ನರೇಗಾ ರಾಜ್ಯ ತನಿಖಾ ತಂಡ ಬಬಲೇಶ್ವರಕ್ಕೆ ಭೇಟಿ, ಕಾಮಗಾರಿ ಪರಿಶೀಲನೆ
ಸಂಜೆವಾಣಿ ವಾರ್ತೆ.
ವಿಜಯಪುರ,ಮಾ.30:ಬಬಲೇಶ್ವರ ನರೇಗಾ ಯೋಜನೆಯ ರಾಜ್ಯ ಪರಿಶೀಲನಾ ತಂಡ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ದೇವರ ಗೆಣ್ಣೂರ ಹಾಗೂ ಮಂಗಳೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿ ನಡೆದಿರುವ ಕಾಮಗಾರಿಗಳ ಪರಿಶೀಲನೆ ನಡೆಸಿತು.
ಹೊನಗನಹಳ್ಳಿ ಗ್ರಾಮದ ಲಿಂಬೆ, ಬಾಳೆ, ದಾಳಿಂಬೆಗಳಿಗೆ ನರೇಗಾ ಸೌಲಭ್ಯ ಪಡೆದ ರೈತರÀ ತೋಟಗಳಿಗೆ ತೆರಳಿ ಕಾಮಗಾರಿಯ ಭೌತಿಕ ಪರಶೀಲನೆ ಮಾಡಿದರು. ತದ ನಂತರ ದೇವರ ಗೆಣ್ಣೂರ ಗ್ರಾಮ ಪಂಚಾಯತಿ ಯೋಜನೆ ಅಡಿ ಸಾಮಾಗ್ರಿ ಬಿಲ್ ಮತ್ತು ಕಡತಗಳನ್ನು ಪರಿಶೀಲನೆ ಮಾಡಿದರು.
ಅಡುಗೆ ಕೋಣೆ, ಗೋಡಾವನ್, ಶಾಲಾ ಕಂಪೌಂಡ ವೀಕ್ಷಣೆ ಮಾಡಿ ಕಾಮಗಾರಿ ಕಡತಗಳಿಗೆ ಸಂಬಂಧಿಸಿದಂತೆ ಅಗತ್ಯ ಸಲಹೆ ಸೂಚನೆ ನೀಡಿದರು.
ತನಿಖಾ ತಂಡದ ಮುಖ್ಯಸ್ಥರಾದ ಸಹಾಯಕ ನಿರ್ದೆಶಕರು ತ್ಯಾಗರಾಜ, ಅಕೌಂಟ್ ಮ್ಯಾನೇಜರ್ ಚಿಕ್ಕಣ್ಣ ಅವರ ನೇತೃತ್ವದಲ್ಲಿ ರಾಜ್ಯ ತನಿಖಾ ಪರಿಶೀಲನೆ ನಡೆಸಿತು.
ಪಿಡಿಒ ಅಧಿಕಾರಿ ಜಯಶ್ರೀ ಪವಾರ, ರೇಣುಕಾ ರಸಾಳಕರ, ಪ್ರಥ್ವಿರಾಜ ಪಾಟೀಲ, ಎಡಿಪಿಸಿ ಮಹೇಶ ಇಂಗಳೇಶ್ವರ, ಶ್ರೀಧÀರ ರೆಡ್ಡಿ, ಪುರ್ಖಾನ್, ಖೋರೊಷಿ, ಶಿವಲಿಂಗ ಪಡೆಪ್ಪಗೋಳ ಸಹಾಯಕ ತೋಟಕಾರಿಕೆ ಅಧಿಕಾರಿ ವಿನೋದ ನಾಯಕ, ಗೋಪಾಲ ಪತ್ತಾರ, ಐಇಸಿ ಸಂಯೋಜಕ ಶಾಂತಪ್ಪ ಇಂಡಿ ಮತ್ತಿತರರು ಇದ್ದರು.