ವಿಧಾನ ಸಭೆಯಲ್ಲೂ ಮೇಲ್ಜಾತಿಗೆ ಪ್ರಾಧಾನ್ಯತೆ: ಆರೋಪ
ಬೀದರ್:ಮಾ.29: ಹಿಂದೆ ರಮೇಶಕುಮಾರ ವಿಧಾನ ಸಭೆ ಸ್ಪೀಕರ್ ಇದ್ದಾಗ ಎಸ್.ಪ್ರಸಾದ್ ಎಂಬ ಮುಖ್ಯ ಅಧಿಕಾರಿ ಹುದ್ದೆಯಿಂದ ಕೆಳಗಿಳಿಸಿ ಮೇಲ್ಜಾತಿಯ ವಿಶಲಾಕ್ಷಿ ಎಂಬುವವರಿಗೆ ಆ ಹುದ್ದೆಗೇರಿಸುವ ಮೂಲಕ ರಮೇಶಕುಮಾರ ಜಾತಿ ರಾಜಕೀಯ ಮಾಡಿದ್ದರು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಉಪಾದ್ಯಕ್ಷ ಕಮಲಾಕರ ಹೆಗಡೆ ಗಂಭೀರ ಆರೋಪ ಮಾಡಿರುವರು.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್.ಪ್ರಸಾದ ಒಬ್ಬ ನಿಷ್ಟಾವಂತ, ಅಷ್ಟೇ ಪ್ರಾಮಾಣಿಕ ಅಧಿಕಾರಿ. ಸುಮ್ಮ ಸುಮ್ಮನೆ ಅವರ ಮೇಲೆ ಇಲ್ಲ ಸಲ್ಲದ ಆರೋಪ ಹೋರಿಸಿ ಅವರ ಸ್ಥಾನಕ್ಕೆ ವಿಶಲಾಕ್ಷಿ ಅವರಿಗೆ ಅವಕಶ ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕ್ಷುಲ್ಲಕ ರಾಜಕೀಯ ನಡೆದರೆ ಜನ ಸಾಮಾನ್ಯರ ಗತಿ ಏನು? ಎಂದು ಪ್ರಶ್ನೆ ಮಾಡಿರುವ ಅವರು, ಕೂಡಲೇ ಎಸ್.ಪ್ರಸಾದ್ ಅವರಿಗೆ ವಿಧಾನ ಸಭೆ ಮುಖ್ಯ ಅಧಿಕಾರಿ ಹುದ್ದೆ ಮರಳಿ ನೀಡಬೇಕು. ಮಾದಿಗ ಸಮಾಜಕ್ಕೆ ಪದೆ ಪದೆ ಅನ್ಯಾಯ ಆಗುವುದನ್ನು ತಡೆಯುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ಎಸ್.ಪ್ರಸಾದ್ ಅವರಿಗೆ ಮತ್ತೆ ಅವರ ಹುದ್ದೆ ಮರಳಿ ನೀಡಬೇಕು ಎಂದು ಹಾಲಿ ಸ್ಪೀಕರ್ ಯು.ಟಿ ಖಾದರ್ ಅವರಿಗೂ ಸಮಾಜದ ವತಿಯಿಂದ ಹಾಗೂ ನಮ್ಮ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಗಿದೆ ಎಂದು ಕಮಲಾಕರ್ ಹೇಳಿದ್ದಾರೆ.