ಪ್ರಹ್ಲಾದ ಜೋಶಿ ಭೇಟಿಯಾದ ಯತ್ನಾಳವಿಜಯಪುರ ಲೋಕಸಭೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಭಿನ್ನಮತ ಇಲ್ಲ: ಯತ್ನಾಳ
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ.30:ವಿಜಯಪುರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಭಿನ್ನಮತ, ಬಂಡಾಯ ಇಲ್ಲ. ಪಕ್ಷ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆಯೋ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಬಂಡಾಯದ ಮಾತಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮನೆ ದೇವರ ದರ್ಶನಕ್ಕಾಗಿ ತೊರವಿ ಗ್ರಾಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರನ್ನು ಭೇಟಿಯಾದ ನಂತರ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.
ಪಾರ್ಟಿ ಯಾರನ್ನು ಕ್ಯಾಂಡಿಡೇಟ್ ಎಂದು ನಿರ್ಣಯ ಮಾಡುತ್ತದೆ ಅವರ ಚುನಾವಣೆ ಮಾಡುವುದು ಎಂದು ಈ ಮೊದಲೇ ನಾನು ಹೇಳಿದ್ದೆನು.
ನಮ್ಮದು ಯಾವುದೇ ಬೇಡಿಕೆಯ ಬಂಡಾಯ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ವಿಜಯಪುರ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ಯಾವುದೇ ಬಂಡಾಯ, ಭಿನ್ನಮತ ಇಲ್ಲ.
ಎಲ್ಲರೂ ಸೇರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ನಮ್ಮ ಮೊದಲ ಆದ್ಯತೆ ಎಂದರು.
ನಮ್ಮ ದೇಶ ಹಿಂದುತ್ವ ದೇಶ. ಈ ದೃಷ್ಟಿಯಿಂದ ನಾವು ಚುನಾವಣೆ ಮಾಡುತ್ತೇವೆ.
ಯಾವುದೇ ಭಿನ್ನಮತ, ಅಭಿಪ್ರಾಯ ಇಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿಯೂ ನಾವು ಗೆಲ್ಲುತ್ತೇವೆ ಎಂದು ಯತ್ನಾಳ ಹೇಳಿದರು.