ಅಂಧ ಅನಾಥರ ಬಾಳಿಗೆ ನಂದಾದೀಪ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ಗುರು ಪುಟ್ಟರಾಜು
ಕೆಂಭಾವಿ:ಮಾ.29: ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರದಂದು ನಡೆದ ಪಂಡಿತ ಪುಟ್ಟರಾಜ ಗವಾಯಿಗಳವರ 110 ನೇ ಜಯಂತೋತ್ಸವದ ಅಂಗವಾಗಿ ಕರ್ನಾಟಕ ಕೀರ್ತನ ಕಲಾವೇದಿಕೆ ಹಾಗೂ ಸಾಂಸ್ಕøತಿಕ ಶಿವಾನುಭವ ಸಮಿತಿ ಆಶ್ರಯದಲ್ಲಿ ಸಂಗೀತೋತ್ಸವ ಹಾಗೂ ಕಥಾ ಕೀರ್ತನೋತ್ಸವ ಅಧ್ಯಕ್ಷತೆ ವಹಿಸಿದ ರಾಜಶೇಖರ ಸ್ವಾಮಿ ಹಿರೇಮಠ ಇವರು ಮಾತನಾಡಿ ಪಂಚಾಕ್ಷರಿ ಗವಾಯಿಗಳು ಪುಟ್ಟರಾಜ ಗವಾಯಿಗಳು ಅಂಧ ಅನಾಥರ ಬಾಳಿಗೆ ನಂದಾ ದೀಪವಾಗಿದ್ದವರು.
ಅವರ ಸೇವೆ ದೇಶಕ್ಕೆ ನಾಡಿಗೆ ಹೆಮ್ಮೆ ತರುವಂಥದ್ದು ಎಂದು ಹೇಳಿದರು.
ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರಾದ ಸಿದ್ದೇಶ್ವರ ಶಾಸ್ತ್ರಿ ತೆಲ್ಲೂರ ಉಭಯ ಗುರುಗಳ ಬಗ್ಗೆ ಪ್ರವಚನ ನೀಡಿದರು.
ನಾಡಿನ ಖ್ಯಾತ ಗಾಯಕರಾದ ಬಸವರಾಜ ಭಂಟನೂರ, ಗುರುಗಳ ಬಗ್ಗೆ ಮಾತನಾಡಿ ಗುರುಗಳ ಪದ್ಯವನ್ನು ಹಾಡಿದರು. ಖ್ಯಾತ ತಬಲಾವಾದಕರಾದ ಯಮನೇಶ ಯಾಳಗಿ ಸಂಗೀತ ಕ್ಕೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ
ಪಟ್ಟಣದ ಹಿರಿಯರಾದ ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುರಗೇಶ ಸಾಹು ಹುಣಸಗಿ, ಮಹಿಪಾಲರೆಡ್ಡಿ ಡಿಗ್ಗಾವಿ ಮಹದೇವಪ್ಪ ವಜ್ಜಲ್, ಚನ್ನಯ್ಯಸ್ವಾಮಿ ಚಿಕ್ಕಮಠ, ಸಮಿತಿಯ ಅಧ್ಯಕ್ಷರಾದ ಮಡಿವಾಳಪ್ಪಗೌಡ ಪೆÇೀ ಪಾಟೀಲ, ಜ್ಯೋತಿ ಬೆಳಗಿಸಿದರು. ಅರುಣೋದಯ ಸೋನ್ನದ, ಬಾಪುಗೌಡ ಪೆÇೀ ಪಾಟೀಲ, ಮಲಕನಗೌಡ ಪಾಟೀಲ, ರಾಮನಗೌಡ ಪಾಟೀಲ ಯಾಳಗಿ, ರಂಗಪ್ಪ ವಡ್ಡರ, ಸುರೇಶಗೌಡ ಪಾಟೀಲ, ಭೀಮು ಶಹಾಪುರ,ಆದಪ್ಪ ಕೋತಿನ್, ಶರಣಪ್ಪ ನಗನೂರ್, ಮಲ್ಲಣ್ಣ ಆಲ್ದಾಳ, ಶರಣಪ್ಪ ಅಗಸರ ಸೇರಿದಂತೆ ಪಟ್ಟಣದ ಹಿರಿಯರು, ಯುವಕರು, ತಾಯಂದಿರು ಭಾಗವಹಿಸಿದ್ದರು.