ನಕಲಿ ಪಿಸ್ತೂಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟ ಇಬ್ಬರ ವಿರುದ್ಧ ಪ್ರಕರಣ
ಸೇಡಂ,ಮಾ.29-ಪಿಸ್ತೂಲ್ ಮಾದರಿಯ ಲೈಟರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೆÇೀಟೋ ಹರಿಬಿಟ್ಟ ಇಬ್ಬರು ಯುವಕರ ಮೇಲೆ ಸೇಡಂ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಪಟ್ಟಣದ ಇಂದಿರಾ ನಗರದ ನಿವಾಸಿಗಳಾದ ಮಹೇಶ ತಂದೆ ಕಾಶಿನಾಥ ಹಾಗೂ ಬಸವರಾಜ ತಂದೆ ಜಗನ್ನಾಥ ಎಂಬುವ ಯುವಕರೇ ನಕಲಿ ಲೈಟರ್ ಮಾದರಿ ಪಿಸ್ತೂಲ್ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಪೆÇೀಟೋ ಹರಿಬಿಟ್ಟಿದ್ದಾರೆ. ಈ ಸಂಬಂಧ ಇಬ್ಬರು ಯುವಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿರುವ ಪೊಲೀಸರು ಅವರಿಂದ ನಕಲಿ ಲೈಟರ್ ಮಾದರಿ ಪಿಸ್ತೂಲ್‍ನ್ನು ವಶಕ್ಕೆ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರಗಳನ್ನು ಹರಿಬಿಡುವ ಮೂಲಕ ಅಶಾಂತಿ ಸೃಷ್ಠಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಈ ರೀತಿ ನಕಲಿ ಪಿಸ್ತೂಲ್, ಮಾರಕಾಸ್ತ್ರಗಳನ್ನು ಹಿಡಿದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಸೃಷ್ಟಿಸುವ ಕೆಲಸ ಮಾಡಬೇಡಿ. ಒಂದು ವೇಳೆ ಈ ಇದೇ ರೀತಿಯ ಘಟನೆಗಳು ಮರುಕಳಿಸಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಸ್‍ಪಿ ಅಕ್ಷಯ್ ಹಾಕೆ ಎಚ್ಚರಿಸಿದ್ದಾರೆ.