ಏ.12 ಕ್ಕೆ ನಾಮಪತ್ರ ಸಲ್ಲಿಸುವೆ: ತುಕರಾಂ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.29: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಏ.12 ರಂದು ನಾಮಪತ್ರ ಸಲ್ಲಿಸುವುದಾಗಿ ಇ.ತುಕರಾಂ ಅವರು ಹೇಳಿದ್ದಾರೆ.
ಅವರಿಂದು ನಗರದ ಆರಾಧ್ಯ ದೇವತೆ ದುರ್ಗಮ್ಮಗೆ ಪೂಜೆ ಸಲ್ಲಿಸಿ. ನಗರದಲ್ಲಿನ ಪಕ್ಷದ ಮುಖಂಡರ ನಿವಾಸಕ್ಕೆ ತೆರಳುವ  ಮುನ್ನ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ನಾನು ನನ್ನ ಪುತ್ರಿಗೆ ಟಿಕೆಟ್ ಕೇಳಿದ್ದೆ. ಇನ್ನು ಹಲವರು ಕೇಳಿದ್ದರು. ಪಕ್ಷ ನಡೆಸಿದ ಸರ್ವೆಯಲ್ಲಿ ನನಗೆ ಟಿಕೆಟ್ ನೀಡಿದರೆ ಗೆಲುವು ಎಂಬ ಅಂಶದಿಂದ ಪಕ್ಷ ನೀಡಿದೆ. ಯಾವುದೇ ಒತ್ತಡದಿಂದ ಅಲ್ಲ. ಸಂತಸದಿಂದ ಸ್ಪರ್ಧೆ ಮಾಡುತ್ತಿರುವೆ. ಸಾಮಾನ್ಯ ಪ್ರಜೆಯಾಗಿದ್ದ ನನಗೆ ಟಿಕೆಟ್ ನೀಡಿ, ಶಾಸಕ, ಸಚಿವನಾಗಿ ಮಾಡಿತ್ತು. ಮುಂದೆ ಮತ್ತಷ್ಟು ಉತ್ತಮ ಅವಕಾಶ ದೊರೆಯಬಹುದು. ಸ್ಪರ್ಧೆಗೆ ಬೇಸರ ಎಂಬ ಮಾತೇ ಇಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ, ಬಿ.ನಾಗೇಂದ್ರ, ಜಮೀರ್ ಅಹಮ್ಮದ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಹಿರಿಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಾಸಕರುಗಳಾದ ಗವಿಯಪ್ಪ, ಗಣೇಶ್, ಭರತ್ ರೆಡ್ಡಿ, ಡಾ.ಶ್ರೀನಿವಾಸ್. ಮಾಜಿ ಶಾಸಕರುಗಳಾದ  ಪಿ.ಟಿ.ಪರಮೇಶ್ವರ ನಾಯ್ಕ, ಭೀಮಾನಾಯ್ಕ, ಕೆ.ಎಸ್.ಎಲ್ ಸ್ವಾಮಿ, ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು, ಮುಖಂಡರ  ಸಹಕಾರದಿಂದ ಗೆಲುವೆಗೆ ಶ್ರಮಿಸುವೆ. ಮತದಾರ ಬದಲಾವಣೆ ಬಯಸಿದ್ದಾನೆ. ಈ ಹಿಂದೆ ಈ ಕ್ಷೇತ್ರದಿಂದ ಸಂಸದರಾಗಿದ್ದ ಸೋನಿಯಾಗಾಂಧಿ,  ಬಸವರಾಜೇಶ್ವರಿ, ಕೋಳೂರು ಬಸವನಗೌಡ, ಕೆ.ಸಿ.ಕೊಂಡಯ್ಯ ಅವರು‌ಕ್ಷೇತ್ರದ ಅಭಿವೃದ್ಧಿ ಮಾಡಿದ್ದನ್ನು ಸ್ಮರಿಸಬಹುದು. ಕಳೆದ ಹತ್ತು ವರ್ಷದಲ್ಲಿ ಬಿಜೆಪಿ ಇಲ್ಲಿ ಏನು ಅಭಿವೃದ್ಧಿ ಮಾಡಿಲ್ಲ. ಜನತೆಗೆ ನೀಡಿದ ಭರವಶೆಗಳನ್ನು ಈಡೇರಿಸಿಲ್ಲವೆಂದರು.
ಗ್ಯಾರೆಂಟಿ:
ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ  ನುಡಿದಂತೆ ನಡೆದು ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆ. ಈ ನಾಡಿನ ಪ್ರತಿಯೊಬ್ಬ ಮಹಿಳೆ ಇದರ ಲಾಭ ಪಡೆದಿದ್ದಾರೆ. ಅವರ ಮತ ಕಾಂಗ್ರೆಸ್ ಗೆ ಎಂಬ ಗ್ಯಾರೆಂಟಿ ಇದೆಂದರು.
ಪಕ್ಷದ ತೀರ್ಮಾನಕ್ಕೆ ಬದ್ದನಾಗಿದ್ದೇನೆ:
ನನಗೇ ಯಾಕೆ ಮತನೀಡಬೇಕು:
ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ತಿರಸ್ಕರಿಸಿ ನನಗೇ ಯಾಕೆ ಮತ ನೀಡಬೇಕು ಎಂಬುದಕ್ಕೆ.  ನಾಲ್ಕು ಬಾರಿ  ಶಾಸಕನಾಗಿ
ನಂಜುಂಡಪ್ಪ ವರದಿಯಲ್ಲಿ ರಾಜ್ಯದಲ್ಲೇ ಅತಿ ಹಿಂದುಳಿದ ತಾಲೂಕಾಗಿದ್ದ ಸಂಡೂರು ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ವ್ಯವಸ್ಥೆ ಸುಧಾರಣೆ ಮಾಡಿರುವುದನ್ನು ನೋಡಲಿ. 
ಎಸ್ಟಿಗೆ ಮೀಸಲಾದ ಕ್ಷೇತ್ರದಲ್ಲಿ ಕಾನೂನು  ಸುವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಬಾರದಂತೆ ಎಲ್ಲರನ್ನು ಸಮಾನವಾಗಿ ಕಂಡಿದೆ ಎಂಬುದನ್ನು ಕಂಡು ಲೋಕಸಭಾ ಕ್ಷೇತ್ರದ ಮತದಾರರು ನನಗೆ ಮಾತನೀಡಲಿದ್ದಾರೆಂಬ ವಿಶ್ವಾಸ ನನ್ನದು.ನಾವು ಡಬಲ್ ಇಂಜನ್ ಸರ್ಕಾರ ಮಾಡಬೇಕೆಂದಿದ್ದೇವೆಂದರು.
ಗೆಲುವು ಮುಖ್ಯ:
ಈ ಚುನಾವಣೆಯಲ್ಲಿ ನಮಗೆ ಗೆಲುವು ಮುಖ್ಯ, ಗೆಲುವಿನ ಅಂತರದ ಬಗ್ಗೆ ಮಾತನಾಡಲಾರೆ. ಈ ಹಿಂದೆ 2008 ರಲ್ಲಿ ಎನ್.ವೈ.ಹನಮಂತಪ್ಪ ಅವರು ಕೆಲವೇ ಮತಗಳ ಅಂತರದಲ್ಲಿ ಸೋಲು ಕಂಡರೂ ವಾಸ್ತವದಲ್ಲಿ ಅದು ನಮ್ಮ ಗೆಲುವಾಗಿತ್ತು ಎಂದರು.