ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಬ್ಬ ಗೂಂಡಾ, ರೌಡಿ: ಯತೀಂದ್ರ ಸಿದ್ದರಾಮಯ್ಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.30- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಬ್ಬ ಗೂಂಡಾ, ರೌಡಿ ಕೊಲೆ ಆರೋಪದಲ್ಲಿ ಗುಜರಾತ್‍ನಲ್ಲಿ ಗಡಿಪಾರು ಕೂಡ ಆಗಿದ್ದರು. ಅಂಥವರನ್ನು ಪಕ್ಕದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‍ನ ಮಾಜಿ ಶಾಸಕ ಹಾಗೂ ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಚಾಮರಾಜ ನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಗುರುವಾರ ಲೋಕಸಭಾ ಚುನಾವಣೆ ಸಂಬಂಧ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಅಮಿತ್ ಶಾ ವಿರುದ್ಧ ಕೊಲೆ ಆರೋಪಗಳಿವೆ. ಬಿಜೆಪಿ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಇಂಥವರ ಕೈಯಲ್ಲಿ ಅಧಿಕಾರ ಸಿಕ್ಕರೆ ದೇಶದ ಸ್ಥಿತಿ ಏನಾಗುತ್ತದೆ ಎಂಬುದನ್ನು ಈ 10 ವರ್ಷಗಳಲ್ಲಿ ನೋಡಿದ್ದೇವೆ ಎಂದರು.
ದೇಶದ ಪ್ರಜಾಪ್ರಭುತ್ವ ಅಪಾಯಯಲ್ಲಿದೆ. ಬಿಜೆಪಿ 400 ಸ್ಥಾನ ಬಂದ್ರೆ ಸಂವಿಧಾನ ಬದಲಾವಣೆಯಾಗುತ್ತೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.
ಅವರು ಇಂದು ಚಾಮರಾಜನಗರದಲ್ಲಿ ಬ್ಲಾಕ್ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈಗಾಗಲೆ ಎಲ್ಲಾ ಸರ್ವೆಗಳಲ್ಲಿ ದೇಶದ ಪ್ರಜಾಪ್ರಭುತ್ವ ಅಪಾಯಯಲ್ಲಿರುವುದು ಸಾಭೀತಾಗಿದೆ. ಸಮಾನತೆ ಬಗ್ಗೆ ಆರ್.ಎಸ್.ಎಸ್.ಗೆ ಇಷ್ಟಇಲ್ಲ. ಹೀಗಾಗಿ ಈ ಬಾರಿ 400 ಸ್ಥಾನ ಪಡೆಯಲು ಹರಸಾಹಸ ಮಾಡ್ತಾ ಇದ್ದಾರೆ
ಬಿಜೆಪಿಯವರಂತೆ ಕಾಂಗ್ರೆಸ್ ಸುಳ್ಳು ಭರವಸೆ ನೀಡಿಲ್ಲ: ಯುಪಿಎ ಕಾಲದಲ್ಲಿ 24 ಕೋಟಿ ಜನರನ್ನ ಬಡತನ ರೇಖೆಯಿಂದ ಹೊರತರಲಾಯಿತು. ರಾಜ್ಯದಲ್ಲಿ ಗ್ಯಾರಂಟಿಗಳ ಭರವಸೆ ಈಡೇರಿಸಿದ ಸರ್ಕಾರ ಇದ್ರೆ ಅದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ಐದು ಗ್ಯಾರಂಟಿ ಭರವಸೆ ನೀಡಿತ್ತು ನುಡಿದಂತೆ ನಡೆದಂತಹ ವಚನ ಕೊಟ್ರೆ ಈಡೇರಿಸುವುದು ಕಾಂಗ್ರೆಸ್ ಪಕ್ಷ. ದೇಶದ ಇತಿಹಾಸದಲ್ಲಿ ಅಧಿಕಾರಕ್ಕೆ ಬಂದತಂಹ 9 ತಿಂಗಳಲ್ಲಿ ಭರವಸೆ ಈಡೇರಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಬಣ್ಣಿಸಿದರು.
ಆದರೆ ಬಿಜೆಪಿ ಕೊಟ್ಟ ಭರವಸೆಯನ್ನು 10 ವರ್ಷ ಆದ್ರೂ ಈಡೇರಿಸಿಲ್ಲ. ಕಪ್ಪು ಹಣ ವಾಪಸ್ಸು ತರೋದಿರಲಿ ಕಪ್ಪು ಕುಳಗಳ ಪಟ್ಟಿಕೊಡಲಿಲ್ಲ. ಈಗಾಗಲೇ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ರೈತರು ಗೊಬ್ಬರ ಹಾಗೂ ಕೀಟ ನಾಶಕಗಳ ಬೆಲೆ ಹೆಚ್ಚಳವಾಗಿ ಅಕ್ಷರಶ: ರೋಸಿಹೋಗಿದ್ದಾರೆ.
ಬಿಜೆಪಿಯ ವರದ್ದು ಬರೀ ಸುಳ್ಳು ಭರವಸೆ. ಕಾಂಗ್ರೆಸ್ ಪಕ್ಷದ್ದು ಗ್ಯಾರಂಟಿ ಭರವಸೆ. ಮೋದಿಯದ್ದು ಬೋಗಸ್ ಗ್ಯಾರಂಟಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ, ಮೋದಿ ಸರ್ಕಾರ ಬರೀ ಶ್ರೀಮಂತರಿಗೆ ಮಾತ್ರ ಇರೋ ಸರ್ಕಾರ ಬಡವರಿಂದ ಕಿತ್ತು ಶ್ರೀಮಂತರಿಗೆ ಹಣಕೊಡ್ತಾ ಇರೋ ಭ್ರಷ್ಟ ಸರ್ಕಾರ, ಇಡಿ, ಸಿಬಿಐ ಮಾದ್ಯಮ ಕೋರ್ಟಗಳು ಬಿಜೆಪಿ ಕಪಿ ಮುಷ್ಟಿಯಲ್ಲಿಟ್ಟಿದೆ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಸಂವಿಧಾನ ಬದಲಾವಣೆಗಾಗಿ400 ಕ್ಕೂ ಹೆಚ್ಚು ಸೀಟು ಬರಬೇಕುಎಂಬುವುದು ಬಿಜೆಪಿ ಅಜೆಂಡಾಆಗಿದೆಎಂದು ಆರೋಪಿಸಿದರು. ಹೀಗಾಗಿ ಸಂವಿಧಾನ ಬದಲಾವಣೆಯುಆರ್.ಎಸ್.ಎಸ್. ಅಜೆಂಡಾಆಗಿದೆ.
ಸರ್ವೆ ಪ್ರಕಾರ ಪ್ರಜಾಪ್ರಭುತ್ವಕ್ಷೀಣಿಸುತ್ತಿದೆ. ಮೋದಿ ಸರ್ಕಾರದೇಶಕ್ಕೆಅಪಾಯಕಾರಿ. ಮೂರನೇ ಭಾರಿ ಬಿಜೆಪಿ ಕೇಂದ್ರಲ್ಲೆತಂದರೆ ಪ್ರಜಾಪ್ರಭುತ್ವಕ್ಕೆ ಸಂಚಕಾರವಾಗಲಿದ್ದು, ದೇಶ ಹಾಗೂ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಗೆಲ್ಲಿಸಿಎಂದುಕರೆ ನೀಡಿದರು.