಪು ಅಭಿಮಾನಿಗಳನ್ನು ಹೊಂದಿರುವ ಹೊಸಪೇಟೆಯಲ್ಲಿ ಯುವ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಲಕ್ಷ್ಮೀ, ಸರಸ್ವತಿ ಹಾಗೂ ಮೀರಾಲಂ ಚಿತ್ರ ಮಂದಿರದ ಮುಂದೆ ತಮ್ಮ ನೆಚ್ಚಿನ ನಟ ಚಿತ್ರ ವೀಕ್ಷಣೆಗಾಗಿ ಗುರುವಾರ ರಾತ್ರಿಯಿಂದಲೇ ಅಭಿಮಾನಿಗಳು ಕಾದು ನಿಂತಿದ್ದರು. ಯುವರಾಜಕುಮಾರ್ ಬಾರಿ ಗಾತ್ರದ ಕಟೌಟ್‍ಗೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.
ಚಿತ್ರ ಮೊದಲ ಶೋ ತೆರೆಯ ಮೇಲೆ ಪ್ರದರ್ಶನವಾಗುತ್ತಿಂದತೇ ಅಭಿಮಾನಿಗಳ ಸಿಳ್ಳೆ,ಕೇಕೆ ಮುಗಿಲು ಮಟ್ಟಿತು. ಇತ್ತೀಚಿಗಷ್ಟೆ ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಯುವ ಚಿತ್ರ ಪ್ರೀ-ಇವೆಂಟ್ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜಕುಮಾರ್, ವಿನಯ್ ರಾಜಕುಮಾರ್, ಅಶ್ವನಿ, ಯುವ ರಾಜಕುಮಾರ್, ನಟರಾದ ಸುಧಾರಾಣಿ, ಅಚ್ಚುತ್, ಗಾಯಕ ವಿಜಯ ಪ್ರಕಾಶ್ ಚಿತ್ರದ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಇತರರು ಭಾಗವಹಿಸಿದ್ದರು. ಕ್ರೀಡಾಂಗಣದಲ್ಲಿ ಅಪಾರ ಅಭಿಮಾನಿಗಳು ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.