ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಗೆಲ್ಲಬೇಕಿದೆ
ಆನೇಕಲ್. ಮಾ. ೩೦:ಧರ್ಮ ಮತ್ತು ಅಧರ್ಮ ಯುದ್ದದಲ್ಲಿ ಧರ್ಮ ಉಳಿಯ ಬೇಕಾದರೆ ಬೆಂ. ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ|| ಸಿ.ಎನ್. ಮಂಜುನಾಥ್ ರವರು ಗೆಲ್ಲಬೇಕಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣರವರು ತಿಳಿಸಿದರು.
ಅವರು ಗೊಟ್ಟಿಗೆರೆಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಡಾ|| ಸಿ.ಎನ್. ಮಂಜುನಾಥ್ ರವರು ಜಯದೇವ ಆಸ್ಪತ್ತೆಯಲ್ಲಿ ವೈದ್ಯರಾಗಿದ್ದ ಸಂಧರ್ಭದಲ್ಲಿ ಬಡವ, ಬಲ್ಲಿಗ ಎನ್ನದೆ ಎಲ್ಲರಿಗೂ ಸಮಾನ ಚಿಕಿತ್ಸೆ ನೀಡಿ ಲಕ್ಷಾಂತರ ಜನರ ಆರೋಗ್ಯವನ್ನು ಕಾಪಾಡಿ ಜನ ಮೆಚ್ಚುಗೆಯನ್ನು ಗಳಿಸಿದ್ದಾರೆ ಎಂದರು. ಡಾ|| ಸಿಎನ್ ಮಂಜುನಾಥ್ ರವರು ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ನರೇಂದ್ರ ಮೋದಿರವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಂತ್ರಿಯಾಗುತ್ತಾರೆ ಎಂದರು. ಸಂಸದ ಡಿ.ಕೆ. ಸುರೇಶ್ ರವರಿಗೆ ಈ ಕ್ಷೇತ್ರದಲ್ಲಿ ಮೂರು ಬಾರಿ ಜನರು ಆರ್ಶ್ರೀವಾದ ಮಾಡಿದ್ದಾರೆ ಆದರೆ ಡಿ.ಕೆ. ಸುರೇಶ್ ರವರು ಯಾವುದೇ ರೀತಿಯಾದ ಅಭಿವೃದ್ದಿ ಕೆಲಸವನ್ನು ಮಾಡಿಲ್ಲ. ದೇಶದಲ್ಲಿ ಬದಲಾವಣೆ ಗಾಳಿ ಬೀಸಲಿದೆ, ನರೇಂದ್ರ ಮೋದಿರವರು ಮತ್ತೋಮ್ಮೆ ಈ ದೇಶದ ಪ್ರದಾನಿಯಾಗಲಿದ್ದಾರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಾಜಿ ಪ್ರದಾನಿಗಳಾದ ಹೆಚ್.ಡಿ.ದೇವೇಗೌಡರು ಹಾಗೂ ಕುಮಾರಣ್ಣ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನೇತೃತ್ವದಲ್ಲಿ ಈ ಬಾರಿ ಡಾ|| ಸಿಎನ್. ಮಂಜುನಾಥ್ ರವರು ಸುಮಾರು ೨ ಲಕ್ಷ ಮತಗಳ ಅಂತರಿಂದ ಗೆಲುವು ಸಾದಿಸಲಿದ್ದಾರೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು ಹಾಗೆಯೇ ಶಾಸಕ ಎಂ.ಕೃಷ್ಣಪ್ಪರವರ ನೇತೃತ್ವದಲ್ಲಿ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಡಾ|| ಸಿ.ಎನ್. ಮಂಜುನಾಥ್ ರವರಿಗೆ ೧ ಲಕ್ಷ ಮತಗಳು ಲೀಡ್‌ನ್ನು ನಾವು ನೀಡುತ್ತೇವೆ ಎಂದು ಭರವಸೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜ್, ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಕಮ್ಮನಹಳ್ಳಿ ಅನಂತು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೊಟ್ಟಿಗೆರೆ ಸುನೀಲ್ ಮತ್ತು ಬಿಜೆಪಿ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬಾಗವಹಿಸಿದ್ದರು.