ಕೇವಲ 10 ವರ್ಷದಲ್ಲಿ ನರೇಂದ್ರ ಮೋದಿ 173 ಲಕ್ಷ ಕೋಟಿ ಸಾಲ ಮಾಡಿದ್ದಾರೆ:ಲಾಡ್ ಆರೋಪ
ಸಂಜೆವಾಣಿ ವಾರ್ತೆ
ಸಂಡೂರು: ಮಾ:29  ದೇಶದಲ್ಲಿ 16 ಪ್ರಧಾನಿಗಳು ಅಡಳಿತ ನಡೆಸಿದಾಗ ಮಾಡಿದ ಸಾಲ ಕೇವಲ 55 ಲಕ್ಷ ಕೋಟಿ, ಕೇವಲ 10 ವರ್ಷದಲ್ಲಿ ನರೇಂದ್ರ ಮೋದಿಯವರು ಮಾಡಿದ ಸಾಲ 173 ಲಕ್ಷ ಕೋಟಿ ಸಾಲವನ್ನು ಮಾಡುವ ಮೂಲಕ ಈ ದೇಶದ ಸಾಮಾನ್ಯರಿಗೆ ಸಾಲದ ಹೊರೆಯನ್ನು ಹೊರಿಸಿರುವ ಬಿಜೆಪಿ ಸರ್ಕಾರ ಬೇಕೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಪ್ರಶ್ನಿಸಿದರು.
ಅವರು ಪಟ್ಟಣದ ಶಾಸಕರ ಕಛೇರಿಯ ಅವರಣದಲ್ಲಿ ಚುನಾವಣಾ ಪೂರ್ವಭಾವಿ ಸಭೆಯನ್ನುಉದ್ಘಾಟಿಸಿ ಮಾತನಾಡಿ ಯುವಕರಿಗೆ ಬರೀ ಮೋದಿ, ಪಾಕಿಸ್ತಾನ, ರಾಮ ಮಂದಿರ ಎಂದು ತುಂಬುತ್ತಾ ಹೊರಟಿದ್ದಾರೆ ವಿನಹ ದೇಶದ ಪ್ರಗತಿ, ಮಾಡಿದ ಸಾಲ, ನಿರುದ್ಯೋಗ ಸಮಸ್ಯೆ ಎಲ್ಲಿಯೂ ಪ್ರಸ್ತಾಪವಾಗುತ್ತಿಲ್ಲ ದೇಶದ ರೂಪಾಯಿ ಮೌಲ್ಯ ಬಾಂಗ್ಲಾ ದೇಶ, ಪಾಕಿಸ್ತಾನಕ್ಕಿಂತಲೂ ಕೆಳಗೆ ಇಳಿದಿದೆ, ಪೆಟ್ರೋಲ್, ಡಿಜಿಲ್, ಗ್ಯಾಸ ಬೆಲೆ ಗಗನಕ್ಕೇರಿದೆ, ಅದಾನಿಯಂತಹ ಕಂಪನಿಗಳ 145000 ಕೋಟಿ ಸಾಲಮನ್ನಾ ಮಾಡಿದ್ದಾರೆ, ಅದರೆ ಈ ದೇಶದ ಅನ್ನದಾತನ ನಯಾಪೈಸೆ ಸಾಲಾ ಮನ್ನಾ ಅಗಿಲ್ಲ ಬದಲಿಗೆ ಬೆಲೆ ಏರಿಕೆಯಗಿದೆ, ಅದರೆ ಸಿದ್ದರಾಮಯ್ಯ ಸರ್ಕಾರ ನೇರವಾಗಿ ತಲುಪುವ ರೀತಿಯಲ್ಲಿ ಕೃಷಿಭಾಗ್ಯ, ಗೃಹಲಕ್ಷ್ಮೀ, ಸಾಲಾಮನ್ನಾ ಮಾಡುವ ಮೂಲಕ ರೈತರ ಹಿತ ಕಾಪಾಡಿದ್ದೇವೆ, ಈ ದೇಶದಲ್ಲಿ ಬಡವರ ಉದ್ದಾರಕ್ಕಾಗಿಯೇ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ಪ್ರತಿ ಕೆಲಸಗಾರನು ವಲಸೆ ಹೋಗದ ರೀತಿ ಮನಮೋಹನ್‍ಸಿಂಗ್ ಮಾಡಿದ್ದರು ಅದರೆ 2 ಕೋಟಿ ಉದ್ಯೋಗ ಎಂದವರು ಎಲ್ಲಿಯು ಬಾಯಿ ಬಿಡುತ್ತಿಲ್ಲ ಬಿಜೆಪಿಯ ಮೋದಿ, ಇಂದಿರಾಗಾಂಧಿಯವರು ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷದಂತಹ ಪಿಂಚಣೆ ಯೋಜನೆಗಳನ್ನು ಜಾರಿಗೆ ತಂದು ತಳಮಟ್ಟದ ಬಡವರನ್ನು ರಕ್ಷಿಸಿದ್ದು ಕಾಂಗ್ರೇಸ್ ಸರ್ಕಾರ, ಶ್ರೀಮಂತರಿಗೆ ಕೊಡುವ ಸಾಲದ ಬಡ್ಡಿ ದರವನ್ನು 16 ರಿಂದ 12% ಗೆ ಇಳಿಸಿದರು, ಅದರೆ ರೈತರಿಗೆ ಸೊನ್ನೆ ಸುತ್ತಿದ್ದು ಬಿಜೆಪಿ ಸರ್ಕಾರ,ಸಾಮಾನ್ಯರು ಮದುವೆ ಮಾಡಿಕೊಳ್ಳಲು ಬಂಗಾರ ಕೊಳ್ಳುವಂತಿಲ್ಲ ಕಾರಣ 6 ಸಾವಿರ ಇದ್ದ 10 ಗ್ರಾಂ ಧರ ಈಗ 65 ಸಾವಿರಕ್ಕೆ ಏರಿದೆ, ಹಾಲಿನ ಬೆಲೆ ಎರಿಕೆ ಕುಡಿಯುವ ಟೀಪುಡಿ ಬೆಲೆ, ಬೆಲ್ಲದ ಬೆಲ ಗಗನಕ್ಕೇರಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ, ಅದರೆ ಇಂದು ಯುವಕರನ್ನು ದಾರಿ ತಪ್ಪಿಸುವ ರೀತಿಯಲ್ಲಿ ಹಿಂದೂ, ದೇಶ ರಕ್ಷಣೆ ಎಂದು ಹೇಳುವ ಇವರು ಪ್ರತಿ ವರ್ಷ ಸಾವಿರಾರು ಮಹಿಳೆಯರು ಕಾಣೆಯಾಗುತ್ತಾರೆ ಇದನ್ನು ಕೇಳುವವರೇ ಇಲ್ಲವಾಗಿದೆ, ಇನ್ನೂ ಚೀನಾದವರು 4 ಸಾವಿರ ಕಿ.ಲೋ ಮೀಟರ್ ಒಳಗೆ ಬಂದಿದ್ದಾರೆ ಇದನ್ನು ಕೇಳುವವರಿಲ್ಲ ಮತು ಎತ್ತಿದರೆ ಬರೀ ಮೋದಿ ಎನ್ನುತ್ತಿದ್ದಾರೆ ದೇಶದ ಪ್ರಗತಿ, ಬಡವರ ಗೋಳು ಕೇಳುವವರು ಯಾರು ಅದ್ದರಿಂದ ಸಂವಿಧಾನ ಉಳಿಯಬೇಕಾದರೆ ಪ್ರತಿಯೊಬ್ಬರೂ ಪ್ರಜಾಪ್ರಭುತ್ವದಲ್ಲಿ ಇರಬೇಕಾದರೆ ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಬಳ್ಳಾರಿ ಜಿಲ್ಲಾ ಅಧಿಕೃತ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಶಾಸಕ ಈ.