ಸರ್ ಎಂ. ವಿಶ್ವೇಶ್ವರಯ್ಯನವರು ಭಾರತಕಂಡ ಶ್ರೇಷ್ಠ ಇಂಜಿನಿಯರ್: ಎಸ್.ಲಕ್ಷ್ಮೀನರಸಿಂಹ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.19– ಸರ್‍ಎಂ. ವಿಶ್ವೇಶ್ವರಯ್ಯನವರು ಭಾರತಕಂಡ ಶ್ರೇಷ್ಠ ಇಂಜಿನಿಯರ್ ಎಂದು ಬರಹಗಾರ ಎಸ್.ಲಕ್ಷ್ಮೀನರಸಿಂಹ ಬಣ್ಣಿಸಿದರು.
ತಾಲೂಕುಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯರವರಜನ್ಮದಿನವನ್ನುಆಚರಣೆ ಕಾರ್ಯಕ್ರಮವನ್ನುಉದ್ಘಾಟನೆ ನೆರವೇರಿಸಿ ಮಾತನಾಡಿ ಸರ್‍ಎಂ. ವಿಶ್ವೇಶ್ವರಯ್ಯನವರು ಭಾರತಕಂಡ ಶ್ರೇಷ್ಠ ಇಂಜಿನಿಯರ್. ವಿಶ್ವೇಶ್ವರಯ್ಯನವರು ಕಡುಕಷ್ಟದಲ್ಲಿ ಪ್ರತಿಭಾಶಾಲಿಯಾಗಿ ಇಂಜಿನಿಯರ್ ಪದವಿ ಪಡೆದು ಭಾರತದೇಶಕ್ಕೆಅಲ್ಲದೆ ವಿಶ್ವಕ್ಕೆತಮ್ಮದೇಆದ ಅಮೂಲ್ಯವಾದಕೊಡುಗೆಯನ್ನು ನೀಡಿದರು.
ಮೈಸೂರು ಸಂಸ್ಥಾನ, ಕರ್ನಾಟಕ ಹಾಗೂ ಭಾರತಕ್ಕೆಅಪಾರವಾದ ಗೌರವವನ್ನುತಂದುಕೊಟ್ಟ ಮಹನೀಯರು. ಸರ್ ಎಂ ವಿಶ್ವೇಶ್ವರಯ್ಯನವರುಕನ್ನಂಬಾಡಿಕಟ್ಟೆಯನ್ನು ನಿರ್ಮಿಸಿ ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರು ನೀಡಿ ಕೃಷಿ ಭೂಮಿಯನ್ನಾಗಿ ಮಾರ್ಪಡಿಸಿ ರೈತರ ಬದುಕಿನಲ್ಲಿ ಸಂತೋಷಕ್ಕೆಕಾರಣರಾದವರು. ವಿಜ್ಞಾನಕೈಗಾರಿಕೆ, ವಿದ್ಯುತ್, ಕೃಷಿ, ನೀರಾವರಿ, ಸೇತುವೆಗಳ ನಿರ್ಮಾಣದ ಮೂಲಕ ಮಹಾನ್‍ಕ್ರಾಂತಿಯನ್ನು ಮಾಡಿದ ಎಂ ವಿಶ್ವೇಶ್ವರಯ್ಯನವರು ಸರ್ವರಿಗೂ ಸದಾ ಕಾಲ ಆದರ್ಶಪ್ರಾಯರು ಎಂದು ತಿಳಿಸಿದರು.
ಸಭೆಯಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕುಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದ ಸುರೇಶ್ ಎನ್‍ಋಗ್ವೇದಿ ಮಾತನಾಡಿಕನ್ನಡ ನಾಡಿನ ಶ್ರೇಷ್ಠ ಸಂಸ್ಥೆಯಾದಕನ್ನಡ ಸಾಹಿತ್ಯ ಪರಿಷತ್‍ಅನ್ನು ಸ್ಥಾಪಿಸಿ ಕನ್ನಡ ನಾಡು, ನುಡಿ, ಜಲ ಭಾμÉಯ ಸಮಗ್ರ ವಿಕಾಸಕ್ಕೆ ದೂರದೃಷ್ಟಿಯಿಂದ ಸ್ಥಾಪಿಸಿದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‍ಆಗಿದೆ. ಕನ್ನಡದ ಶ್ರೇಷ್ಠ ಸಾಂಸ್ಕøತಿಕ ಸಾಹಿತ್ಯ ಸಂಘಟನೆಯದಕನ್ನಡ ಸಾಹಿತ್ಯ ಪರಿಷತ್ತುಇಂದು ನಾಡಿನ ಮೂಲೆ ಮೂಲೆಗಳಲ್ಲೂ ಕನ್ನಡದ ಕೆಲಸವನ್ನು ನಿರ್ವಹಿಸಲು ಅಧಿಕೃತ ಸಂಸ್ಥೆಯಾಗಿದೆ. ಕಲೆ, ಸಂಗೀತ ಸಾಹಿತ್ಯ,ವಾಸ್ತು ಶಿಲ್ಪ, ನಾಟ್ಯ ಹತ್ತು ಹಲವು ಕ್ಷೇತ್ರಗಳ ಸಾಂಸ್ಕೃತಿಕ ಏಳಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಶತಮಾನದಿಂದ ಶ್ರಮಿಸುತ್ತಿದೆ. ಅದಕ್ಕೆಕಾರಣ ವಿಶ್ವೇಶ್ವರಯ್ಯನವರುಎಂದರು. ಸರ್ ಎಂ ವಿಶ್ವೇಶ್ವರಯ್ಯ ನವರಜೀವನ , ಪರಿಶ್ರಮ, ಅಭಿವೃದ್ಧಿಯ ಪಥ,ದೂರದೃಷ್ಟಿಚಿಂತನೆ, ಸಮಗ್ರ ವಿಕಾಸಕ್ಕೆ ಅವರ ಹಾದಿ ಸರ್ವರಿಗೂ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಸರಸ್ವತಿ, ವೆಂಕಟೇಶ್ ಬಾಬು,ಪರಮೇಶ್ವರಪ್ಪ,ಸತೀಶ್ ಮತ್ತುಅಂಕಿತ್‍ಇದ್ದರು.