ನಿವೃತ್ತ ಶಿಕ್ಷಕ ಕಾಂತೇಗೌಡಗೆ ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.19: ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಕಾಂತೇಗೌಡ ಅವರನ್ನು ಸಿಂಧಘಟ್ಟ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಹರಳಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಟಿ.ಲೋಕೇಶ್ ಅಭಿನಂದಿಸಿ ಬೀಳ್ಕೊಟ್ಟರು.
ಇದೇ ಸಂದರ್ಭದಲ್ಲಿ ಸಿಂಧಘಟ್ಟ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಎಸ್.ಮಹೇಶ್, ಆದರ್ಶ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಅಶೋಕ್, ತಾಲ್ಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಸ್.ಎಸ್.ಶಿವಕುಮಾರ್, ತಾಲ್ಲೂಕು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮರುವನಹಳ್ಳಿ ಬಸವರಾಜು, ಶಿಕ್ಷಕರಾದ ಕುಸ್ತರ್‍ಬಾನು, ಕೆ.ಸಿ.ಮಹದೇವ್, ಶಂಕರೇಗೌಡ, ಸ್ವಾಮಿ, ಕೃಷ್ಣ, ಶ್ರೀಧರ್, ಸುರೇಶ್, ಶಂಕರ್, ಎನ್.ವಿ.ಬಾಬು, ನಾಗೇಂದ್ರ, ಸ್ನೇಹಲತಾ ಸೇರಿದಂತೆ ಹಲವರಿದ್ದರು.