ತುಕರಾಂ ಅವರು ಮಾತನಾಡಿ ಸಂತೋಷ್ ಲಾಡ್ ಅವರು ಪೂರ್ಣ ಬೆಂಬಲ ಹೈಕಮಾಂಡ್ ತೀರ್ಮಾನಕ್ಕೆ ಬದ್ದನಾಗಿ ಸ್ಪರ್ಧೆ ಮಾಡುತ್ತಿದ್ದೇನೆ ವಿನಹ: ವೈಯಕ್ತಿಕ ಆಸೆಯಿಂದ ಅಲ್ಲ, ಸಂಸತ್ತಿನಲ್ಲಿ ಶಿಕ್ಷಣ ಪಡೆದ ಪಕ್ಷ ನಿಷ್ಠೆ ಹೊಂದಿದ ವ್ಯಕ್ತಿಯನ್ನಾಗಿ ನನಗೆ ಒತ್ತಾಯದಿಂದ ಹೈಕಮಾಂಡ್ ನಿಲ್ಲಿಸಿದ ಅವರ ನಿರ್ಣಯದಂತ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆಮಾಡುತ್ತಿದ್ದು ಅದು ನೀವು ಕೊಟ್ಟ ಅಶೀರ್ವಾದದಿಂದ ನುಡಿದಂತೆ ನಡೆದಿದ್ದೇವೆ ಸಂವಿಧಾನಬದ್ದವಾಗಿ ಅಡಳಿತ ನೀಡಿದ್ದೇವೆ, ಕ್ಷೇತ್ರದ ಪ್ರಗತಿಗೆ ಶ್ರಮಿಸಿದ್ದೇವೆ ಅದೇ ರೀತಿ ಇಡೀ ಬಳ್ಳಾರಿ ಜಿಲ್ಲೆಯ ಅಭಿವೃದ್ದಿಗೂ ಶ್ರಮಿಸುತ್ತೇವೆ ಬಿಜೆಪಿಯವರಂತೆ ಸಉಳ್ಳು ಹೇಳಿ ರಾಜಕೀಯ ಮಾಡುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ ಮಾತನಾಡಿ ಸಂತೋಷ್ ಲಾಡ್ ಅವರ ನಿರಂತರ ಜನರ ಸೇವೆ, ತುಕರಾಂ ಅವರ ಅಭಿವೃದ್ದಿಯನ್ನು ಗುರುತಿಸಿದ ಪಕ್ಷ ಅವರಿಗೆ ಸ್ಪರ್ಧೆಗೆ ಇಳಿಸಿದೆ ನಾವೆಲ್ಲರೂ ಒಗ್ಗಟ್ಟಾಗಿ ಗೆಲ್ಲಿಸೋಣ ಎಂದರು, ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಜಿಲ್ಲಾಧ್ಯಕ್ಷ ಶಿವಯೋಗಿ, ಮಹಿಳಾ ಅಧ್ಯಕ್ಷೆ ಅಶಾಲತಾ ಸೋಮಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಚಿತ್ರಿಕಿ ಸತೀಶ್, ಏಕಾಂಬ್ರಪ್ಪ, ವಾಡಾ ಮಾಜಿ ಅಧ್ಯಕ್ಷ ರೋಷನ್, ಅಂಜುಮಾನ್ ಸಮಿತಿ ಅಧ್ಯಕ್ಷ ಹಸೇನ್, ಪುರಸಭೆಯ ಮಾಜಿ ಅಧ್ಯಕ್ಷೆ ಅನಿತಾ ವಸಂತಕುಮಾರ್, ಲಕ್ಷ್ಮಣ, ಜನಾರ್ಧನ್, ಜಿಲ್ಲಾಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಪುರಸಭೆಯ ಎಲ್ಲಾ ಸದಸ್ಯರುಗಳು, ಅಧ್ಯಕ್ಷರುಗಳು ಕಾಂಗ್ರೇಶ್ ಕಾರ್ಯಕರ್ತರು ಉಪಸ್ಥಿತರಿದ್ದರು.
One attachment • Scanned by Gmail