ದಾನ ಮಾಡಿದರೆ ಪರಮಾತ್ಮನ ಅಕೌಂಟ್‍ನಲ್ಲಿ ಜಮಾ:ಪಡೇಕನೂರಶ್ರೀ
ತಾಳಿಕೋಟೆ:ಮಾ.30: ಮನಃಸಾಕ್ಷೀ ಇರುವ ವ್ಯಕ್ತಿ ತನ್ನನ್ನು ಯಾರೂ ನೋಡದಿರುವ ಸಂದರ್ಬದಲ್ಲಿಯೂ ಸಹ ತಾನು ಪ್ರಾಮಾಣಿಕನಾಗಿರುತ್ತಾನೆ ಮನಃಸಾಕ್ಷೀ ಇಲ್ಲದ ವ್ಯಕ್ತಿ ಮಾಡುವ ತಪ್ಪು ಇತರರ ಕಣ್ಣಿಗೆ ಕಾಣಿಸಲಿಲ್ಲಾವೆಂದರೆ ದಾರಳವಾಗಿ ತಪ್ಪು ಮಾಡುತ್ತಿರುತ್ತಾನೆಂದು ಪಡೇಕನೂರ ದಾಸೋಹ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.
ಶುಕ್ರವಾರರಂದು ಸ್ಥಳೀಯ ಶ್ರೀ ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಶ್ರೀ ಗುರು ನಿರುಪಾದೀಶ್ವರರ ಮಹಾ ಪುರಾಣ ಮಂಗಲೋತ್ಸವ ಕುರಿತು ಏರ್ಪಡಿಸಲಾದ ಧರ್ಮ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಸಾನಿದ್ಯವಹಿಸಿ ಮಾತನಾಡುತ್ತಿದ್ದ ಅವರು ಮನಃಸಾಕ್ಷೀ ಎಂಬುದು ಏಷ್ಟು ಹೆಚ್ಚು ಬಲವಾಗಿರುತ್ತದೆಯೋ ಮಾನವ ಅಷ್ಟು ಹೆಚ್ಚು ಶ್ರೇಷ್ಠ ವ್ಯಕ್ತಿಯಾಗಿರುತ್ತಾನೆ ಮನಃಸಾಕ್ಷೀ ಎಂಬುದು ದೇವರ ಪ್ರತಿನಿಧಿ ಒಬ್ಬ ಮನುಜನಲ್ಲಿ ಮನಃ ಸಾಕ್ಷೀ ಇದೆ ಎಂದರೆ ಆತನಲ್ಲಿ ದೇವರಿದ್ದಾನೆಂಬ ಅರ್ಥ ಎಂದು ಹೇಳಿದ ಶ್ರೀಗಳು ಮನಃಸಾಕ್ಷೀ ಇರುವ ವ್ಯಕ್ತಿ ಸಾಮಾನ್ಯವಾಗಿ ತಪ್ಪು ಮಾಡುವದಿಲ್ಲಾ ಮೋಸ, ವಂಚನೆ ಅನ್ಯಾಯ ಅಕ್ರಮ ಅನ್ಯಾಯ ಮುಂತಾದ ಪಾಪಗಳನ್ನು ಮಾಡುವದಿಲ್ಲಾ ಕಾರಣ ಮನಃ ಸಾಕ್ಷೀ ಎಂದರೆನು ಎಂಬುದನ್ನು ಮನುಜ ಮೊದಲು ಅರೀತುಕೊಳ್ಳಬೇಕೆಂದರು.
ಮಾನವರಾದ ನಮ್ಮಲ್ಲಿ ಸದ್ಗುಣಗಳನ್ನು ಹೊಂದಿದ್ದರೆ ಪುಣ್ಯಮಾಡಿದಂತೆ ಯಾವ ರೀತಿ ಖಾಗೆಯು ಹಾಗೂ ಕೋಳಿಗಳು ತನ್ನ ಬಳಗ ಎಲ್ಲವನ್ನು ಕರೆದು ಉಣಬಡಿಸುತ್ತವೆಯೋ ಅಂತಹ ಗುಣ ಬಂದಿತೆಂದರೆ ನಿಜವಾದ ಮಾನವನಾಗುತ್ತಾನೆಂದರು. ಮಲ್ಲಮ್ಮಳ ಪಾದೋದಕ ಹೊಡೆದರೆ ಬಂಗಾರವಾಗುತ್ತಿತ್ತು ಆಕೆಯಲ್ಲಿ ಪರೋಪಕಾರದ ಗುಣ ಆಕೆಯಲ್ಲಿತ್ತು ಯಾವ ರೀತಿ ನಧಿ ನೀರು ಕೊಡುತ್ತದೆ ಆಕಳು ಹಾಲು ಕೊಡುತ್ತದೆ ಆದರೆ ಮನುಷ್ಯ ಸ್ವಾರ್ಥವನ್ನು ಬಿಟ್ಟು ದಾನ ಧರ್ಮ ಮಾಡಿದರೆ ಪರಮಾತ್ಮನ ಅಕೌಂಟಿನಲ್ಲಿ ಉಳಿಯುತ್ತಾನೆಂದರು.
ಇನ್ನೋರ್ವ ಸಮ್ಮುಖವಹಿಸಿದ ಕುಡಲೂರ ಅಡವಿಸಿದ್ದೇಶ್ವರ ಮಠದ ಶ್ರೀ ಗೋಪಾಲಸ್ವಾಮಿ ಶರಣರು ಮಾತನಾಡಿ ಗುರು ಅಡವಿಸಿದ್ದೇಶ್ವರರ ಸೇವೆ ಗೈದ ನಿರುಪಾದೀಶ್ವರರ ಶಿಷ್ಯ ವೃಂದದವರಲ್ಲಿ ಭಕ್ತಿ ಶ್ರದ್ದೆ ಎಂಬುದಿತ್ತು ಅವರು ಬರೆದಿರತಕ್ಕಂತಹ ಪದ್ಯ ಪ್ರವಚನಗಳನ್ನು ನಾವು ಅರೀತು ತಿಳಿದುಕೊಳ್ಳಬೇಕಾಗಿದೆ ಎಂದರು. ನಿಶಬ್ದ ಬ್ರಹ್ಮ ಕಷ್ಟ ಕಾರ್ಪಣ್ಯಗಳನ್ನು ವಿಭೂತಿ ಎಂಬ ಬಸ್ಮ ಎಲ್ಲವನ್ನು ನಾಶ ಮಾಡುತ್ತದೆ ಇಂತಹದ್ದೇನೆಲ್ಲಾ ಶ್ರೀಗಳು ಶಿಷ್ಯಂದಿರರಿಗೆ ಕೊಡುತ್ತಿದ್ದರು ಶಿಷ್ಯ ಪರಂಪರೆಯಲ್ಲಿ ಇರತಕ್ಕಂತಹ ತೊಂದರೆಗಳನ್ನು ದೂರಿಕರಿಸುತ್ತಿದ್ದರೆಂದರು. ಏಕ ಚಿತ್ತದಿಂದ ನಂಬಿಕೆ ಇಟ್ಟು ನಡೆಯುತ್ತಾ ಅವರನ್ನು ನೆನೆದರೆ ಕಷ್ಟ ಕಾರ್ಪಣ್ಯಗಳು ದೂರಾಗುತ್ತವೆ ಮೋಕ್ಷ ಪಡೆಯಲಿಕ್ಕೆ ಬಂದಿದ್ದೇವೆ ಅಂತಹ ಮೋಕ್ಷ ಸಾಂಭ ಪ್ರಭು ಶರಣರು ನೀಡಲೆಂದು ಶ್ರೀಗಳು ಆಶಿಸಿದರು.
