ಮತದಾರರಲ್ಲಿ ಜಾಗೃತಿಗೆ ಚಾಲನೆ
ವಿಜಯಪುರ.ಮಾ೩೦- ಮಮತೆಯ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಟ್ಟಣದ ಪುರಸಭೆಯಿಂದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಮೇಳ ಬಾರಿಸಿಕೊಂಡು ಜಾಥಾ ಕಾರ್ಯಕ್ರಮಕ್ಕೆ ಪುರಸಭಾ ಮುಖ್ಯಾಧಿಕಾರಿ ಸಂತೋಷ ಕುಮಾರ್ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕು. ಈ ಬಗ್ಗೆ ಜಾಗೃತ ಮೂಡಿಸಲು ಡೊಳ್ಳು ಮೇಳದೊಂದಿಗೆ ಮತದಾನದ ಮಮತೆಯ ಕರೆಯೋಲೆ ಪತ್ರಿಕೆಯೊಂದಿಗೆ ಪ್ರತಿ ಮನೆಗೂ ಪತ್ರಿಕೆ ಹಂಚುವ,ಹಾಗೂ ಮತದಾನದ ಬಗ್ಗೆ ಪ್ರಮಾಣ ವಚನ ಬೋಧಿಸುವ ಮೂಲಕ ಜಾಗೃತಿ ಜಾಥಾ ಮಾಡಲಾಯಿತು.
ಸಮಾಜದ ಪ್ರತಿಯೊಂದು ವರ್ಗದವರೂ ತಪ್ಪದೆ ಮತದಾನ ಮಾಡುವಂತೆ ಉತ್ತೇಜಿಸುವುದು ಈ ಪ್ರಚಾರದ ಉದ್ದೇಶವಾಗಿದೆ ಎಂದರು.ಪುರಸಭಾ ಕಂದಾಯ ನೀರಿಕ್ಷಕ ತ್ಯಾಗರಾಜು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯು ನಮ್ಮ ದೇಶದಲ್ಲಿ ಅತಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಈ ವ್ಯವಸ್ಥೆಯಲ್ಲಿ ಪ್ರಜೆಗಳ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಲು ನಾವೆಲ್ಲರೂ ಹಕ್ಕುಳ್ಳವರಾಗಿದ್ದೇವೆ. ಆದ್ದರಿಂದ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ ಎಂದರು.
ಕಂದಾಯ ಅಧಿಕಾರಿ ಚಂದ್ರು, ಆರೋಗ್ಯ ಅಧಿಕಾರಿ ಲಾವಣ್ಯ, ಪುರಸಭೆ ಸಿಬ್ಬಂದಿಯಾದ ಅನಿಲ್, ಪವನ್ ಜೋಶಿ, ಜನಾರ್ಧನ, ಸುನೀಲ್, ಮಂಜುನಾಥ್, ಪೃಥ್ವಿ, ಹೇಮಾವತಿ, ಹೇಮಲತಾ, ಲಿಂಗಣ್ಣ, ಕುಮಾರ್, ಮಂಜುನಾಥ್, ಹೇಮಂತ್ ಕುಮಾರ್, ಜನಾರ್ಧನ್, ಪುರಸಭೆ ಪೌರಕಾರ್ಮಿಕರು ಹಾಜರಿದ್ದರು.