ಶ್ರೀವಾದಿರಾಜ, ಶ್ರೀ ವ್ಯಾಸರಾಜರ ಆರಾಧನಾ ಮಹೋತ್ಸವ
ಸಂಜೆವಾಣಿ ವಾರ್ತೆ
ಬಳ್ಳಾರಿ:ಮಾ,30- ಯತಿವರೇಣ್ಯರಲ್ಲಿ ಪ್ರಖ್ಯಾತ ರಾದ ಶ್ರೀ ಶ್ರೀವಾದಿರಾಜ ಗುರುಗಳ ಹಾಗೂ ‌ಶ್ರೀಶ್ರೀ ವ್ಯಾಸರಾಜ‌ ಗುರುಸಾವ೯ಭೌಮರ  ಆರಾಧನಾ ಮಹೋತ್ಸವ ನ್ನು ಎರಡು ದಿನಗಳ ಕಾಲ  ರೇಡಿಯೋ ಪಾಕ೯ ಶ್ರೀ ವ್ಯಾಸರಾಜ ಮಠದಲ್ಲಿ‌ ಭಕ್ತಿ ಸಡಗರ ,ವೈಭವದಿಂದ ಆಚರಿಸಲಾಯಿತು ಎರಡು ದಿನಗಳ ಕಾಲ ಬೆಳಿಗ್ಗೆ ನೈಮಾ೯ಲ್ಯ ಪಂಚಬೃಂದಾವನಗಳಿಗೆ ಪಂಚಾಮೃತ ಅಭಿಷೇಕ ಜರುಗಿತು . ಅಷ್ಟೋತ್ತರ ಸಂಘಗಳಿಗಳಿಂದ ವೆಂಕಟೇಶ್ವರ ಸ್ತೋತ್ರ, ವಾಯುಸ್ತುತಿ ಪಾರಾಯಣ ಹಾಗೂ ರಾಘವೇಂದ್ರಸ್ಟಾಮೀಗಳ ಅಷ್ಟೋತ್ತರ ನಡೆಯಿತು ಆರಾಧನೆ ಅಂಗವಾಗಿವಿವಿಧ ಪಂಡಿತರಿಂದ  ವಿಶೇಷ ಉಪನ್ಯಾಸ ‌ಗಳು  ನಡೆದವು .ನಂತರ ರಜತ ರಥೋತ್ಸವ ನಡೆಯಿತು. ರಥೋತ್ಸವ ಸಮಯದಲ್ಲಿ ವಿವಿಧ ವಾದ್ಯ ಮೇಳ ಡೊಳ್ಳುಮಹಿಳಾ ಭಜನಾ ಮಂಡಳಿ ಗಳಿಂದ ಕೋಲಾಟ  ,ದೇವರನಾಮಗಳ ಸಾಮೂಹಿಕ ಸಂಕೀರ್ತನೆ ನಡೆಯಿತು. ಆರಾಧನೆ ಪ್ರಯುಕ್ತ ಪಂಚಬೃಂದಾವನಗಳಿಗೆ ರಜತ ಕವಚ ಅಲಂಕಾರ ನೂತನ ವಸ್ತ್ರ ಸಮರ್ಪಣೆಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸ ಲಾಗಿತ್ತು. ಆರಾಧನೆ ನಿಮಿತ್ತ ಶ್ರೀವಾದಿರಾಜರ ಹಾಗೂ ಶ್ರೀ ವ್ಯಾಸರಾಜರ ಕುರಿತು ‌ರಸಪ್ರಶ್ನೆ ಏರ್ಪಡಿ ಸಲಾಗಿತ್ತ್ವು ವಾದಿರಾಜ ಆರಾಧನಾ ದಿನದಂದು ಶ್ರೀ ವ್ಯಾಸರಾಜ ಭಜನಾ ಮಂಡಳಿಗಳ ಸದಸ್ಯರು ವಾದಿರಾಜ ಗುರುಗಳ ಕೀರ್ತನೆ ಹಾಗೂ ಅವರು ರಚಿಸಿದ ಕೃತಿಗಳನ್ನು  ಹಾಡಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಮಠದ ಅರ್ಚಕ ರಾದ ಶ್ರೀ ಪಾಂಡುರಂಗ ಆಚಾರ್ಯ ಬಹುಮಾನವಿತರಿಸಿ ದರು..
ಶ್ರೀ ವ್ಯಾಸರಾಜ ಆರಾಧನಾ ದಿನ ‌  ಸೋಸಲೆ ಶ್ರೀಸಮೀರಾಚಾರ್ ಇವರಿಂದ ದಾಸವಾಣಿ  ಕಾರ್ಯಕ್ರಮ ನಡೆಯಿತು ವಿವಿಧ ದೇವರ ಹಾಗೂ ದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ ನೆರೆದಿದ್ದ ಭಕ್ತರಿಗೆ ಮನಸ್ಸಿಗೆ  ಮುದ ನೀಡಿದರು. ಈ ಸಂದರ್ಭದಲ್ಲಿ ಶ್ರೀವ್ಯಾಸರಾಜ ಮಠಹಾಗು ವ್ಯಾಸರಾಜ ಭಜನಾ ಮಂಡಳಿ ವತಿಯಿಂದ ಶ್ರೀ ಸಮೀರಾ ಆಚಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಆರಾಧನಾ ಅಂಗವಾಗಿ  ಮಠದಲ್ಲಿ ಮಹಾಮಂಗಳಾರತಿ ಅಲಂಕಾರ ‌ಭೋಜನ ಹಾಗೂ ಸಕಲ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ನಡೆಯಿತು
 ಸಾಯಂಕಾಲ ಸ್ವಸ್ತಿ ವಾಚನ ಮಂಗಳಾರತಿ ಪ್ರಸಾದ ವಿತರಣೆ ನಡೆದವು. ‌ಮಠಧ ಅರ್ಚಕ ರಾದ ಶ್ರೀ ಕೆ. ಪಾಂಡುರಂಗ ಆಚಾರ್ಯ ಪೂಜಾ ಕೈಂಕರ್ಯ ಗಳನ್ನು ನೇರವೇರಿಸಿ ದರು. ಎರಡು ದಿನಗಳ ಕಾಲ ನಡೆದ ಆರಾಧನೆ ಯಶಸ್ವಿ ಯಾಗಿ .ಜರುಗಲು ಸಹಕರಿಸಿದ  ಸೇವಾಕತ೯ರಿಗೆ
ಗಳಿಗೆ ಮಠದ ಪರವಾಗಿ  ಶಾಲು ಹೊದಿಸಿ ಗೌರವಿಸಲಾಯಿತು. ಕಾರ್ಯಕ್ರಮ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿ ದ ಎಲ್ಲರಿಗೂ   ಮಠದ ಅರ್ಚಕರಾದ ಶ್ರೀ ಕೆ.ಪಾಂಡುರಂಗ ಆಚಾರ್ಯಅಭಿನಂದನೆಗಳನ್ನು ಸಲ್ಲಿಸಿದರು.
ಆರಾಧನಾ ಮಹೋತ್ಸವ ಅಂಗವಾಗಿ ಮಠಕ್ಕೆ ತಳಿರು ತೋರಣಹಾಗು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು