ಮೌನೇಶ್ ಕರ್ಕಳ್ಳಿಗೆ ಪುನೀತ್ ಪ್ರಶಸ್ತಿ
ಕಲಬುರಗಿ,ಮಾ.29: ಧಾರವಾಡ ರಂಗಾಯಣ ಭವನದಲ್ಲಿ ನಡೆದ ಚೇತನ್ ಫೌಂಡೇಶನ್ ಕರ್ನಾಟಕ ಹಮ್ಮಿಕೊಂಡ ಚಲನಚಿತ್ರೋತ್ಸವ ಸಮಾರಂಭದಲ್ಲಿ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕರ್ಕಳ್ಳಿ ಗ್ರಾಮದ ಮೌನೇಶ್ ಜಟ್ಟೆಪ್ಪ ಅವರಿಗೆ ಪುನೀತ್ ಪ್ರಶಸ್ತಿ ನೀಡಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಪ್ರತಿಭಾವಂತ ವಿದ್ಯಾರ್ಥಿ ಎಂದು ಗುರುತಿಸಿ ಚೇತನ್ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ್ ಮಾಡಲಗೆರೆ ಈ ಪ್ರಶಸ್ತಿ ನೀಡಿದರು.
ಯಲ್ಲಾಲಿಂಗ ರತ್ತಾಳ್ ಕರಕಿಹಳ್ಳಿ ಶಿವಮಾಳಪ್ಪ ಕರಕಿಹಳ್ಳಿ ಮತ್ತು ಮಲ್ಲಿಕಾರ್ಜುನ್ ಆನೆಗುಂದಿ ಕರಕಿಹಳ್ಳಿ ಜೊತೆಯಲ್ಲಿ ಇದ್ದರು. ಈ ಸಾಧನೆಗೆ ಕರಕಿಹಳ್ಳಿ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿ ಬಡತನದಲ್ಲಿ ಬೆಳೆಯುತ್ತಿರುವ ಮೌನೇಶ್ ಗೆ ಶುಭ ಹಾರೈಸಿದ್ದಾರೆ.