ಕಾಳಿಕಾಂಬ ದೇವಸ್ಥಾನದಲ್ಲಿ ವಿಶ್ವಕರ್ಮ ಜಯಂತೋತ್ಸವ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.19-ನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಶ್ರೀ ಭಗವಾನ್ ವಿಶ್ವಕರ್ಮರ ಜಯಂತೋತ್ಸವ ಪ್ರಯುಕ್ತ ಭಗವಾನ್ ವಿಶ್ವಕರ್ಮರ ಜಯಂತಿಯನ್ನು ವಿಶೇಷ ಪೂಜಾ ಮಹೋತ್ಸವ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಭಗವಾನ್ ವಿಶ್ವಕರ್ಮರ ಭಾವಚಿತ್ರವಿಟ್ಟು ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸುವ ಮೂಲಕ ಗಣ್ಯರು ವಿಶ್ವಕರ್ಮ ಸಮಾಜಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿಕೊಂಡರು.
ವಿಶ್ವಕರ್ಮ ಸಮಾಜದ ಮುಖಂಡ ಎಸ್. ನಂದೀಶ್ ವಿಶ್ವಕರ್ಮ ಮಾತನಾಡಿ, ವಿಶ್ವಕರ್ಮರು ಕಾಯಕನಿಷ್ಠೆಗೆ ಪ್ರಖ್ಯಾತಿಯನ್ನು ಪಡೆದವರು.
ಪ್ರಪಂಚದ ಯಾವುದೇ ಮೂಲೆಯಲ್ಲಿ ಎಲ್ಲಾ ವಾಸ್ತುಶಿಲ್ಪಗಳಲ್ಲಿಯೂ ವಿಶ್ವಕರ್ಮ ತ್ಯಾಗ ಪರಿಶ್ರಮವಿದೆ. ಕಾಯಕದಲ್ಲಿ ಅರ್ಪಣಾ ಭಾವವಿದೆ, ಶ್ರಮಿಕರ ಪಟ್ಟಿಯಲ್ಲಿರುವ ವಿಶ್ವಕರ್ಮ ಸಮಾಜ ಎಲ್ಲಾ ವರ್ಗದ ಜನರಿಗೂ ಅಗತ್ಯವಾದ ಪರಿಕರಗಳನ್ನು ತಯಾರು ಮಾಡುವ ಮೂಲಕ ಅವರ ಬೇಕು ಬೇಡಗಳನ್ನು ಪೊರೈಸಲು ಶ್ರಮಿಸುತ್ತಿದೆ. ಮದುವೆ, ಗೃಹಪ್ರವೇಶ, ವಾಸ್ತು ಶಿಲ್ಪಿ, ಗೋಪುರ ಶಿಲ್ಪಿ ಸೇರಿದಂತೆ ನಾನಾ ಬಗೆಯ ಕಸುಬಿನಲ್ಲಿ ವಿಶ್ವಕರ್ಮ ಸಮಾಜ ತೊಡಗಿಸಿದೆ ಎಂದರು.
ವಿಶ್ವಕರ್ಮ ಪಿಎಂ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ವಿಶ್ವ ಕರ್ಮ ಜಯಂತಿ ದಿನಂದೇ ಐದು ಪಂಗಡಗಳ ಸಮುದಾಯಗಳು ಶ್ರಮಿಕ ವರ್ಗಗಳ ಅರ್ಥಿಕ ಸಬಲಿಕರಕ್ಕಾಗಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿ ಮಾಡಿದ್ದಾರೆ. ಈ ಯೋಜನೆಯನ್ನು ಸಮಾಜದ ಎಲ್ಲರು ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ದಿ ಹೊಂದಿದೆ. ಕುಲ ಕುಬುಸನ್ನಾಗಿ ತಾಂತ್ರಿಕರಗೊಳಿಸಿಕೊಂಡು ವೃತ್ತಿಯಲ್ಲಿ ಇನ್ನು ಹೆಚ್ಚಿನ ಪ್ರಬಬುದ್ದತೆಯನ್ನು ಹೊಂದಬೇಕು. ಈ ಯೋಜನೆಯನ್ನು ಜಾರಿ ಮಾಡಿದ ಪ್ರಧಾನಿಯವರಿಗೆ ಶುಭ ಕೋರಲಾಯಿತು.
ಮುಖಂಡ ವಿ. ಶ್ರೀನಿವಾಸಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಕರ್ಮ ಎಂಬುದು ಒಂದು ಜಾತಿಯಲ್ಲ. ಅದೊಂದು ಸಂಸ್ಕøತಿಯಾಗಿದೆ. ವಾಸ್ತುಗಾರರು ಹಾಗು ಶಿಲ್ಪಿಗಳು ವಿಶ್ವಕರ್ಮರ ವಂಶಸ್ಥರಾಗಿದ್ದಾರೆ. ಚಿನ್ನ, ಬೆಳ್ಳಿ, ಶಿಲೆ, ಮರ, ಲೋಹ, ಮಣ್ಣು ಇತ್ಯಾದಿಗಳಲ್ಲಿ ಕಲಾ ನೈಪುಣ್ಯ ವಿಶ್ವಕರ್ಮರಲ್ಲಿ ರಕ್ತಗತವಾಗಿ ಬೆರೆತು ಬಂದಿದೆ. ಇಂಥ ಕಾಯಕದಲ್ಲಿ ತೊಡಗಿಸಿಕೊಂಡು Àಭಗವಾನ್ ವಿಶ್ವಕರ್ಮ ಅವರನ್ನು ಸ್ಮರಿಸುತ್ತಿರುವ ನಾವೆಲ್ಲರು ಧನ್ಯರು ಎಂದರು.ಬಳಿಕ ಶ್ರೀ ವಿಶ್ವಕರ್ಮರು ಮತ್ತು ಶ್ರೀ ಕಮಠೇಶ್ವರ ಸ್ವಾಮಿ ಸಮೇತ ಕಾಳಿಕಾಂಬ ದೇವಿಗೆ ಪೂಜೆ ಸಲ್ಲಿಸಿ, ಟ್ರಸ್ಟ್ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಸಮಾಜದ ಮುಖಂಡರಾದ ಸ್ವಾಮಿ ಸ್ಟುಡಿಯೋ, ಕಾಶಿನಾಗೇಂದ್ರ ಪ್ರಸಾದ್, ಸುರೇಶ್, ಮಹೇಶ್, ಸೋಮಶೇಖರ್, ರಮೇಶ್, ಗಿರೀಶ್, ಮಿತ್ತೇಶ್, ನಾಗರಾಜ್‍ಚಾರ್, ನಾಗರಾಜ್‍ಪಟೇಲ್, ಶ್ರೀಕಾಂತ್, ರೂಪ, ಆಶಾ, ನಂದಿತಾ, ಅಶ್ವಿನಿ, ನಾಗಲಕ್ಷ್ಮಿ, ಜ್ಯೋತಿ, ಲಕ್ಷ್ಮಿ, ಶಶಿರೇಖಾ, ಚೈತ್ರಾ ಮೊದಲಾದವರು ಇದ್ದರು.