ಶಾಂತಿನಿಕೇತನ ಪ್ರೌಢಶಾಲೆಯ ಬಾಲಕಿ ರಾಷ್ಟ್ರ ಮಟ್ಟದ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಆಯ್ಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.30:ನಗರದ ಶಾಂತಿನಿಕೇತನ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮೀ ಉತ್ನಾಳ ಬಿಹಾರದಲ್ಲಿ ನಡೆಯುತ್ತಿರುವ 33ನೇ ಸಬ್ ಜೂನಿಯರ್ ಬಾಲಕಿಯರ ರಾಷ್ಟ್ರ ಮಟ್ಟದ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಕರ್ನಾಟಕ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿ ವಿಜಯಪುರ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ.
ಅವಳಿಗೆ ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ, ಅಧ್ಯಕ್ಷೆ ಶೀಲಾ ಬಿರಾದಾರ, ನಿರ್ದೇಶಕರಾದ ಶರತ್ ಬಿರಾದಾರ, ಭರತ್ ಬಿರಾದಾರ ಹಾಗೂ ಪ್ರಾಚಾರ್ಯ ಶ್ರೀಧರ ಕುರಬೆಟ ಮತ್ತು ದೈಹಿಕ ಶಿಕ್ಷಕರಾದ ಎ.ಹೆಚ್. ಸಗರ, ಕಿರಣ ರಾಠೋಡ, ಶಿಕ್ಷಕ ಪ್ರವೀಣ ಗೆಣ್ಣೂರ ಅಭಿನಂದನೆ ಸಲ್ಲಿಸಿದ್ದಾರೆ.