ಬೆಂಕಿ ಬಾಯ್ಸ್ ವತಿಯಿಂದ ಹೋಳಿ ಹಬ್ಬ ಆಚರಣೆ
ಕೊಲ್ಹಾರ:ಮಾ.29:ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಾದ ಬಣ್ಣದ ಹೋಳಿ ಹಬ್ಬವನ್ನು ರಾಣಿ ಚೆನ್ನಮ್ಮ ಸರ್ಕಲ್ ಗೆಳೆಯರ ಬಳಗ ಹಾಗೂ ಬೆಂಕಿ ಬಾಯ್ಸ್ ವತಿಯಿಂದ ಹಮ್ಮಿಕೊಂಡಿದ್ದ “ರಂಗ ಕೇಸರಿ” ಹಬ್ಬಕ್ಕೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಕಲ್ಲು ಶಂಕ್ರಪ್ಪ ದೇಸಾಯಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸಂಭ್ರಮದಿಂದ ಹೋಳಿ ಆಚರಣೆ ಮಾಡಲಾಗುತ್ತಿದೆ. ಶಿವನ ತಪಸ್ಸು ಭಂಗ ಮಾಡಲು ಹೋದ ಕಾಮನ ದಹನವಾಗಿತ್ತು. ಅದೇ ರೀತಿ ಈ ದೇಶದ ಸಮಸ್ಯೆಗಳು ದೂರಾಗಿ ದೇಶಕ್ಕೆ ಒಳಿತಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಸಿ ಎಸ್ ಗಿಡ್ಡಪ್ಪಗೋಳ, ನಿಂಗು ಗಣಿ ಯುವ ಮುಖಂಡರಾದ ಮಹೇಶ್ ಗಿಡ್ಡಪ್ಪಗೋಳ, ಸಿದ್ದು ಗಣಿ ಸಹಿತ ಅನೇಕರು ಉಪಸ್ಥಿತರಿದ್ದರು