ಇನ್ನೋರ್ವ ವೀ.ವಿ.ಸಂಘದ ಅಧ್ಯಕ್ಷರಾದ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ) ಅವರು ಮಾತನಾಡಿ ಸಾಂಭಪ್ರಭು ಶರಣಮುತ್ಯಾರವರು ಈ ಹಿಂದೆ ಮಾಡಿದ ಪವಾಡಗಳು ನಮ್ಮ ಭಾಗದ ಎಲ್ಲ ಜನತೆಗೆ ಗೊತ್ತಿದ್ದ ವಿಷಯ ಅಂತಹ ಶ್ರೀಗಳ ಮಹಾ ಮಠದ ಏಳಿಗೆಗೆ ಹಿರಿಯರು, ಅನುಭಾವಿಗಳು ಹಾಗೂ ಆದ್ಯಾತ್ಮ ಚಿಂತಕರು ಶ್ರಮಿಸುತ್ತಾ ಸಾಗಿರುವದು ಸಂತಸದ ವಿಷಯವಾಗಿದೆ ಶರಣಮುತ್ಯಾರವರ ಆದರ್ಶಗಳು ಅವರು ಭಕ್ತರ ಮೇಲಿಟ್ಟ ಪ್ರೀತಿ ಪ್ರೇಮವನ್ನು ಶ್ರೀ ಶರಣರ ಮಠದವರು ಮುಂದುವರೆಸಿಕೊಂಡು ಸಾಗಿದ್ದಾರೆ ಕಾರಣ ಶ್ರೀಮಠದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿರುವದು ಸಂತಸ ತಂದಿದೆ ಎಂದರು.
ಪುರಾಣ ಪ್ರವಚನಕಾರರಾದ ಮಸೂತಿಯ ಶ್ರೀ ಶಿವಲಿಂಗಯ್ಯ ಶರಣರು ಶ್ರೀ ಗುರು ನಿರುಪಾದೀಶ್ವರರ ಮಹಾ ಪುರಾಣ ಪುನರ್ ಆರಂಬಿಸಿ ಧರ್ಮಸಭೆ ಚಾಲನೆಗೆ ಅವಕಾಶ ಮಾಡಿಕೊಟ್ಟರು.
ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿಯಾದ ವೇ.ಮುರುಘೇಶ ವಿರಕ್ತಮಠ ಅವರು ಸಾನಿದ್ಯ ವಹಿಸಿದ್ದರು.
ಶ್ರೀ ಶರಣರ ಮಠದ ಶ್ರೀ ಬಸಣ್ಣಮುತ್ಯಾ ಶರಣರು ನೇತೃತ್ವ ವಹಿಸಿದ್ದರು.
ಶ್ರೀ ಶರಣರ ಮಠದ ಶ್ರೀ ಶರಣಪ್ಪಮುತ್ಯಾ ಶರಣರು ಅಧ್ಯಕ್ಷತೆ ವಹಿಸಿದ್ದರು.
ನ್ಯಾಯವಾದಿ ಆನಂದ ಮದರಕಲ್ಲ, ಶ್ರೀ ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ಹಾಗೂ ಸಂಗೀತ ಪಾಠ ಶಾಲೆಯ ವಿಧ್ಯಾರ್ಥಿನಿಯರು. ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕರಿಭಾವಿಯ ಶರಣಗೌಡ ಪೊಲೀಸ್‍ಪಾಟೀಲ ಅವರು ಪ್ರಾಸ್ಥಾವಿಕ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಬಿ.ಕೆ.ಸುವರ್ಣಅಕ್ಕನವರು, ಭಂಟನೂರಿನ ಶರಣೆ ಕಾಶಿಬಾಯಿ ಅಮ್ಮನವರು, ಬಿ.ಕೆ.ಕಾಶಿಬಾಯಿ ಅಜ್ಜಿ, ಶರಣೆ ಕಾಶಿಬಾಯಿ, ಕಾಶಿಬಾಯಿ ಶರಣರ, ಶ್ರೀಮತಿ ಪ್ರೇಮಾಬಾಯಿ ದೇಗಿನಾಳ, ಬಿ.ಕೆ.ಬಸವರಾಜ, ಬಿ.ಕೆ.ಪಾರ್ವತಿ, ಬಿ.ಕೆ.ರತ್ನಾ, ಸಿದ್ದನಗೌಡ ಪೊಲೀಸ್‍ಪಾಟೀಲ(ಕರಿಭಾವಿ), ಬಂಡೆಪ್ಪಗೌಡ ಬಿರಾದಾರ, ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ವಿಶ್ವ ವಿದ್ಯಾಲಯದ ವಿಜಯಕುಮಾರ ಹಿರೇಮಠ ನಿರೂಪಿಸಿ ವಂದಿಸಿದರು.